ಕೆಜಿಎಫ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಚಿತ್ರತಂಡ

ಕನ್ನಡದ ಗೋಲ್ಡನ್ ಸಿನಿಮಾ ಅಂತಾನೇ ಕರೆಸಿಕೊಂಡಿರುವ ಕೆಜಿಎಫ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಕಿರುತೆರೆಗೆ ಎಂಟ್ರಿ ಕೊಡಲಿದೆ. ಹೌದು ಕೆಜಿಎಫ್ ಈ ಶೀರ್ಷಿಕೆ ಕೇಳಿದಾಕ್ಷಣ ಒಮ್ಮೆಲೆ ಕಣ್ಮುಂದೆ ಆ ಅದ್ಭುತ ಸಿನಿಮಾ ಮೇಕಿಂಗ್, ಸಾವಿರಾರು ಜನ ಜ್ಯೂನಿಯರ್ ಆರ್ಟಿಸ್ಟ್, ನರಾಚಿ ಎಂಬ ನರಕ ಸಾಮ್ರಾಜ್ಯ ಈ ಎಲ್ಲವೂ ಹಾಗೇ ಕಣ್ಮಂದೆ ಹಾದು ಹೋಗುತ್ತದೆ. ಕನ್ನಡ ಚಿತ್ರರಂಗದಲ್ಲಿ ರಾಜಾಹುಲಿಯಾಗಿದ್ದ ರಾಕಿಂಗ್ ಸ್ಟಾರ್ ಅವರನ್ನ ರಾಷ್ಟ್ರಮಟ್ಟದಲ್ಲಿ ರಾಕಿಭಾಯ್ ಆಗಿ ಗುರುತಿಸಿಕೊಳ್ಳುವಂತೆ ಮಾಡಿದ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವದ ಚಿತ್ರರಂಗವೇ ನಿಬ್ಬೆರಗಣ್ಣಿನಿಂದ ನೋಡುವಂತೆ ಮಾಡಿತ್ತು. ಕೆಜಿಎಫ್ ಪಾರ್ಟ್ ಒನ್ ಮುಂದುವರಿದ ಭಾಗವಾಗಿ ಮೂಡಿಬಂದ ಕೆಜಿಎಫ್2.

ಸಿನಿಮಾ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿ ಬರೋಬ್ಬರಿ 1300 ಕೊಟಿಗೂ ಅಧಿಕ ಕಲೆಕ್ಷನ್ ಮಾಡಿ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರ ಹೊಸ ಮೈಲಿಗಲ್ಲನ್ನ ಸ್ಥಾಪಿಸಿದೆ. ಕೆಜಿಎಫ್2 ಚಿತ್ರ ಈ ರೀತಿಯ ಅಭೂತಪೂರ್ವ ಯಶಸ್ಸು ಪಡೆದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತೋ ನಿರ್ದೇಶಕ ಪ್ರಶಾಂತ್ ನೀಲ್ ಅವರೊಟ್ಟಿಗೆ ಸಿನಿಮಾ ಮಾಡಲು ಭಾರತೀಯ ಚಿತ್ರರಂಗದ ಸ್ಟಾರ್ ನಟರು ತುದಿಗಾಲಲ್ಲಿ ನಿಂತಿದ್ದಾರೆ. ಈ ಕೆಜಿಎಫ್2 ಚಿತ್ರ ಬಿಗ್ ಸಕ್ಸಸ್ ಕಂಡ ನಂತರ ಯಶ್ ಅವರಿಗೆ ಭಾರತ ಮಾತ್ರ ಅಲ್ಲದೆ ವರ್ಲ್ಡ್ ವೈಡ್ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇದೀಗ ಯಶ್ ಅವರ ಅಭಿಮಾನಿಗಳಿಗೆ ಸಖತ್ ಗುಡ್ ನ್ಯೂಸ್ ವೊಂದು ಹೊರ ಬಿದ್ದಿದೆ. ಅದೇನಪ್ಪಾ ಅಂದ್ರೆ ಈಗಾಗಲೇ ಕೆಜಿಎಫ್ ಪಾರ್ಟ್ ಒನ್ ಚಿತ್ರವನ್ನು ಕಲರ್ಸ್ ಕನ್ನಡ ಸ್ಯಾಟಲೈಟ್ ರೈಟ್ಸ್ ಪಡೆದು ಪ್ರಸಾರ ಮಾಡಿದೆ.

ಅದರಂತೆ ಇದೀಗ ಜೀಕನ್ನಡ ವಾಹಿನಿ ಕೆಜಿಎಫ್2 ಚಿತ್ರದ ಸ್ಯಾಟಲೈಟ್ ರೈಟ್ಸ್ ಅನ್ನು ಭರ್ಜರಿ ಮೊತ್ತಕ್ಕೆ ಖರೀದಿ ಮಾಡಿ ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡುವ ವಿಚಾರವನ್ನು ಅಧಿಕೃತವಾಗಿ ಜೀ‌ ನೆಟ್ ವರ್ಕ್ ತನ್ನ ಜಾಲತಾಣದಲ್ಲಿ ಸ್ಪಷ್ಟನೆ ಪಡಿಸಿದೆ. ಕನ್ನಡ, ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲಾ ಭಾಷೆಯಲ್ಲಿಯೂ ಕೂಡ ಕಿರುತೆರೆಗೆ ಬರಲಿದೆ. ಈಗಾಗಲೇ ಥಿಯೇಟರ್ ನಲ್ಲಿ ಕೆಜಿಎಫ್2 ಚಿತ್ರ ಥ್ರಿಲ್ ಆಗಿದ್ದ ಪ್ರೇಕ್ಷಕರು ಇದೀಗ ಕಿರುತೆರೆಯಲ್ಲಿರೂ ಕೂಡ ಮತ್ತೊಮ್ಮೆ ಕೆಜಿಎಫ್2 ಎಂಬ ಮಾಸ್ ಮಹಾಕಾವ್ಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕೆಜಿಎಫ್2 ಚಿತ್ರದ ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಅವರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಅದೇ ಕೆಜಿಎಫ್2 ಸಿನಿಮಾದಲ್ಲಿ ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಇನ್ನಿತರ ಕಲಾವಿದರು ನಟಿಸಿದ್ದಾರೆ. ಕೆಜಿಎಫ್2 ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದು ಮಾತ್ರ ನಿಜಕ್ಕೂ ಕಣ್ಣಿಗೆ ಹಬ್ಬ ಅಂತಾನೇ ಹೇಳಬಹುದು.

Leave a Reply

%d bloggers like this: