KGF-2 ಚಿತ್ರದ ಅಖಾಡಕ್ಕೆ ಎಂಟ್ರಿ ಕೊಟ್ಟ ಕನ್ನಡದ ಖ್ಯಾತ ನಟಿ.. ಯಾರು ಗೊತ್ತಾ ಆ ನಟಿ? ಇವರೇ ನೋಡಿ ಒಮ್ಮೆ

ಇಡೀ ವಿಶ್ವದ ಚಿತ್ರರಂಗವೇ ಕಾತುರದಿಂದ ಕಾಯುತ್ತಿರುವ ಕನ್ನಡದ ಗೋಲ್ಡನ್ ಸಿನಿಮಾ ಕೆ.ಜಿ.ಎಫ್ ಚಿತ್ರದ ಮುಂದುವರಿದ ಸರಣಿಯಾಗಿ ಮೂಡಿ ಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಕನ್ನಡ ಖ್ಯಾತ ನಟಿಯರು ಕೂಡ ಬಹು ಮುಖ್ಯವಾದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆ.ಜಿ.ಎಫ್. ಚಾಪ್ಟರ್ 2.ಚಿತ್ರವನ್ನು ಕಣ್ತುಂಬಿಕೊಳ್ಳಲು ಯಶ್ ಅಭಿಮಾನಿಗಳು ಮಾತ್ರ ಅಲ್ಲದೆ ಇಡೀ ಭಾರತೀಯ ಚಿತ್ರರಂಗವೇ ತುದಿಗಾಲಲ್ಲಿ ನಿಂತಿದೆ. ಅದರ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ಕೆಲವು ದೃಶ್ಯ ಸನ್ನಿವೇಶಗಳ ತಿದ್ದುಪಡಿ, ಪುನರ್ ಚಿತ್ರೀಕರಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಕೆ.ಜಿ.ಎಫ್ ಚಾಪ್ಟರ್ 2. ಸಿನಿಮಾದ ಟೀಸರ್ ಇಡೀ ವಿಶ್ವದ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ.

ಹೌದು ಈ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಯಾವ ಮಟ್ಟಿಗೆ ಹವಾ ಸೃಷ್ಟಿ ಮಾಡಿತು ಅಂದರೆ ರಿಲೀಸ್ ಆದ ಎರಡೇ ದಿನದಲ್ಲಿ ಬರೋಬ್ಫರಿ ನೂರು ಮಿಲಿಯನ್ ದಾಖಲೆಯ ವೀಕ್ಷಣೆ ಪಡೆದು ಎಲ್ಲರನ್ನ ನಿಬ್ಬೆರಗಾಗಿಸಿತು. ಚಿತ್ರದ ಮೇಕಿಂಗ್ ಮಾತ್ರ ಯಾವ ಹಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲವೆಂಬಂತೆ ಅದ್ದೂರಿತನದಲ್ಲಿ ನಿರ್ಮಾಣವಾಗಿದೆ ಕೆಜಿಎಫ್ ಚಾಪ್ಟರ್ 2.ಸಿನಿಮಾ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಈ ಮಟ್ಟಿಗೆ ಹೈಪ್ ಕ್ರಿಯೆಟ್ ಮಾಡಲು ಈ ಭಾಗದಲ್ಲಿ ಕೇವಲ ಕನ್ನಡದ ನಟರು ಮಾತ್ರ ಅಲ್ಲದೆ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಟ-ನಟಿಯರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಅವರು ಅಧೀರನಾಗಿ ಅಬ್ಬರಿಸಿದ್ದು ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಒಂದಾಗಿದೆ ಎನ್ನಬಹುದು. ಅದರ ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್ ಅವರು ರಮಿಕಾ ಸೇನ್ ಪಾತ್ರದಲ್ಲಿ ಮಿಂಚಿದ್ದಾರೆ. ಅವರುಗಳ ಜೊತೆಗೆ ದಕ್ಷಿಣ ಭಾರತದ ಸ್ಟಾರ್ಸ್ಸ್ ಆದಂತಹ ಮೆಕಾ ಶ್ರೀಕಾಂತ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್, ಪ್ರಕಾಶ್ ರಾಜ್, ರಾಮಚಂದ್ರ ರಾಜು, ಅನಂತ್ ನಾಗ್, ರಾವ್ ರಮೇಶ್, ಫಿಶ್ ವೆಂಕಟ್, ವಸಿಷ್ಟ ಸಿಂಹ, ಅಚ್ಯುತ್ ಕುಮಾರ್, ಅಯ್ಯಪ್ಪ ಶರ್ಮ, ಟಿ.ಎಸ್.ನಾಗಭರಣ, ಬಿ.ಸುರೇಶ, ದಿನೇಶ್ ಮಂಗಳೂರು ಹೀಗೆ ಕೆಜಿಎಫ್ ಚಾಪ್ಟರ್ 2.ಸಿನಿಮಾದಲ್ಲಿ ಬಹು ದೊಡ್ಡ ತಾರಾಗಣವೇ ಸೇರಿದೆ.

ಇದೀಗ ಇವರ ಜೊತೆಗೆ 90 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಸುಪ್ರಸಿದ್ದ ನಟಿಯರಾದ ಶೃತಿ ಮತ್ತು ಸುಧಾರಾಣಿ ಅವರು ಕೂಡ ಸೇರ್ಪಡೆಗೊಂಡಿದ್ದಾರೆ. ಆದರೆ ಈ ಇಬ್ಬರು ನಟಿಯರು ತೆರೆ ಮೇಲೆ ಕಾಣಿಸಿಕೊಳ್ಳದೆ ತೆರೆಯ ಹಿಂದೆ ಅಂದರೆ ಕಂಠದಾನ ಮಾಡಿ ಈ ಬಿಗ್ ಬಜೆಟ್ ಚಿತ್ರದ ಭಾಗವಾಗಿದ್ದಾರೆ. ಹೌದು ಪರಭಾಷಾ ನಟಿ ಈಶ್ವರಿ ರಾವ್ ಅವರಿಗೆ ಶೃತಿ ಅವರು ಡಬ್ಬಿಂಗ್ ಮಾಡಿದ್ದಾರೆ. ಅದರಂತೆ ನಟಿ ಸುಧಾರಾಣಿ ಅವರು ರಮೀಕಾ ಸೇನಾ ಪಾತ್ರ ಮಾಡಿರುವ ನಟಿ ರವೀನಾ ಟಂಡನ್ ಅವರಿಗೆ ಕಂಠದಾನ ಮಾಡಿದ್ದಾರೆ. ಈ ಮುಖಾಂತರ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಶೃತಿ ಮತ್ತು ಸುಧಾರಾಣಿ ಇಬ್ಬರು ಚಿತ್ರದಲ್ಲಿ ಇರಲಿದ್ದಾರಂತೆ.

ಎಲ್ಲವೂ ಅಂದುಕೊಂಡಂತೆ ಆದರೆ ಏಪ್ರಿಲ್ 14 ರಂದು ಈ ಕೆಜಿಎಫ್ ಚಾಪ್ಟರ್ 2.ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಇನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕೆಜಿಎಫ್.2 ಚಿತ್ರದ ಅಪ್ಡೇಟ್ಗಾಗಿ ನಿರ್ಮಾಪಕರಾದ ವಿಜಯ್ ಕಿರಂಗದೂರ್ ಅವರಿಗೆ ಪತ್ರ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿರುವುದನ್ನ ಕಂಡು ಕೆಜಿಎಫ್ 2 ಚಿತ್ರತಂಡ ಪುಳಕಿತಗೊಂಡಿದೆ.

Leave a Reply

%d bloggers like this: