ಕೆಜಿಎಫ್ ಚಾಪ್ಟರ್2 ಗಳಿಕೆ ಮಾಡಿರುವ ದಾಖಲೆ ಮುರಿಯುವ ಸನಿಹದಲ್ಲಿ ದಕ್ಷಿಣ ಭಾರತದ ಮತ್ತೊಂದು ದೊಡ್ಡ ಚಿತ್ರ

ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಾಜಮೌಳಿ ಅವರ ಆರ್.ಆರ್.ಆರ್ ಸಿನಿಮಾ ಇದೀಗ ಹೊಸದೊಂದು ದಾಖಲೆಗೆ ಹೆಜ್ಜೆ ಇಟ್ಟಿದೆ. ಹೌದು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್.ಟಿ‌.ಆರ್ ಅಭಿನಯದ ಮಲ್ಟಿ ಸ್ಟಾರರ್ ಚಿತ್ರ ಆರ್.ಆರ್.ಆರ್ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಪಂಚ ಭಾಷೆಗಳಲ್ಲಿ ತಯಾರಾಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದ ಥ್ರಿಬಲ್ ಆರ್ ಚಿತ್ರ ಬರೋಬ್ಬರಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಆರ್.ಆರ್.ಆರ್ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದಿಗೂ ಕೂಡ ಈ ಸಿನಿಮಾ ಓಟಿಟಿಯಲ್ಲಿ ಉತ್ತಮವಾಗಿ ಸಾಗುತ್ತಿದೆ.

ಆರ್.ಆರ್.ಆರ್ ಸಿನಿಮಾ ಈಗಾಗಲೇ 2023ರ ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಥ್ರಿಬಲ್ ಆರ್ ಸಿನಿಮಾ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಗೆ ನಾಮ ನಿರ್ದೇಶನ ಕೂಡ ಆಗಿದೆ ಎಂಬ ಸಿಹಿ ಸುದ್ದಿಯನ್ನ ಆರ್ ಆರ್ ಆರ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಆರ್.ಆರ್.ಆರ್ ಸಿನಿಮಾದಲ್ಲಿ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಸ್ಟಾರ್ ನಟರ ಜುಗಲ್ ಬಂದಿಯ ಜೊತೆಗೆ ಅಲಿಯಾ ಭಟ್, ಶ್ರೀಯಾ ಶರಣ್, ಅಜಯ್ ದೇವಗನ್, ಸಮುದ್ರ ಖನಿ, ರಾಹುಲ್ ರಾಮಕೃಷ್ಣ ಅಂತಹ ಕಲಾವಿದರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕೀರವಾಣಿ ಅವರ ರಾಗ ಸಂಯೋಜನೆ ಮಾತ್ರ ಸಿನಿಮಾಗೆ ಸಖತ್ ಮೈಲೇಜ್ ನೀಡಿತ್ತು.

ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ರಾಜಮೌಳಿ ಅವರ ಕಲ್ಪನಾ ಮಹಾಕಾವ್ಯವಾಗಿರುವ ಆರ್.ಆರ್.ಆರ್ ಸಿನಿಮಾ ಇದೇ ಅಕ್ಟೋಬರ್ 21ರಂದು ಜಪಾನ್ ದೇಶದಲ್ಲಿಯೂ ಕೂಡ ಅದ್ದೂರಿಯಾಗಿ ರಿಲೀಸ್ ಆಗಲಿದೆಯಂತೆ. ಈಗಾಗಲೇ ಜಪಾನ್ ದೇಶದಲ್ಲಿ ಕ್ರೇಜ಼್ ಹೊಂದಿರುವ ತಾರಕ್ ರಾಮ್ ಅವರು ಈ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯರಾಗಲಿದ್ದಾರೆ. ಜಪಾನ್ ನಲ್ಲಿ ಆರ್.ಆರ್.ಆರ್ ಚಿತ್ರ ರಿಲೀಸ್ ಆಗುತ್ತಿರುವುದಕ್ಕೆ ಜ್ಯುನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಇಬ್ಬರು ಸಖತ್ ಖುಷಿಯಾಗಿದ್ದಾರೆ. ಈಗಾಗಲೇ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಆರ್.ಆರ್.ಆರ್ ಚಿತ್ರ ಜಪಾನ್ ದೇಶದಲ್ಲಿ ಇನ್ನೆಷ್ಟು ಕಲೆಕ್ಷನ್ ಮಾಡಿ ಕೆಜಿಎಫ್ ಚಿತ್ರದ ದಾಖಲೆ ಮುರಿಯಲಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರವಾಗಿದೆ.

Leave a Reply

%d bloggers like this: