ಕೆಲವೇ ವಾರಗಳಲ್ಲಿ ಫೇಸ್ ಬುಕ್ ಸಂಸ್ಥೆಗೆ ಬರೋಬ್ಬರಿ ಐವತ್ತು ಸಾವಿರ ಕೋಟಿಗೂ ಅಧಿಕ ನಷ್ಟ..! ಏನಾಯ್ತು ಗೊತ್ತಾ

ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ ಬುಕ್ ಸಂಸ್ಥೆಗೆ ಬರೋಬ್ಬರಿ ಐವತ್ತು ಸಾವಿರ ಕೋಟಿಗೂ ಅಧಿಕ ನಷ್ಟ..! ಕೆಲವೊಮ್ಮೆ ಅನಿರೀಕ್ಷಿತವಾಗಿ ನಡೆಯುವ ಘಟನೆಗಳು ವ್ಯಕ್ತಿಯ ಎಲ್ಲಾ ಯೋಜನೆಗಳನ್ನು ತಲೆಕೆಳಗಾಗಿ ಮಾಡಿಬಿಡುತ್ತವೆ.ಸಾಮಾನ್ಯ ಉದ್ಯಮಿಯಾಗಿದ್ದರೆ ಅದರ ನಷ್ಟ ಒಂದು ದಿನದ್ದು ಅಥವಾ ಕನಿಷ್ಟ ನಷ್ಟವನ್ನು ಹೊಂದುತ್ತಾನೆ. ಅದೇ ದಿನವೊಂದಕ್ಕೆ ಸಾವಿರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಗೆ ಕೇವಲ ಒಂದು ಅರೆ ಕ್ಷಣ ಯಾಮಾರಿದರು ಸಹ ಅದಕ್ಕೆ ಭಾರಿ ಮೊತ್ತದ ನಷ್ಟವನ್ನು ತೆರಬೇಕಾಗುತ್ತದೆ.ಅಂತೆಯೇ ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಕೂಡ ಅಂತದ್ದೇ ಭಾರಿ ಮೊತ್ತದ ನಷ್ಟವನ್ನು ಅನುಭವಿಸಿದೆ.ಹೌದು ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಕೆಲವು ತಾಂತ್ರಿಕ ದೋಷಗಳಿಂದಾಗಿ ಸರಿ ಸುಮಾರು ಆರು ಗಂಟೆಗಳ ಕಾಲ ವಾಟ್ಸನ್,ಫೇಸ್ ಬುಕ್ ಸೇರಿದಂತೆ ಯಾವುದೇ ಸೋಶಿಯಲ್ ಮೀಡಿಯಾ ಆಪ್ ಗಳ ಕಾರ್ಯ ನಿರ್ವಹಿಸಿದೇ ತಟಸ್ಥವಾಗಿದ್ದವು.

ಇದು ಬಳಕೆದಾರರಿಗೆ ತಲೆ ನೋವಾಗಿ ಒಂದಷ್ಟು ಗಂಟೆಗಳ ಕಾಲ ಪರಿತಪಿಸಿದ್ದು ಉಂಟು.ಬಹುತೇಕರು ನೆಟ್ ವರ್ಕ್ ಸಮಸ್ಯೆಯಾಗಿದೆ ಎಂದು ಬೊಬ್ಬೆ ಹೊಡೆದು ತಮ್ಮ ತಮ್ಮ ನೆಟ್ ವರ್ಕ್ ಗಳ ಸಹಾಯ ಕೇಂದ್ರಕ್ಕೆ ಕರೆ ಮಾಡಿದ್ದು ಉಂಟು.ಇದು ಬಳಕೆದಾರರಿಗೆ ಕೇವಲ ಆರು ಗಂಟೆಗಳ ಕಾಲ ಸಮಸ್ಯೆ ಆಯಿತು ಬಿಟ್ಟರೆ ಆರ್ಥಿಕ ನಷ್ಟವೇನೂ ಆಗಿಲ್ಲ. ಆದರೆ ಈ ಆರು ಗಂಟೆಗಳ ಕಾಲ ತಾಂತ್ರಿಕ ದೋಷದಿಂದಾಗಿ ಫೇಸ್ಬುಕ್ ಸೇವೆಯಲ್ಲಿ ವ್ಯತ್ಯಯ ಕಂಡ ಕಾರಣ ಸಂಸ್ಥಾಪಕರಾದ ಮಾರ್ಕ್ ಝುಕರ್ ಬರ್ಗ್ ಅವರಿಗೆ ಬರೋಬ್ಬರಿ ಐವತ್ತು ಸಾವಿರ ಕೋಟಿ ಆರ್ಥಿಕ ನಷ್ಟವಾಗಿದೆ. ಇತ್ತೀಚೆಗೆ ಬ್ಲೂಮ್ ಬರ್ಗ್ ಬಿಲಿಯೇನರ್ಸ್ ಇಂಡೆಕ್ಸ್ ವರದಿಯ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 129 ಬಿಲಿಯನ್ ಡಾಲರ್ ಹೊಂದುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

Leave a Reply

%d bloggers like this: