ಖಡಕ್ ಐಪಿಎಸ್ ಅಧಿಕಾರಿಯಾಗಿ ‘ರವಿ ಡಿ ಚೆನ್ನಣ್ಣ’ನವರು ಪಡೆಯುತ್ತಿರುವ ಸಂಬಳ ಎಷ್ಟು ಗೊತ್ತಾ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ತಾನು ಕಂಡ ಕನಸನ್ನು ಬೆನ್ನತ್ತಿ ಹಗಲಿರುಳ ಶ್ರಮವಹಿಸಿ ಗುರಿ ಸಾಧಿಸಿ ಇಂದು ಸಾರ್ವಜನಿಕ ಸೇವೆಯಲ್ಲಿ ತನ್ನದೇಯಾದಂತಹ ವಿಶಿಷ್ಟ ಛಾಪು ಮೂಡಿಸಿರುವ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿರುವ ಐ.ಪಿ.ಎಸ್.ಅಧಿಕಾರಿ ಆಗಿರುವ ರವಿ ಡಿ.ಚೆನ್ನಣ್ಣನವರ್ ಅವರು ಕಾರ್ಯ ವೈಖರಿ ಮೂಲಕ ನಾಡಿನ ಸಿಂಗಂ ಎಂದೇ ಹೆಸರು ವಾಸಿ ಆಗಿದ್ದಾರೆ.ಇಂದಿನ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಲಕ್ಷಾಂತರ ಯುವಕರಿಗೆ ರೋಲ್ ಮಾಡೆಲ್ ಆಗಿದ್ದಾರೆ ರವಿ.ಡಿ.ಚೆನ್ನಣ್ಣನವರ್. ಒಬ್ಬ ಸರ್ಕಾರಿ ಅಧಿಕಾರಿ ತಾನು ಮಾಡಬೇಕಾದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಾಕು ನಮ್ಮ ಜನ ಅವರನ್ನ ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ.ಅವರಿಗಾಗಿ ಮಿಡಿಯುತ್ತಾರೆ. ಅಂತೆಯೇ ಬೆಳಗಾಂ,ಧಾರವಾಡ,ದಾವಣಗೆರೆ,ಹಾಸನ,ಶಿವಮೊಗ್ಗ ಬೆಂಗಳೂರು,ಬೆಂಗಳೂರು ಗ್ರಾಮಾಂತರ ಹೀಗೆ ರಾಜ್ಯದ ನಾನಾ ಕಡೆ ತಮ್ಮ ಪ್ರಾಮಾಣಿಕ ಸೇವೆಯಿಂದ ರಾಜ್ಯಾದ್ಯಂತ ಅಪಾರ ಜನ ಮೆಚ್ಚುಗೆ ಪಡೆದಿರುವ ರವಿ.ಡಿ.ಚೆನ್ನಣ್ಣನವರ್ ಅವರು ಬೆಳೆದು ಬಂದ ಹಾದಿ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ತಮ್ಮ ಜನಸೇವಾ ಕರ್ತವ್ಯದ ಜೊತೆ ಜೊತೆಗೆ ಆಗಾಗ ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾರೆ.ರಾಜ್ಯದ ಹಲವೆಡೆ ಇವರ ಹೆಸರಲ್ಲಿ ಸಂಘಗಳು ಕೂಡ ಇವೆ.ಈ ಸಂಘದ ಮೂಲಕ ಒಂದಷ್ಟು ಸಾಮಾಜಿಕ ಕಳಕಳಿ ಕೆಲಸಗಳು ಕೂಡ ನಡೆಯುತ್ತವೆ.ಇವರಿಗೆ ಆಗಾಗ ರವಿ ಅವರು ಉತ್ತಮ ಮಾರ್ಗದರ್ಶನ ಕೂಡ ಮಾಡುತ್ತಾರೆ.ಜೊತೆಗೆ ಕೆಲವು ಶಾಲಾ-ಕಾಲೇಜು,ಸಂಘ-ಸಂಸ್ಥೆಗಳು,ಖಾಸಗಿ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಭಾಗವಹಿಸುವ ರವಿ ಅವರು ಕೇವಲ ನಾಗರೀಕ ಸೇವೆ ಪರೀಕ್ಷೆಯ ಬಗ್ಗೆ ಮಾತ್ರ ಪಾಠ ಮಾಡುವುದಿಲ್ಲ.ಅದರ ಹೊರತಾಗಿ ಜೀವನದ ಮೌಲ್ಯ ಆದರ್ಶಗಳ ಬಗ್ಗೆ ಮಾತಾಡುತ್ತಾರೆ.ಅವರ ಎಷ್ಟೋ ಸ್ಪೂರ್ತಿದಾಯ ಮಾತುಗಳು ಯುವಕರನ್ನ ಸಾಧನೆಯತ್ತ ಮುನ್ನುಗ್ಗುವಂತೆ ಪ್ರೋತ್ಸಾಹ ಮಾಡುತ್ತವೆ.

ಜೊತೆಗೆ ಯುವಕರಿಗೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳೇ ಜೀವನದ ಸಾಧನೆಯಲ್ಲ.ವಿವಿಧ ಕ್ಷೇತ್ರಗಳಲ್ಲಿಯೂ ಕೂಡ ಮಹತ್ತರ ಸಾಧನೆ ಮಾಡುವ ಅವಕಾಶಗಳಿವೆ.ಅವುಗಳನ್ನ ಕಂಡುಕೊಳ್ಳಿ ಎಂದು ಫೇಲಾದ ಯುವಕರಿಗೂ ಕೂಡ ಹುಮ್ಮಸ್ಸಿನ ದಾರಿ ತಿಳಿಸಿ ಅವರಿಗೆ ಆತ್ಮವಿಶ್ವಾಸ ತುಂಬುತ್ತಾರೆ.ಅವರೇ ಹೇಳುವಂತೆ ಅವರಿಗೆ ಸರ್ಕಾರ ನೀಡುವ ವೇತನ ಒಂದು ಲಕ್ಷದ ಐದು ಸಾವಿರ.ರೂ.ಮಾತ್ರ .ಜೊತೆಗೆ ಇರಲು ಬಂಗಲೆ,ಕಾರು,ಸಿಬ್ಬಂದಿ ವರ್ಗ ಇರುತ್ತದೆ ಎಂದು ತಮ್ಮ ಬದುಕಿನ ಜೀವನ ಶೈಲಿಯ ಬಗ್ಗೆ ಹೇಳಿಕೊಂಡಿದ್ದಾರೆ.ಒಟ್ಟಾರೆಯಾಗಿ ಬಡತನ ಕಂಡ ರವಿ.ಡಿ.ಚೆನ್ನಣ್ಣನವರಿಗೆ ಸಾರ್ವಜನಿಕ ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನ ಇತರರಿಗೆ ಆದರ್ಶವಾಗುವಂತೆ ತ್ರಿವೇಣಿಯವರನ್ನ ಮದುವೆಯಾಗಿ ಒಂದು ಮಗುವಿನೊಟ್ಟಿಗೆ ಸುಂದರ ಬದುಕನ್ನ ಕಟ್ಟಿಕೊಂಡಿದ್ದಾರೆ.

Leave a Reply

%d bloggers like this: