ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ! ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರು, ನಡೆದಿದ್ದೇನು ಗೊತ್ತಾ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರು..! ಇತ್ತೀಚೆಗೆ ನವೆಂಬರ್ ಎರಡರಂದು ಓಟಿಟಿ ಪ್ಲಾಟ್ ಫಾರ್ಮ್ ಅಮೇಜಾ಼ನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಜೈ ಭೀಮ್ ಸಿನಿಮಾ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.ಜೊತೆಗೆ ಚರ್ಚೆಗೂ ಕೂಡ ಕಾರಣವಾಗಿದೆ.ಒಟ್ಟಾರೆಯಾಗಿ ಜೈ ಭೀಮ್ ಸಿನಿಮಾ ಸಿನಿ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುವುದರ ಜೊತೆಗೆ ಕೆಲವು ಉತ್ತರ ಭಾರತದ ವೀಕ್ಷಕರಿಂದ ಅಸಮಾಧಾನ ಕೇಳಿ ಬಂದಿದೆ.ಅದಕ್ಕೆ ಕಾರಣವಾಗಿರುವುದು ಜೈ ಭೀಮ್ ಚಿತ್ರದ ದೃಶ್ಯವೊಂದರಲ್ಲಿ ನಟ ಪ್ರಕಾಶ್ ರಾಜ್ ಅವರು ಹಿಂದಿಯಲ್ಲಿ ಮಾತನಾಡುವ ಸಹ ಪಾತ್ರಕ್ಕೆ ಕಪಾಳಕ್ಕೆ ಹೊಡೆದು ಸ್ಥಳೀಯ ಭಾಷೆ ಮಾತನಾಡು ಎಂದು ಹೇಳುವುದು.ಇದರಲ್ಲಿ ಆಯಾ ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗಿದೆ.ಮೂಲ ತಮಿಳು ಭಾಷೆಯಲ್ಲಿ ತಯಾರಾಗಿರುವ ಜೈ ಭೀಮ್ ಸಿನಿಮಾ ದೇಶದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ.

ತಮಿಳಿನಲ್ಲಿ ತಮಿಳು ಮಾತನಾಡು,ತೆಲುಗು ಅವತರಣಿಕೆಯಲ್ಲಿ ತೆಲುಗು ಮಾತನಾಡು ಎಂಬಂತೆ ಕನ್ನಡ ಭಾಷೆಯ ಡಬ್ಬಿಂಗ್ ನಲ್ಲಿ ಕನ್ನಡ ಮಾತಾಡು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.ಹಿಂದಿಯಲ್ಲಿ ಸತ್ಯಹೇಳು ಎಂಬ ಡೈಲಾಗ್ ಸೇರಿಸಲಾಗಿದೆ.ಈ ದೃಶ್ಯ ಸನ್ನಿವೇಶ ನೋಡಿದ ಉತ್ತರ ಭಾರತದ ಸಿನಿ ಪ್ರೇಕ್ಷಕರು ಇದು ಬೇಕು ಅಂತಾನೇ ಮಾಡಿದ್ದಾರೆ ಎಂದು ನಿರ್ದೇಶಕ ಮತ್ತು ನಟ ಪ್ರಕಾಶ್ ರಾಜ್ ಅವರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.ಇತ್ತೀಚೆಗೆ ದೇಶದೆಲ್ಲೆಡೆ ಹಿಂದಿ ಭಾಷೆ ಹೇರಿಕೆ ಆಗುತ್ತಿದೆ.ಇದು ಪ್ರಾದೇಶಿಕ ಭಾಷೆಗಳ ಮೇಲೆ ಅತಿಕ್ರಮಣ ಎಂದೇ ಹೇಳಬಹುದು. ಈ ಜೈ ಭೀಮ್ ಸಿನಿಮಾದಲ್ಲಿ ಈ ವಿಚಾರವನ್ನು ಸೂಕ್ತ ಸಮರ್ಪವಾಗಿ ನಿರ್ದೇಶಕ ಜ್ಞಾನವೇಲ್ ಅವರು ಸಮಯ ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡಿದ್ದಾರೆ. ಇದರಲ್ಲಿ ಪ್ರಧಾನ ಪಾತ್ರವಾಗಿ ಕಾಲಿವುಡ್ ಸ್ಟಾರ್ ನಟ ಸೂರ್ಯ ವಕೀಲ ಚಂದ್ರು ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಸೂರ್ಯ ಅವರ ನಟನೆಗೆ ಪ್ರೇಕ್ಷಕರು ಮೂಕ ವಿಸ್ಮಿತರಾಗಿದ್ದಾರೆ.2 ಡಿ ಎಂಟರ್ಟೈನ್ ಮೆಂಟ್ ಸಂಸ್ಥೆಯಡಿ ನಿರ್ಮಾಣವಾಗಿರುವ ಈ ಜೈ ಭೀಮ್ ಚಿತ್ರಕ್ಕೆ ನಿರ್ದೇಶಕ ಟಿ.ಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿದ್ದು, ಪೋಷಕ ಪಾತ್ರಗಳಲ್ಲಿ ಖ್ಯಾತ ನಟ ಪ್ರಕಾಶ್ ರಾಜ್,ರಜಿಶಾ ವಿಜಯನ್,ಲಿಜೋಮೋಲ್ ಜೋಶ್,ರಾವ್ ರಮೇಶ್ ಮತ್ತು ಕೆ.ಮನಿಕಂದನ್ ನಟಿಸಿದ್ದಾರೆ. ಸದ್ಯಕ್ಕೆ ಜೈ ಭೀಮ್ ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದು ಪೋಸ್ಟ್ ಮಾಡುತ್ತಿದ್ದಾರೆ.ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಪ್ರಕಾಶ್ ರಾಜ್ ಅಟೆಂಡರ್ ಗೆ ಕಪಾಳಮೋಕ್ಷ ಮಾಡಿ ಸ್ಥಳೀಯ ಭಾಷೆ ಮಾತಾಡುವುದಾಗಿ ಹೇಳುವ ದೃಶ್ಯದ ಬಗ್ಗೆ ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಪ್ರಕಾಶ್ ರಾಜ್ ಅವರನ್ನ ಟೀಕೆ ಮಾಡುತ್ತಿದ್ದಾರೆ.ಇದಕ್ಕೆ ಪ್ರತಿಯಾಗಿ ದಕ್ಷಿಣ ಭಾರತದ ಬಹಳಷ್ಟು ನೆಟ್ಟಿಗರು ನಟ ಪ್ರಕಾಶ್ ರಾಜ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

Leave a Reply

%d bloggers like this: