ಕಷ್ಟದಲ್ಲಿದ್ದ M S ಧೋನಿಗೆ 2 ಲಕ್ಷ ಆರ್ಥಿಕ ಸಹಾಯ ಮಾಡಿದ ಕನ್ನಡದ ಖ್ಯಾತ ನಟ

ಒಂದೂವರೆ ದಶಕಗಳ ಹಿಂದೆ ಭಾರತ ತಂಡದ ಮಾಜಿ ನಾಯಕನಿಗೆ ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ನೆರವು..! ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕನ್ನಡ ಚಿತ್ರರಂಗದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಆರ್ಥಿಕ ನೆರವು ನೀಡಿ ಕಷ್ಟದ ದಿನದಲ್ಲಿದ್ದ ಧೋನಿ ಅವರಿಗೆ ನೆರವಾಗಿದ್ದರು.ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಈ ಸುದ್ದಿ ಸೊಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ.ಇಂದು ಸಾಧನೆಯ ಶಿಖರ ಏರಿರುವ ಬಹುತೇಕರ ಯಶಸ್ವಿ ವ್ಯಕ್ತಿಗಳು ಸಂಕಷ್ಟದ ದಿನಗಳನ್ನು ಎದುರಿಸಿಯೇ ಬಂದಿರುತ್ತಾರೆ.ಆದರೆ ಅಂತಹ ಸಂಕಷ್ಟದ ಸಂದರ್ಭದಲ್ಲಿ ಕೆಲವರು ನೆರವು ನೀಡಿರುತ್ತಾರೆ.ಅದು ಅವರಿಗೆ ಅಂದಿನ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿರುತ್ತದೆ.ಅಂತೆಯೇ 2004 ರ ಇಸವಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆಯುತ್ತಿರುತ್ತದೆ.

ಈ ಪಂದ್ಯವನ್ನ ವೀಕ್ಷಣೆ ಮಾಡಲು ರೆಬಲ್ ಸ್ಟಾರ್ ಅಂಬರೀಶ್ ಕೂಡ ಆಗಮಿಸಿರುತ್ತಾರೆ. ಈ ಪಂದ್ಯದಲ್ಲಿ ಆಗತಾನೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಮಹೇಂದ್ರ ಸಿಂಗ್ ದೋನಿ ಉತ್ತಮ ಆಟವನ್ನು ಪ್ರದರ್ಶನ ತೋರಿದ್ದರು. ಎಂ.ಎಸ್.ಧೋನಿ ಅವರ ಆಟದ ವೈಖರಿಯನ್ನು ನೋಡಿ ಮೆಚ್ಚಿದ ಅಂಬರೀಶ್ ಅವರನ್ನ ಭೇಟಿ ಮಾಡಿ ಮೆಚ್ಚುಗೆಯ ಮಾತುಗಳನ್ನ ಆಡಿ ಸಂತೋಷದಿಂದ 2 ಲಕ್ಷ ರೂ.ಗಳ ಚೆಕನ್ನು ನೀಡಿದ್ದರು ಮ.ಈ ಬಗ್ಗೆ ಮಹೇಂದ್ರ ಸಿಂಗ್ ಧೋನಿ ಕೂಡ ಅಂದಿನ ದಿನಗಳಲ್ಲಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅಂಬರೀಶ್ ಸಹಾಯ ಮಾಡಿದ್ದನ್ನು ಸ್ಮರಿಸಿಕೊಂಡಿದ್ದರು.ಈ ಬಗ್ಗೆ ಇತ್ತೀಚೆಗೆ ಕೆಲವು ಪತ್ರಿಕೆಗಳಲ್ಲಿ ತಡವಾಗಿ ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಂಬರೀಶ್ ಪತ್ನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಂಬರೀಶ್ ಉದಾರತೆಯ ಗುಣಗಳು ಹೊಂದಿದ್ದರು.

ತಾವು ಮಾಡುವ ಸಹಾಯವನ್ನು ಯಾರಿಗೂ ತಿಳಿಯದಂತೆ ಮಾಡುತ್ತಿದ್ದರು.ಅಂದು ಪಂದ್ಯ ಮುಗಿದ ಬಳಿಕ ಮಹೇಂದ್ರ ಸಿಂಗ್ ಧೋನಿಯವರ ಹಿನ್ನೆಲೆ ತಿಳಿದು ಸ್ವಯಂ ಪ್ರೇರಿತರಾಗಿ ಆರ್ಥಿಕ ಸಹಾಯ ಮಾಡಿದರು. ಈ ವಿಚಾರವನ್ನು ಎಲ್ಲಿಯು ಸಹ ಅಂಬರೀಶ್ ಹೇಳಿಕೊಂಡಿರಲಿಲ್ಲ. ಎಡಗೈಯಿಂದ ಕೊಟ್ಟದ್ದು ಬಲಗೈ ಗೆ ಗೊತ್ತಾಗಬಾರದು ಎಂಬ ವ್ಯಕ್ತಿತ್ವದ ಗುಣವನ್ನ ಹೊಂದಿದ್ದ ಅಂಬರೀಶ್ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಆದರೂ ಕೂಡ ಮನೆಯ ಯಜಮಾನನಂತೆ ಸಮಸ್ಯೆಯನ್ನು ಪರಿಹಾರ ಮಾಡುತಿದ್ದರು.

Leave a Reply

%d bloggers like this: