ಕೆಜಿಎಫ್ ನಂತರ ಮತ್ತೊಂದು ದಕ್ಷಿಣ ಭಾರತದ ಚಿತ್ರದಲ್ಲಿ ಸಂಜಯ್‌ ದತ್, ಪಡೆದ ಸಂಭಾವನೆ ಎಷ್ಟು ಗೊತ್ತೇ

ಬಾಲಿವುಡ್ ದಾದಾ ಸಂಜಯ್ ದತ್ ಮತ್ತೆ ದಕ್ಷಿಣ ಭಾರತದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ಥಿಯೊಂದು ಇದೀಗ ಹೊರ ಬಿದ್ದಿದೆ. ಸದ್ಯಕ್ಕೆ ಇದು ಬಿಟೌನ್ ನಲ್ಲಿ ಟ್ರೆಂಡಿಂಗ್ ಆಗಿದೆ. ಸಂಜಯ್ ದತ್ ಅವರಿಗೆ ಬಾಲಿವುಡ್ ಸಿನಿಮಾ ನೀಡುವಷ್ಟೇ ಕನ್ನಡದ ಕೆಜಿಎಫ್2 ಸಿನಿಮಾ ನೇಮು ಫೇಮು ನೀಡಿದೆ. ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಜಿಎಫ್ ಚಾಪ್ಟರ್2 ನಲ್ಲಿ ಅಧೀರನಾಗಿ ಆರ್ಭಟಿಸುವ ಮೂಲಕ ಸಂಜಯ್ ದತ್ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿನ ನಟನೆಗೆ ಸಂಜಯ್ ದತ್ ಅವರಿಗೆ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಇದೀಗ ಸಂಜಯ್ ದತ್ ಮತ್ತೊಂದು ಸೌತ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೌದು ಸಂಜಯ್ ದತ್ ಅವರು ಈ ಬಾರಿ ಕಾಣಿಸಿಕೊಳ್ತಿರೋದು ತಮಿಳು ಸಿನಿಮಾದಲ್ಲಂತೆ.

ಇತ್ತೀಚೆಗೆ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ನಿರ್ದೇಶನ ಮಾಡಿ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಹೊಸ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ನಟಿಸಲಿದ್ದಾರಂತೆ. ಲೋಕೇಶ್ ಕನಗರಾಜ್ ಅವರ ಈ ಹೊಸ ಪ್ರಾಜೆಕ್ಟ್ ನಲ್ಲಿ ನಾಯಕರಾಗಿರೋದು ಇಳಯ ದಳಪತಿ ವಿಜಯ್. ಯಶ್ ಎದುರು ತೊಡೆ ತಟ್ಟಿದ್ದ ಸಂಜಯ್ ದತ್ ಇದೀಗ ವಿಜಯ್ ಅವರ ಎದುರು ಘರ್ಜಿಸಲು ಸಜ್ಜಾಗಿದ್ದಾರಂತೆ. ಈಗಾಗಲೇ ಲೋಕೇಶ್ ಕನಗರಾಜ್ ಸಂಜಯ್ ದತ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರಂತೆ. ಚಿತ್ರದ ಕಥೆ ಕೇಳಿ ಸಂಜಯ್ ದತ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರ ಜೊತೆಗೆ ಈ ಹೊಸ ಚಿತ್ರದಲ್ಲಿ ನಟಿಸಲು ಸಂಜಯ್ ದತ್ ಹತ್ತು ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ತಮಿಳಿನ ಸ್ಟಾರ್ ನಟ ವಿಜಯ್ ಅವರಿಗೆ ದೇಶಾದ್ಯಂತ ಅಪಾರ ಅಭಿಮಾನಿವಲಯವಿದ್ದು, ವಿಕ್ರಮ್ ಸಿನಿಮಾದ ನಂತರ ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೂ ಕೂಡ ಪ್ಯಾನ್ ಇಂಡಿಯಾದಲ್ಲಿ ತಕ್ಕ ಮಟ್ಟಗೆ ಕ್ರೇಜ಼್ ಹೆಚ್ಚಾಗಿದೆ. ಹೀಗಾಗಿ ವಿಜಯ್ ಮತ್ತು ಲೋಕೇಶ್ ಕನಗರಾಜ್ ಅವರ ಬಹು ನಿರೀಕ್ಷಿತ ಸಿನಿಮಾ ಸಹಜವಾಗಿ ಹವಾ ಕ್ರಿಯೆಟ್ ಮಾಡಲಿದ್ದು, ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ವಿಲನ್ ಆಗಿ ಕಾಣಿಸಿಕೊಳ್ತಾರೆ ಅಂದ್ರೆ ಈ ಚಿತ್ರಕ್ಕೆ ಮತ್ತಷ್ಟು ಮೈಲಜ್ ಸಿಗೋದು ಗ್ಯಾರಂಟಿ ಅಂತ ಹೇಳ್ಬೋದು. ಇನ್ನು ಲೋಕೇಶ್ ಕನಗರಾಜ್ ಅವರ ಈ ಹೊಸ ಪ್ರಾಜೆಕ್ಟ್ ಗೆ ಇನ್ನೂ ಕೂಡ ಶೀರ್ಷಿಕೆ ಫೈನಲ್ ಆಗಿಲ್ಲ. ಸದ್ಯಕ್ಕೆ ಈ ಚಿತ್ರತಂಡದಿಂದ ವಿಲನ್ ಪಾತ್ರಕ್ಕೆ ಸಂಜಯ್ ದತ್ ಬರ್ತಿರೋದು ಲೇಟೆಸ್ಟ್ ಅಪ್ ಡೇಟ್ ಆಗಿದೆ.

Leave a Reply

%d bloggers like this: