ಕೆಜಿಎಫ್ ನಂತರ ತಮಿಳು ಚಿತ್ರ ಮಾಡಿದ ನಟಿ ಶ್ರೀನಿಧಿ ಶೆಟ್ಟಿ ಅವರು ಅಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತೇ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ಚಿಯಾನ್ ವಿಕ್ರಮ್ ಮತ್ತು ಕೆಜಿಎಫ್ ಸಿನಿಮಾ ಖ್ಯಾತಿಯ ನಟಿ ಶ್ರೀ ನಿಧಿ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೋಬ್ರಾ ಇಂದು ಆಗಸ್ಟ್ 31ರಂದು ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಟ್ರೇಲರ್ ನೋಡಿದಾಗಿನಿಂದ ವಿಕ್ರಂ ಅವರ ನಟನೆಗೆ ಫಿಧಾ ಆಗಿ ಕೋಬ್ರಾ ಸಿನಿಮಾವನ್ನ ಯಾವಾಗ ಕಣ್ತುಂಬಿಕೊಳ್ಳುತ್ತೇವೆ ಎಂದು ಕಾತುರದಿಂದ ಕಾಯುತ್ತಿದ್ದರು. ಅದರಂತೆ ಇಂದು ವಿಕ್ರಂ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ವಿಕ್ರಂ ಅವರ ವಿವಿಧ ವೇಷಗಳಲ್ಲಿ ನಟಿಸಿರುವ ಕೋಬ್ರಾ ಸಿನಿಮಾವನ್ನ ಕಣ್ತುಂಬಿಕೊಂಡಿದ್ದಾರೆ. ವಿಕ್ರಮ್ ಅಭಿಮಾನಿಗಳು ಕೋಬ್ರಾ ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ಆದರೆ ಸಾಮಾನ್ಯ ಪ್ರೇಕ್ಷಕರು ಕೋಬ್ರಾ ಸಿನಿಮಾಗೆ ಸಾಧಾರಣ ಪ್ರತಿಕ್ರಿಯೆ ನೀಡಿದ್ದಾರೆ.

ಕೋಬ್ರಾ ಚಿತ್ರದ ಪ್ರಚಾರವನ್ನು ಸಿನಿಮಾ ತಂಡ ಭರ್ಜರಿಯಾಗಿ ಮಾಡಿತ್ತು. ಅದರಂತೆ ಬೆಂಗಳೂರಿನ ಕೋರಮಂಗಲ ಫೋರಂ ಗೆ ಬಂದಿದ್ದ ವಿಕ್ರಮ್, ಶ್ರೀ ನಿಧಿ ಶೆಟ್ಟಿ ಅವರನ್ನ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಕೋಬ್ರಾ ಆಕ್ಷನ್ ಥ್ರಿಲ್ಲರ್, ಸೈನ್ಸ್ ಫಿಕ್ಷನ್ಸ್ ಸಿನಿಮಾವಾಗಿದ್ದು, ನಾನು 8 ರಿಂದ 9ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಟ ವಿಕ್ರಮ್ ಹೇಳಿದ್ದರು. ಇನ್ನು ನಟಿ ಶ್ರೀನಿಧಿ ಶೆಟ್ಟಿ ಅವರು ಮಾತನಾಡಿ ನಾನು ಈ ಸಿನಿಮಾಗೆ ಕನ್ನಡದಲ್ಲಿ ಡಬ್ ಮಾಡಿದ್ದೇನೆ. ಅದಕ್ಕೋಸ್ಕರ ಆದ್ರೂ ಕನ್ನಡ ಸಿನಿ ಪ್ರೇಕ್ಷಕರು ಈ ಚಿತ್ರ ನೋಡಬೇಕು ಎಂದು ಮನವಿ ಮಾಡಿದ್ರು. ವಿಶೇಷ ಪಾತ್ರದಲ್ಲಿ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಣ್ ಕೂಡ ನಟಿಸಿದ್ದಾರೆ. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಚಿತ್ರವನ್ನು ಲಲಿತ್ ಕುಮಾರ್ ನಿರ್ಮಾಣ ಮಾಡಿದ್ದು, ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಒಟ್ಟಾರೆಯಾಗಿ ಕೋಬ್ರಾ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಯಾವ ರೀತಿ ಕಲೆಕ್ಷನ್ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಇನ್ನು ಕೆಜಿಎಫ್ ನಂತರ ನಟಿ ಶ್ರೀನಿಧಿ ಶೆಟ್ಟಿಗೆ ಇದು ಎರಡನೇ ಹಾಗೂ ದೊಡ್ಡ ಚಿತ್ರವಾಗಿದ್ದು ಈ ಮೂಲಕ ಶ್ರೀನಿಧಿ ಶೆಟ್ಟಿ ಅವರು ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ಶ್ರೀನಿಧಿ ಶೆಟ್ಟಿ ಅವರು ಈ ಕೋಬ್ರಾ ಚಿತ್ರಕ್ಕೆ ಒಂದು ಕೋಟಿ ರೂಪಾಯಿಯ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಎರಡನೇ ಚಿತ್ರಕ್ಕೆ ಕೋಟಿಯಷ್ಟು ಸಂಭಾವನೆ ಪಡೆಯೋದು ಸಾಧನೆಯೇ ಸರಿ. ಇನ್ನು ಈ ಚಿತ್ರದ ಮೊದಲ ದಿನದ ರಿವ್ಯೂ ಬಂದಿದ್ದು ಅಭಿಮಾನಿಗಳು ವಿಕ್ರಂ ಅವರ ನಟನೆಯನ್ನು ಮೆಚ್ಚಿದ್ದಾರೆ.

Leave a Reply

%d bloggers like this: