ಕೇವಲ ಈತನ ಒಂದು ನಿರ್ಧಾರದಿಂದ 1.5 ಕೋಟಿ ಜನ ಪ್ರಾಣ ಕಳೆದುಕೊಂಡರು! ತನ್ನ ಇಡೀ ಜೀವನದಲ್ಲಿ ಒಂದು ಬಾರಿ ಕೂಡ ಹಲ್ಲು ಉಜ್ಜಿಲ್ಲ ಈ ನಾಯಕ

ಸ್ನಾನ ಮಡಿ ಅನ್ನೋದು ದೇಹಕ್ಕಲ್ಲ ಮನಸ್ಸಿಗೆ ಇರಬೇಕು ಎಂಬ ಈ ಡೈಲಾಗ್ ಡಾ.ರಾಜ್ ಕುಮಾರ್ ಅವರ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಕೇಳಿಯೇ ಇರುತ್ತಾರೆ. ಇದನ್ನ ಯಾರು ಅನುಸರಿಸಿದರೋ ಇಲ್ಲವೊ ಆದರೆ ಚೀನಾದ ಈ ವ್ಯಕ್ತಿ ಮಾತ್ರ ‌ಅನುಸರಿಸಿದ್ದಾನೆ. ಹೌದು ಇಂದು ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ದೇಶ ಅಂದರೆ ಅದು ಚೀನಾ ದೇಶ. ಚೀನಾ ದೇಶವನ್ನು ಅನೇಕ ನಾಯಕರುಗಳು ಆಳಿದ್ದಾರೆ. ಆದರೆ ಕೆಲವು ನಾಯಕರು ಮಾತ್ರ ತಮ್ಮ ಆಡಳಿತದಿಂದ ತಮ್ಮದೇಯಾದ ಛಾಯೆಯನ್ನು ಬಿಟ್ಟು ಉಳಿಸಿ ಹೋಗುತ್ತಾರೆ. ಅಂತಹ ಆಡಳಿತಗಾರರಲ್ಲಿ ಮಾವೋತ್ಸೆ ತುಂಗ್ ಕೂಡ ಒಬ್ಬರು. ಇವರು ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಶಕ್ತಿ ಸಾಮರ್ಥ್ಯ ಇದ್ದರೋ ತಮ್ಮ ಜೀವನ ಶೈಲಿಯಲ್ಲಿ ಅಶಿಸ್ತನ್ನ ಹೊಂದಿದ್ದರಂತೆ‌. ವೈದ್ಯರಾದ ಜಿಕ್ಸಿಲಿ ಎಂಬುವವರು ಮಾವೋತ್ಸೆ ತುಂಗ್ ಅವರ ಬಗ್ಗೆ ದಿ ಪ್ರೈವೇಟ್ ಲೈಫ್ ಆಫ್ ಛೇರ್ಮನ್ ಎಂಬ ಪುಸ್ತಕವೊಂದನ್ನ ಬರೆದಿದ್ದಾರೆ.

Mao Zedong (1893 ? 1976). Chinese Communist revolutionary and the founding father of the People’s Republic of China, which he governed as Chairman of the Communist Party of China from its establishment in 1949 until his death in 1976. (Photo by Universal History Archive/UIG via Getty Images)

ಈ ಪುಸ್ತಕದಲ್ಲಿ ಮಾವೋತ್ಸೆ ಅವರು ತಮ್ಮ ಜೀವನ ಶೈಲಿಯನ್ನು ಹೇಗೆ ರೂಢಿಸಿಕೊಂಡಿದ್ದರು ಎಂಬುದನ್ನ ವಿವರಿಸಿದ್ದಾರೆ. ಈ ದಿ ಪ್ರೈವೇಟ್ ಲೈಫ್ ಆಫ್ ಛೇರ್ಮನ್ ಮಾವೋ ಪುಸ್ತಕದಲ್ಲಿ ಮಾಹೋತ್ಸೆ ತುಂಗ್ ಅವರು ಪ್ರತಿ ನಿತ್ಯ ಎದ್ದೇಳುವುದು ರಾತ್ರಿಯಲ್ಲಿ. ಮಲಗುವುದು ಬೆಳಿಗ್ಗಿನ ಅವಧಿಯಲ್ಲಿ. ಇವರಿಗೆ ಸ್ನಾನ ಮಾಡುವುದಕ್ಕೆ ಇಷ್ಟವಿರಲಿಲ್ಲವಂತೆ, ಅದಿರಲಿ ಇವರಿಗೆ ಹಲ್ಲು ಉಜ್ಜುವ ಅಭ್ಯಾಸವೇ ಇರಲಿಲ್ಲವಂತೆ‌. ಇವರ ಜೀವನ ಶೈಲಿಯೇ ವಿಚಿತ್ರವಾಗಿತ್ತಂತೆ. ಹೇಗೆಂದರೆ ಇಡೀ ಜಗತ್ತು ಮಲಗಿದ ನಂತರ ಮಾಹೋತ್ಸೆ ತುಂಗ್ ಅವರು ತಮ್ಮ ಕೆಲಸವನ್ನು ಆರಂಭಿಸುತ್ತಾರೆ. ಇವರು ಮಲಗುವುದೇ ಬೆಳಿಗ್ಗೆಯ ಅವಧಿಯಲ್ಲಿ ಅಂತೆ. ವಿಚಿತ್ರ ಅಂದರೆ ಮಾವೋತ್ಸೇ ಅವರು ತಮಗಾಗಿಯೇ ಅಂತ ಒಂದು ವಿಶೇಷವಾದ ಹಾಸಿಗೆಯನ್ನ ಮಾಡಿಸಿಕೊಂಡಿದ್ದರಂತೆ.

ಅವರು ಎಲ್ಲೇ ಇದ್ದರು ತಾವು ಮಲಗಬೇಕಾದರೆ ಆ ಹಾಸಿಗೆಯ ಮೇಲೆಯೇ ಮಲಗಬೇಕಿತ್ತಂತೆ. ಮಾವೋತ್ಸೆ ತುಂಗ್ ಅವರು 1958 ರ ತಮ್ಮ ಆಡಳಿತಾವಧಿಯಲ್ಲಿ ನಾಲ್ಕು ಕೀಟಗಳ ಅಭಿಯಾನ ಎಂಬುದನ್ನ ಆರಂಭಿಸಿ ಈ ಅಭಿಯನದ ಮೂಲಕ ಸೊಳ್ಳೆ, ನೊಣ, ಇಲಿ, ಗುಬ್ಬಚ್ಚಿ ಇವುಗಳನ್ನ ಕೊಲ್ಲಲು ಆದೇಶ ಮಾಡುತ್ತಾರೆ. ಇದರಂತೆ ಈ ನಾಲ್ಕು ಕೀಟಗಳನ್ನ ಕೊಲ್ಲುತ್ತಾರೆ. ಇದರಿಂದಾಗಿ ಚೀನಾದೇಶಕ್ಕೆ ಬರಗಾಲ ಬಂದೊದುಗುತ್ತದೆ. ಈ ಬರಗಾಲದ ಪರಿಸ್ಥಿತಿಯಿಂದಾಗಿ ಅಲ್ಲಿನ ಜನರು ಹಸಿವಿನಿಂದ ಬಳಲುತ್ತಾರೆ. ಇದೇ ಆಹಾರದ ಆಹಾಕಾರ ಚೀನಾದಲ್ಲಿ ಬರೋಬ್ಬರಿ ಒಂದೂವರೆ ಕೋಟಿ ಜನರು ಪ್ರಾಣ ಬಿಡಬೇಕಾಯಿತು ಎಂದು ವೈದ್ಯರಾದ ಜಿಕ್ಸಿಲಿ ಅವರು ಬರೆದಿರುವ ದಿ ಪ್ರೈವೇಟ್ ಲೈಫ್ ಆಫ್ ಛೇರ್ಮನ್ ಮಾಹೋ ಪುಸ್ತಕದಲ್ಲಿ ದಾಖಲಿಸಲಾಗಿದೆ.

Leave a Reply

%d bloggers like this: