ಕೆಂಡ ಸಂಪಿಗೆ ಮೂಲಕ ಕನ್ನಡ ಕಿರುತೆರೆಗೆ‌ ಪಾದಾರ್ಪಣೆ ಮಾಡಿದ ನಟ

ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಕಲರ್ಸ್ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ ಪ್ರಸಾರ ಆಗಲು ಸಜ್ಜಾಗುತ್ತಿದೆ. ಇದೇ ಆಗಸ್ಟ್22 ಸೋಮವಾರದಿಂದ ಈ ಹೊಚ್ಚ ಹೊಸ ಧಾರಾವಾಹಿ ಆರಂಭವಾಗುತ್ತದೆ. ಇತ್ತೀಚೆಗೆ ವಾಹಿನಿಯಲ್ಲಿ ಈ ನೂತನ ಧಾರಾವಾಹಿಯ ಪ್ರೊಮೋ ಭಾರಿ ಜನಪ್ರಿಯತೆ ಗಳಿಸಿದೆ. ಹಿರಿಯ ನಟ ದೊಡ್ಡಣ್ಣ ಅವರು ಕೆಂಡಸಂಪಿಗೆ ಧಾರಾವಾಹಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಡಣ್ಣ ಅವರು ಈ ಧಾರಾವಾಹಿಯ ಕಥಾ ನಾಯಕನ ಪಾತ್ರವನ್ನು ವಿವರಿಸುತ್ತಿರುವ ಪ್ರೋಮೋ ಭಾರಿ ಸುದ್ದಿ ಮಾಡಿದೆ. ಅಂದ್ಹಾಗೆ ಈ ಹೊಸ ಧಾರಾವಾಹಿಯ ಹೆಸರು ಕೆಂಡ ಸಂಪಿಗೆ. ಕೆಂಡ ಸಂಪಿಗೆ ಧಾರಾವಾಹಿಯ ಮೂಲಕ ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಅವರು ನಿರ್ಮಾಪಕಿ ಯಾಗಿ ಬಡ್ತಿ ಪಡೆದಿದ್ದಾರೆ. ಈ ಧಾರಾವಾಹಿಯು ಅಕ್ಕ ತಮ್ಮನ ಭಾಂಧವ್ಯವನ್ನು ಹೊಂದಿದೆಯಂತೆ. ಅಕ್ಕ ಸುಮನಾಳಿಗೆ ಕೆಂಡಂದಂತಹ ಕೋಪ. ಕುಟುಂಬದ ಜವಬ್ದಾರಿ ಹೊತ್ತು ಬದುಕು ಸಾಗಿಸುತ್ತಿರುವ ಸುಮನಾಳಿಗೆ ತಮ್ಮನನ್ನ ಕಂಡರೆ ಬಲು ಪ್ರೀತಿ.

ಆದರೆ ಅದನ್ನ ಎಲ್ಲಿಯೂ ಕೂಡ ತೋರ್ಪಡಿಸಿಕೊಳ್ಳುವುದಿಲ್ಲ. ತನ್ನ ತಮ್ಮನ ಭವಿಷ್ಯ ಉಜ್ವಲವಾಗಬೇಕು ಎಂದು ಶ್ರಮ ಪಡುತ್ತಿರುತ್ತಾಳೆ. ಆದರೆ ಸುಮನಾ ತನ್ನ ತಮ್ಮನೊಂದಿಗೆ ಮಾತನಾಡುವುದಿಲ್ಲ. ತಮ್ಮನು ಸಹ ತನ್ನ ಅಕ್ಕ ಮಾತನಾಡದಿದ್ದರು ಕೂಡ ಅವಳು ಪ್ರೀತಿಯ ಅಕ್ಕ. ಅವಳ ಮೇಲೆ ಯಾರೇ ಕೆಟ್ಟದಾಗಿ ನಡೆದುಕೊಂಡರು ಉರಿದು ಬೀಳುತ್ತಾನೆ ಸೋದರ. ಈ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಹಿಂದೆ ಶನಿ ಎಂಬ ಧಾರಾವಾಹಿಯಲ್ಲಿ ನಟಿಸಿದ ಸುನೀಲ್. ಕಥಾ ನಾಯಕ ತೀರ್ಥಂಕರ್ ಕಾರ್ಪೋರೇಟ್. ತನ್ನ ಮನೆಯವರಿಗಿಂತ ಹೆಚ್ಚು ಹೊರ ಜನರೊಟ್ಟಿಗೆ ಬೆರೆಯುವಂತಹ ವ್ಯಕ್ತಿತ್ವ. ಅದೇ ರೀತಿ ಈ ಧಾರಾವಾಹಿಯಲ್ಲಿ ಕುಲವಧು ಧಾರಾವಾಹಿ ಖ್ಯಾತಿಯ ನಟಿ ಅಮೃತಾ ರಾಮಮೂರ್ತಿ ಇದೇ ಮೊದಲ ಬಾರಿಗೆ ಬಿಝೆನೆಸ್ ವುಮೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಯ ನಟ ನಾಗರಾಜ ಕೋಟೆ ಅವರು ಸಹ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೆಂಡ ಸಂಪಿಗೆ ಧಾರಾವಾಹಿ ಪ್ರೋಮೋ ಬಿಡುಗಡೆ ಆಗಿದ್ದು, ಕಿರುತೆರೆ ವೀಕ್ಷಕರಿಗೆ ಈಗಾಗಲೇ ಮೋಡಿ ಮಾಡಿದೆ. ಇದೇ ಸೋಮವಾರ ಆಗಸ್ಟ್ 22ರಂದು ಕಲರ್ಸ್ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರ ಆಗುತ್ತದೆ.

Leave a Reply

%d bloggers like this: