ಕೆಜಿಎಫ್ 2 ಹಿಂದಿಯಲ್ಲಿ ರಾಖಿ ಭಾಯ್ ಪಾತ್ರಕ್ಕೆ ಕಂಠದಾನ ಮಾಡಿದ್ದುಇವರೇ

ಕೆಜಿಎಫ್ 2 ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ,ಹಿಂದಿ, ತೆಲುಗು,ತಮಿಳು,ಮಲಯಾಳಂ ಭಾಷೆಗಳಲ್ಲಿ ಜುಲೈ 16ರಂದು ಏಕಕಾಲಕ್ಕೆ ಬಿಡುಗಡೆ ಆಗ್ತಿದೆ.ಕೆಜಿಎಫ್ 2 ಡಬ್ಬಿಂಗ್ ವರ್ಷನ್‌ಗೆ ಸಖತ್ ಡಿಮಾಂಡ್ ಇದ್ದು,ಬಹುಕೋಟಿ ಹಣಕ್ಕೆ ಕೆಜಿಎಫ್ 2 ನ ಇತರೆ ಭಾಷೆಗಳ ಸಿನಿಮಾ ಪ್ರದರ್ಶನ ಹಕ್ಕು ಮಾರಾಟವಾಗಿದೆ.ಕೆಜಿಎಫ್ 2 ಹಿಂದಿಯ ಬಿಡುಗಡೆ ಹಕ್ಕನ್ನು ಖ್ಯಾತ ನಟ,ನಿರ್ದೇಶಕ ಫರ್ಹಾನ್ ಖಾನ್ ಅವರ ಎಕ್ಸೆಲ್ ಎಂಟರ್ಟೈನ್‌ಮೆಂಟ್ ಪಡೆದುಕೊಂಡಿದೆ.ಕೆಜಿಎಫ್ 2 ಸಿನಿಮಾದ ಡಬ್ಬಿಂಗ್ ಈಗ ಪ್ರಾರಂಭವಾಗಲಿದ್ದು,ಹಿಂದಿ ಭಾಷೆಯಲ್ಲಿ ಯಶ್ ಪಾತ್ರಕ್ಕೆ ಕಂಠದಾನ ಮಾಡುವುದು ಯಾರು ಎಂಬುದೀಗ ಕುತೂಹಲ ಕೆರಳಿಸಿದೆ.

ಕೆಜಿಎಫ್ ಮೊದಲ ಚಾಪ್ಟರ್ ಕೂಡ ಹಿಂದಿಗೆ ಡಬ್ ಆಗಿತ್ತು.ಆದರೆ ಆ ಸಿನಿಮಾದಲ್ಲಿ ರಾಖಿ ಭಾಯ್ ಪಾತ್ರಕ್ಕೆ ಬೇರೆಯವರು ಕಂಠದಾನ ಮಾಡಿದ್ದರು.ಆದರೆ ಈ ಬಾರಿ ಕೆಜಿಎಫ್ 2 ಸಿನಿಮಾಕ್ಕೆ ಸ್ವತಃ ಯಶ್ ಅವರೇ ಧ್ವನಿ ನೀಡಲಿದ್ದಾರೆ.ಹೌದು ಬರೀ ಹಿಂದಿ ಅಲ್ಲದೇ ತಮಿಳು, ತೆಲುಗಿಗೂ ಯಶ್ ಅವರೇ ಡಬ್ ಮಾಡಲಿದ್ದಾರೆ.ನಿಜ,ಯಶ್ ಅವರಿಗೆ ಹಿಂದಿ,ತಮಿಳು,ತೆಲುಗು ಮಾತಾಡಲು ಬರುತ್ತದೆ.ಹಾಗಾಗಿ ಹಿಂದಿ,ತಮಿಳು,ತೆಲುಗಿಗೂ ಯಶ್ ಧ್ವನಿ ನೀಡಲಿದ್ದಾರೆ.ಆದರೆ ಮಲಯಾಳಂ ಭಾಷೆ ಯಶ್‌ಗೆ ಬರದ ಕಾರಣ ಮಲಯಾಳಂನ ಬೇರೆಯವರು ಧ್ವನಿ ನೀಡಲಿರುವುದಾಗಿ ಚಿತ್ರತಂಡ ತಿಳಿಸಿದೆ.

ಕಲಾವಿದರು ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡುವುದರಿಂದ ಸಹಜತೆ ಹೆಚ್ಚುತ್ತದೆ.ಯಶ್ ಅವರೇ ನಾಲ್ಕು ಭಾಷೆಗಳಿಗೆ ಡಬ್ ಮಾಡ್ತಿರುವುದರಿಂದ ಕೆಜಿಎಫ್ ೨ ದುಬ್ಬಟ್ಟು ಯಶಸ್ಸು ಕಾಣುತ್ತಾ ಕಾದು‌ ನೋಡೋಣ.ಕೆಜಿಎಫ್ ೨ರಲ್ಲಿ ಯಶ್ ಜೊತೆ ಸಂಜಯ್ ದತ್,ರವೀನಾ ತಂಡನ್ ಮುಂತಾದ ದಿಗ್ಗಜರ ತಾರಾಗಣ ಇದೆ.1999ರಲ್ಲಿ ಬಿಡುಗಡೆ ಆದ ಉಪೇಂದ್ರ ಚಿತ್ರ ಹಾಗೂ ರವಿಚಂದ್ರನ್ ಅವರ ಬಿಡುಗಡೆ ಆಗದ ಶಕುನಿ ಚಿತ್ರದ ನಂತರ ರವೀನಾಗೆ ಕೆಜಿಎಫ್೨ ಕನ್ನಡದ ಮೂರನೇ ಚಿತ್ರ ಆಗಲಿದೆ.

Leave a Reply

%d bloggers like this: