ಕೆಂಪು ಡ್ರೆಸ್ ಹಾಕಿಕೊಂಡು ಬಂದ ರಶ್ಮಿಕಾ ಮಂದಣ್ಣ ಅವರ ಪೋಟೋಗಾಗಿ ಮುಗಿಬಿದ್ದ ಮೀಡಿಯಾ ಜನ, ಮುಜುಗರಕ್ಕೊಳಗಾದ ನಟಿ

ನ್ಯಾಷನಲ್ ಕ್ರಶ್ ಅಂದ್ರೆ ಯಾರಿದ್ದಾರೆ ಹೇಳೆ. ಹೌದು ಅವ್ರೇ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸುದ್ದಿಯಾಗುತ್ತಿರುವುದು ಅವರ ಸಿನಿಮಾಗಳಿಂದ ಅಲ್ಲ. ಅವರು ನಟಿಸುತ್ತಿರುವ ಜಾಹೀರಾತು ಮತ್ತು ರಶ್ಮಿಕಾ ಧರಿಸುವ ಉಡುಗೆ ತೊಡುಗೆಗಳ ಮೂಲಕವೇ ಭಾರಿ ಸುದ್ದಿಯಾಗುತ್ತಿದ್ದಾರೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆಯನ್ನ ಹೊಂದಿರುವ ಮತ್ತು ಅಪಾರ ಜನಪ್ರಿಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಒಂದರ ನಂತರ ಒಂದು ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಸೌಂದರ್ಯ ಅವರ ನಟನೆ ಇಂದು ಅವರನ್ನ ಕೇವಲ ಕನ್ನಡ ಮಾತ್ರ ಅಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸುವಂತೆ ಮಾಡಿದೆ.

ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರ ಸೂಪರ್ ಹಿಟ್ ಆಗಿದ್ದೇ ಅದೃಷ್ಟ ರಶ್ಮಿಕಾ ಮಂದಣ್ಣ ರಾತ್ರೋ ರಾತ್ರಿ ಫುಲ್ ಫೇಮಸ್ ಆಗೋದ್ರು. ಇದಾದ ನಂತರ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ಜೊತೆ ಗೀತಾ ಗೋವಿಂದಂ ಚಿತ್ರದಲ್ಲಿನ ಲಿಪ್ ಲಾಕ್ ದೃಶ್ಯ ಅಂತೂ ರಶ್ಮಿಕಾ ಮಂದಣ್ಣ ಅವರಿಗೆ ಪಡ್ಡೆ ಹೈಕ್ಳು ಹೆವಿ ಫ್ಯಾನ್ ಆಗೋಕೆ ಕಾರಣ ಆಗೋಯ್ತು. ಇದೀಗ ಇತ್ತೀಚೆಗೆ ರಿಲೀಸ್ ಆದ ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಮತ್ತಷ್ಟು ಕ್ರೇಜ಼್ ಹುಟ್ಟಿಸಿತು. ರಶ್ಮಿಕಾ ಮಂದಣ್ಣ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗಮನ ಸೆಳೆದಿಲ್ಲ. ಬಾಲಿವುಡ್ ನಲ್ಲಿಯೂ ಕೂಡ ಮಿಂಚಬೇಕೋ ಅನ್ನೋ ಆಸೆ ಕೂಡ ರಶ್ಮಿಕಾಗೆ ಬಂದಂಗಿದೆ. ಯಾಕಪ್ಪಾ ಅಂದ್ರೆ ರಶ್ಮಿಕಾ ಮಂದಣ್ಣ ಅವರ ಡ್ರೆಸ್ ನೆಸ್ ಅದಕ್ಕೆ ಪುಷ್ಟಿ ನೀಡುತ್ತಿದೆ.

ಹೌದು ಬಾಲಿವುಡ್ ಸ್ಟಾರ್ ನಟರಾದ ಸಿದ್ದಾರ್ಥ್ ಮಲ್ಹೋತ್ರಾ ಅವರೊಟ್ಟಿಗೆ ಮಿಶನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟ ರಶ್ಮಿಕಾಗೆ ಅದೃಷ್ಟ ಎಂಬಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಗುಡ್ ಬೈ ಸಿನಿಮಾದಲ್ಲಿ ಕೂಡ ಚಾನ್ಸ್ ಸಿಗುತ್ತದೆ. ಅಷ್ಟೇ ಅಲ್ಲದೆ ರಣ್ ಬೀರ್ ಕಪೂರ್ ಅವರ ಅನಿಮಲ್ ಎಂಬ ಸಿನಿಮಾದಲ್ಲಿ ಕೂಡ ಅವಕಾಶ ದೊರೆಯುತ್ತದೆ. ಹೀಗೆ ರಶ್ಮಿಕಾ ಮಂದಣ್ಣಹಿಂದಿ ಚಿತ್ರರಂಗದಲ್ಲಿ ಒಂದರ ನಂತರ ಸಿನಿಮಾಗಳ ಅವಕಾಶ ಪಡೆಯುತ್ತಿದ್ದಾರೆ. ಈ ಒಂದು ಬೇಡಿಕೆಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಅನ್ನುವ ಉಮೇದು ಇದರಿಂದಲೋ ಏನೋ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಉಡುಪುಗಳನ್ನ ಧರಿಸುವ ಮನಸ್ಸು ಮಾಡಿದ್ದಾರೆ ಎಂದು ಅನಿಸತೊಡಗಿದೆ. ಹೌದು ಇತ್ತೀಚೆಗೆ ಜುಲೈ 15ರಂದು ಮುಂಬೈನಲ್ಲಿ ಫ್ಯಾಶನ್ ಶೋ ಕಾರ್ಯಕ್ರಮ ಇತ್ತು.

ಈ ಕಾರ್ಯಕ್ರಮಕ್ಕೆ ನಟಿ ರಶ್ಮಿಕಾ ಮಂದಣ್ಣ ಅವರನ್ನ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಮ ಕೆಂಪು ಬಣ್ಣದ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ರಶ್ಮಿಕಾ ಅವರಿಗೆ ಈ ಡ್ರೆಸ್ ಆರಾಮಾಧಾಯಕವಾಗಿ ಇರಲಿಲ್ಲ ಎಂಬುದನ್ನ ಅವರ ವರ್ತನೆಯಲ್ಲಿ ನೋಡಬಹುದಾಗಿತ್ತು. ಅವರ ಫ್ಯಾನ್ಸ್ ಮತ್ತು ಕೆಲವು ಛಾಯಾಗ್ರಾಹಕರು ರಶ್ಮಿಕಾ ಜೊತೆ ಫೋಟೋ ತೆಗೆಸಿಕೊಳ್ಳಲು ಮುಂದಾದಾಗ ರಶ್ಮಿಕಾ ಕೊಂಚ ಮುಜುಗರಕ್ಕೆ ಒಳಗಾದರು ಅಂತ ಹೇಳಬಹುದು. ಇನ್ನು ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಬಂದಿದ್ರು. ಅವರು ಸಹ ಬೋಲ್ಡ್ ಆಗಿದ್ದ ರಶ್ಮಿಕಾ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಸದ್ಯಕ್ಕಂತೂ ಭಾರತೀಯ ಚಿತ್ರರಂಗದಲ್ಲಿ ಈಗ ರಶ್ಮಿಕಾ ಅವರ ಈ ಡ್ರೆಸ್ ನದ್ದೇ ಸುದ್ದಿಯಾಗಿದೆ.