ಕೆಲದಿನಗಳ ಹಿಂದೆ ಮನೆಯಲ್ಲಿ ಸಿಕ್ಕ ರಾಶಿ ರಾಶಿ ಹಣ ಯಾರದ್ದು ಗೊತ್ತೇ

ನಮ್ಮ ಭಾರತ ದೇಶದಲ್ಲಿ ಯಾವುದು ಇದಿಯೋ ಇಲ್ವೋ ಗೊತ್ತಿಲ್ಲ. ಆದರೆ ಈ ಭ್ರಷ್ಟಾಚಾರ ಅನ್ನೋದು ಮಾತ್ರ ಇದ್ದೇ ಇದೆ. ಇತ್ತೀಚೆಗಷ್ಟೇ ನಮ್ಮ ರಾಜ್ಯದಲ್ಲಿ ಈಗಾಗಲೇ ಪಿ.ಎಸ್.ಐ ನೇಮಕಾತಿ ಹಗರಣ ನಡೆದು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೇ ಶಾಮೀಲಾಗಿರುವ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದರಿಂದ ಗೃಹ ಇಲಾಖೆಗೆ ಕಪ್ಪು ಚುಕ್ಕೆ ಉಂಟಾಯಿತು. ಅದೇ ರೀತಿಯಾಗಿ ಇದೀಗ ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದ ಪ್ರಕರಣದಲ್ಲಿ ಮಾಜಿ ಶಿಕ್ಷಣ ಮಂತ್ರಿ ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿ ಸಚಿವರಾಗಿರುವ ಪಾರ್ಥ ಚಟರ್ಜಿ ಅವರ ಆಪ್ತೆಯಾಗಿರುವ ನಟಿ ಅರ್ಪಿತಾ ಅವರ ಮನೆಗೆ ಇಡಿ ದಾಳಿ ನಡೆಸಿದೆ‌. ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ವೇಳೆ ಅರ್ಪಿತಾ ಅವರ ಮನೆಯಲ್ಲಿ ಬರೋಬ್ಬರಿ ಇಪ್ಪತ್ತೂ ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ.

ಸಿಕ್ಕಂತಹ ಈ ಭಾರಿ ಮೊತ್ತದ ಹಣವನ್ನು ಎಣಿಕೆ ಮಾಡಲು ಇಡಿ ಅಧಿಕಾರಿಗಳು ಕೆಲವು ಬ್ಯಾಂಕ್ ಅಧಿಕಾರಿಗಳನ್ನ ಕೂಡ ಕರೆಸಿದ್ದಾರೆ. ಇಡಿ ಅಧಿಕಾರಿಗಳ ಕರೆಯ ಮೇರೆಗೆ ಬ್ಯಾಂಕ್ ಸಿಬ್ಬಂದಿಗಳು ಮನಿ ಕೌಂಟಿಂಗ್ ಮಶೀನ್ ಜೊತೆ ಅರ್ಪಿತಾ ಅವರ ಮನೆಗೆ ಬಂದಿದ್ದರು. ಒಟ್ಟಾರೆಯಾಗಿ ಇಡಿ ಅಧಿಕಾರಿಗಳು ಕೋಟಿ ಕೋಟಿ ಹಣದ ಜೊತೆಗೆ ಮನೆಯಲ್ಲಿದ್ದ ಚಿನ್ನಾಭರಣವನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಅರ್ಪಿತಾ ಇಡಿ ಅಧಿಕಾರಿಗಳ ವಿಚಾರಣೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವನ್ನ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಇತ್ತ ನಟಿಯ ಬಳಿ ಈ ಪ್ರಮಾಣದ ಹಣ ಸಿಗಲು ಮೂಲ ಏನು. ಇವರಿಗೆ ಹೇಗೆ ಇಷ್ಟೊಂದು ಹಣ ಬಂದಿದೆ ಎಂಬುದನ್ನ ತನಿಖೆಯ ನಂತರ ತಿಳಿಯಬೇಕಾಗಿದೆ.

ನಟಿ ಅರ್ಪಿತಾ ಅವರ ಬಗ್ಗೆ ತಿಳಿದುಕೊಳ್ಳುವುದಾದರೆ ಅರ್ಪಿತಾ ಮುಖರ್ಜಿ ಬಂಗಾಳಿ ಸಿನಿಮಾ ರಂಗದ ಸ್ಟಾರ್ ನಟರಾದ ಪ್ರೊಸೆನ್ ಜಿತ್ ಅವರೊಟ್ಟಿಗೆ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ನಟಿ ಅರ್ಪಿತಾ ಅವರು ಒಡಿಯಾ ಮತ್ತು ತಮಿಳಿನ ಕೆಲವು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ನಟನೆ ಮಾತ್ರ ಅಲ್ಲದೆ ಅರ್ಪಿತಾ ರೂಪದರ್ಶಿಯಾಗಿಯು ಕೂಡ ಜಾಹೀರಾತುಗಳಲ್ಲಿ ಗುರುತಿಸಿಕೊಂಡಿದ್ದಾರೆ. ಟಿಎಂಸಿ ಪಕ್ಷದ ಹಿರಿಯ ನಾಯಕ ಸಚಿವ ಆಗಿರುವ ಪಾರ್ಥ ಚಟರ್ಜಿ ಅವರೊಟ್ಟಿಗೇ ಅರ್ಪಿತಾ ಅವರು ಆಪ್ತವಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಪಾರ್ಥ ಚಟರ್ಜಿ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಲುಕಿಕೊಂಡ ಹಿನ್ನೆಲೆ ಇಡಿ ಅಧಿಕಾರಿಗಳು ಪಾರ್ಥ ಚಟರ್ಜಿ ಆಪ್ತೆಯಾಗಿದ್ದ ನಟಿ ಅರ್ಪಿತಾ ಅವರ ಮನೆ ಮೇಲೂ ಕೂಡ ದಾಳಿ ನಡೆಸಿ ಅಪಾರ ಪ್ರಮಾಣದ ಹಣ ಮತ್ತು ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಇದೀಗ ಇದು ಪಶ್ಚಿಮ ಬಂಗಾಳದಲ್ಲಿ ಭಾರಿ ಸುದ್ದಿಯಾಗಿದೆ.

Leave a Reply

%d bloggers like this: