ಕೇವಲ 5 ನಿಮಿಷದಲ್ಲಿ I Love You Pa ಹಾಡನ್ನು ಬರೆದಿದ್ದ ನಾಗೇಂದ್ರ ಪ್ರಸಾದ್! ಹಾಗೂ 3000 ಕ್ಕೂ ಹೆಚ್ಚು ಹಾಡುಗಳ ರಚನೆ

ಸಾಹಿತ್ಯ ಎಂಬುದು ಸಿನಿಮಾದ ಜೀವಾಳ. ಯಾವುದೇ ಒಂದು ಸಿನಿಮಾ ಪರಿಪೂರ್ಣವಾಗಬೇಕಾದರೆ ಅದಕ್ಕೆ ಸಾಹಿತ್ಯದ ಸ್ಪರ್ಶ ಇರಲೇಬೇಕು. ಇಲ್ಲವಾದರೆ ಸಿನಿಮಾ ಸಂಪೂರ್ಣವಾಗುವುದಿಲ್ಲ. ಹಾಗಾಗಿಯೇ ಸಿನಿಮಾ ಕ್ಷೇತ್ರದಲ್ಲಿ ಸಾಹಿತ್ಯಕ್ಕೆ ವಿಶೇಷವಾದ ಸ್ದಾನಮಾನ ಮಹತ್ವವಿದೆ. ಸಾಹಿತಿಗಳೆಂದರೆ ಗೌರವದ ಸ್ಥಾನವಿದೆ. ಅಂತೆಯೇ ಚಂದನವನದಲ್ಲಿ ತಮ್ಮ ಸಾಹಿತ್ಯ, ಸಂಗೀತ ನಿರ್ದೇಶಕ, ಸಂಭಾಷಣೆ, ನಟನೆ ಮತ್ತು ನಿರ್ದೇಶನದ ಮೂಲಕ ತಮ್ಮದೇಯಾದ ಛಾಪನ್ನು ಮೂಡಿಸಿರುವ ದೈತ್ಯ ಪ್ರತಿಭೆ ಅಂದರೆ ಅದು ಡಾ‌. ವಿ.ನಾಗೇಂದ್ರ ಪ್ರಸಾದ್. ನಾಗೇಂದ್ರ ಪ್ರಸಾದ್ ಅವರು ಇದೀಗ ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು ಗೀತೆ ರಚಿಸಿ ಸಾಧನೆಗೈದಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರ ಬಗ್ಗೆ ತಿಳಿಯುವುದಾದರೆ ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಇಜ್ಜಲ ಘಟ್ಟ ಎಂಬ ಹಳ್ಳಿಯಲ್ಲಿ ಜನಿಸುತ್ತಾರೆ. ಶಾಲಾ ದಿನಗಳಿಂದಾನೂ ಸಾಹಿತ್ಯದ ಬಗ್ಗೆ ವಿಶೇಷ ಒಲವನ್ನು ಬೆಳೆಸಿಕೊಂಡಿರುತ್ತಾರೆ.

ಅದರಂತೆ ನಾಲ್ಕನೇ ತರಗತಿ ಇರುವಾಗಲೇ ಪದ್ಯ ರಚನೆ ಮಾಡುವುದರಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ. ಶಾಲೆಯಲ್ಲಿ ಇವರ ಪ್ರತಿಭೆ ಕಂಡು ಪ್ರೋತ್ಸಾಹ ನೀಡುತ್ತಾರೆ. ಬೆಂದ್ರೆ, ಎಸ್.ಎಲ್ ಭೈರಪ್ಪ, ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ವಿ.ನಾಗೇಂದ್ರ ಪ್ರಸಾದ್ ಅವರು ಮುಂದಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಮನಸ್ಸು ಮಾಡುತ್ತಾರೆ. ವಿ.ನಾಗೇಂದ್ರ ಪ್ರಸಾದ್ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು ಕೆ.ವಿ.ಜಯರಾಮ್ ನಿರ್ದೇಶನದ ಗಾಜಿನ ಮನೆ ಸಿನಿಮಾದಲ್ಲಿ. ಈ ಚಿತ್ರದಲ್ಲಿ ಒಂದಷ್ಟು ಹಾಡುಗಳನ್ನು ಬರೆಯುತ್ತಾರೆ. ಇದಾದ ಬಳಿಕ ಚಿರಂಜೀವಿ ಅಭಿನಯದ ಭಕ್ತ ಪ್ರಧಾನ ಸಿನಿಮಾ ಶ್ರೀ ಮಂಜುನಾಥ ಸ್ವಾಮಿ ಚಿತ್ರದಲ್ಲಿಯೂ ಕೂಡ ನಾಗೇಂದ್ರ ಪ್ರಸಾದ್ ಅವರ ಗೀತ ರಚನೆ ಕೂಡ ಇದೆ. ನಾಗೇಂದ್ರ ಪ್ರಸಾದ್ ಅವರು ಎಲ್ಲಾ ಬಗೆಯ ಹಾಡುಗಳನ್ನ ರಚಿಸಿದ್ದಾರೆ.

ಕರಿಯ ಚಿತ್ರದಲ್ಲಿ ಕೆಂಚಲೋ ಗೀತೆಗೂ ಸೈ ಎಕ್ಸ್ ಕ್ಯೂಸ್ ಮಿ ಚಿತ್ರದಲ್ಲಿನ ಭಾವನಾತ್ಮಕ ಸಿನಿಮಾದ ಹಾಡಿಗೂ ಕೂಡ ಇವರ ಸಾಹಿತ್ಯ ಹೊಸದೊಂದು ಮೆರುಗನ್ನ ನೀಡಿವೆ. ಇನ್ನು ನಾಗೇಂದ್ರ ಪ್ರಸಾದ್ ಅವರು ಕೇವಲ ಗೀತ ರಚನೆಕಾರರಾಗಿರದೇ ನಿರ್ದೇಶನದಲ್ಲಿಯೂ ಕೂಡ ಸೈ ಎನಿಸಿಕೊಂಡಿದ್ದಾರೆ. ಹೌದು ನಾಗೇಂದ್ರ ಪ್ರಸಾದ್ ಅವರು ಕಿಚ್ಚ ಸುದೀಪ್ ಅವರಿಗೆ ನಲ್ಲ ಚಿತ್ರದಲ್ಲಿ ಆಕ್ಶನ್ ಕಟ್ ಹೇಳಿದ್ದಾರೆ. ಅದಲ್ಲದೆ ಅಂಬಿ, ಶಿಷ್ಯ, ಗೂಗಲ್ ಅಂತಹ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಇವರ ಸಾಹಿತ್ಯದಲ್ಲಿ ಮೂಡಿಬಂದ ಅಪ್ಪ ಐ ಲವ್ ಯೂ ಅಪ್ಪ ಹಾಡು ಚೌಕ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿತ್ತು. ಇನ್ನುವ ಸಾಹಿತ್ಯ ಸೇವೆಗೆ ಕನ್ನಡ ಅಂತರಾಷ್ಟ್ರೀಯ ಸಂಗೀತ ಅಕಾಡೆಮಿ ಅತ್ಯುತ್ತಮ ಗೀತ ರಚನೆಕಾರ ಪ್ರಶಸ್ತಿ, ಮಿರ್ಚಿ ಸಂಗೀತ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿವೆ. ಇದುವರೆಗೆ ಮೂರು ಸಾವಿರ ಹಾಡುಗಳನ್ನು ರಚಿಸುವ ಮೂಲಕ ಕನ್ನಡ ಸಿನಿಮಾ ರಂಗದ ಬೇಡಿಕೆಯ ಗೀತ ರಚನೆಕಾರರಾಗಿ ಜನಪ್ರಿಯತೆ ಗಳಿಸಿದ್ದಾರೆ.

Leave a Reply

%d bloggers like this: