KGF ವಿಲನ್ ಅವಿನಾಶ್ ಅವರ ಪತ್ನಿ ಯಾರು ಗೊತ್ತಾ? ಹೇಗಿದ್ದಾರೆ ನೋಡಿ ಮೊದಲ ಸಲ

ಕನ್ನಡ ಚಿತ್ರರಂಗದ ಗೋಲ್ಡನ್ ಸಿನಿಮಾ ಕೆ.ಜಿ.ಎಫ್ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿತು. ಕೆ.ಜಿ.ಎಫ್. ಸಿನಿಮಾ ಕೇವಲ ಸಿನಿಮಾ ಮಾತ್ರ ಆಗಿರಲಿಲ್ಲ, ದೃಶ್ಯ ಕಾವ್ಯವಾಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಂಡಿತ್ತು. 2018 ರಲ್ಲಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರ್ ಬರೋಬ್ಬರಿ 80 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿತ್ತು. ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪಂಚ ಭಾಷೆಗಳಲ್ಲಿ ತೆರೆಕಂಡಿತ್ತು.ಆದ ಕಾರಣ ಕರ್ನಾಟಕದಲ್ಲಿ ಮಾತ್ರ ಜನಪ್ರಿಯ ನಟರಾಗಿದ್ದ ರಾಕಿಂಗ್ ಸ್ಟಾರ್ ಯಶ್ ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ವಿಶ್ವದ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಸಿನಿಮಾ ಕೆಜಿಎಫ್. ಈ ದೃಶ್ಯ ಕಾವ್ಯದ ರುವಾರಿಯಾಗಿ ಕೆಲಸ ಮಾಡಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಹೌದು ಪ್ರಶಾಂತ್ ನೀಲ್ ಅವರಿಗೆ ಕೆಜಿಎಫ್ ಸಿನಿಮಾ ಎರಡನೇ ಚಿತ್ರ.

ಇದಕ್ಕೂ ಮೊದಲು ಉಗ್ರಂ ಎಂಬ ಫುಲ್ ಮಾಸ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಉಗ್ರಂ ಚಿತ್ರ ಶ್ರೀ ಮುರುಳಿ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಪುನರ್ ಜನ್ಮ ನೀಡಿತು ಎಂದೇ ಹೇಳಬಹುದು. ಈ ಕೆಜಿಎಫ್ ಸಿನಿಮಾ ಅವರನ್ನು ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲದೆ ಹಾಲಿವುಡ್ ನಲ್ಲಿ ಕೂಡ ಅವರ ಹೆಸರು ಪ್ರಸಿದ್ದವಾಯಿತು. 80 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಕೆಜಿಎಫ್ ಚಿತ್ರ ಬರೋಬ್ಬರಿ 250 ಕೋಟಿ ರೂ.ದಾಖಲೆಯ ಕಲೆಕ್ಷನ್ ಮಾಡಿತ್ತು. ತದ ನಂತರ ಇದರ ಮುಂದುವರೆದ ಭಾಗವಾಗಿ ಕೆಜಿಎಫ್ 2 ಸಿನಿಮಾದ ಶೂಟಿಂಗ್ ಮುಗಿದಿದ್ದು,ಇದೂ ಕೂಡ ಬರೋಬ್ಬರಿ ನೂರು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ತಯಾರಾಗಿದೆ. ಈ ಕೆಜಿಎಫ್ 2 ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ರವೀನಾ ಟಂಡನ್, ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಬಹುಭಾಷಾ ನಟ ಪ್ರಕಾಶ್ ರೈ ರಂತಹ ದಿಗ್ಗಜ ನಟರು ನಟಿಸಿದ್ದಾರೆ.

ಇನ್ನು ಈ ಕೆ.ಜಿ.ಎಫ್ ಸಿನಿಮಾದಲ್ಲಿ ನಟಿಸಿದ್ದಂತಹ ಅನೇಕ ನಟ-ನಟಿಯರು ಮತ್ತು ತಂತ್ರಜ್ಞರಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಯಿತು. ಅಂತೆಯೇ ಕೆಜಿಎಫ್ ಕರಾಚಿ ಸಾಮ್ರಾಜ್ಯದಲ್ಲಿ ಖಳ ನಟರಾಗಿ ಮಿಂಚಿದವರ ಪೈಕಿ ಅವಿನಾಶ್ ಕೂಡ ಒಬ್ಬರಾಗಿದ್ದಾರೆ. ಮೂಲತಃ ಉದ್ಯಮಿಯಾಗಿದ್ದ ಅವಿನಾಶ್ ಅವರು ವಿಭಿನ್ನ ವ್ಯಕ್ತಿತ್ವ ವೊಂದಿದ್ದವರಾಗಿದ್ದಾರೆ. ಸ್ನೇಹಿತರೊಟ್ಟಿಗೆ ಹೆಚ್ಚು ಕಾಲ ಕಳೆಯಲು ಇಷ್ಟ ಪಡುತ್ತಾರೆ. ಸಂಗೀತ ಎಂಬುವರೊಟ್ಟಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಇವರಿಗೆ ಒಬ್ಬ ಗಂಡು ಮಗನಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಆಕಸ್ಮಿಕವಾಗಿ ಸಿಕ್ಕಂತಹ ಅವಿನಾಶ್ ಅವರಿಗೆ ಕೆ.ಜಿ.ಎಫ್ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ. ಇದೀಗ ಕೆ.ಜಿ.ಎಫ್.ಚಾಪ್ಟರ್ 2.ಸಿನಿಮಾದಲ್ಲಿಯೂ ಕೂಡ ಖಳ ನಟ ಅವಿನಾಶ್ ಅವರು ಆರ್ಭಟಿಸಲಿದ್ದಾರೆ.

Leave a Reply

%d bloggers like this: