ಕಾಶ್ಮೀರದ ಮೋಹಕತಾರೆಗೆ ಬಂದ ಆಫರ್ ಕೇಳಿದರೆ ದಂಗಾಗುತ್ತೀರಾ.. ಅಷ್ಟಕ್ಕೂ ಈ ಸುಂದರಿ ಯಾರು ಗೊತ್ತಾ? ನೋಡಿ ಒಮ್ಮೆ

ತನ್ನ ಕನಸಿಗಾಗಿ ಈ ಕಾಶ್ಮೀರ ಕನ್ಯೆ ಅರಣ್ಯ ವಿಭಾಗದಲ್ಲಿ ಡಾಕ್ಟರೇಟ್ ಪಡೆಯುವ ಅವಕಾಶವನ್ನೇ ಮಿಸ್ ಮಾಡಿಕೊಂಡಿದ್ದಾರೆ. ಆದರೆ ಅದಕ್ಕಿಂತ ಉತ್ತಮ ಹುದ್ದೆಯನ್ನೇ ಪಡೆದಿದ್ದೇನೆ ಎಂಬ ಆತ್ಮ ಸಂತೃಪ್ತಿಯಿಂದ ಹೆಮ್ಮೆ ಪಡುತ್ತಿದ್ದಾರೆ ಈ ಯುವತಿ. ಹಾಗಾದರೆ ಯಾರು ಆ ಯುವತಿ ಅವರ ಕನಸು ಏನಾಗಿತ್ತು. ತಮ್ಮ ಆ ಕನಸನ್ನು ಈಡೇರಿಕೊಂಡ್ರಾ ಎಂಬ ಸ್ಟೋರಿ ಯನ್ನ ಇಲ್ಲಿ ತಿಳಿಯೋಣ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅವರದೇ ಆದ ಆಸೆ ಕನಸು ಇರುತ್ತದೆ. ಆದರೆ ತಮ್ಮ ಆ ಕನಸನ್ನು ಪ್ರತಿಯೊಬ್ಬರಿಗೂ ಕೂಡ ಸಾಕಾರ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೆಲವರು ಮಾತ್ರ ತಮ್ಮಶ್ರದ್ಧೆ, ಶ್ರಮ,ತ್ಯಾಗ ಬದ್ಧತೆಯಿಂದಾಗಿ ತಮ್ಮ ಗುರಿಯನ್ನು ತಲುಪುತ್ತಾರೆ. ಇನ್ನಿತರಿಗೆ ಆದರ್ಶ ವ್ಯಕ್ತಿಯಾಗಿ ಕೂಡ ಗುರುತಿಸಿಕೊಳ್ಳುತ್ತಾರೆ. ಪ್ರತಿಭೆ ಎಂಬುದು ಯಾರ ಸ್ವತ್ತು ಕೂಡ ಅಲ್ಲ. ಯಾವ ವ್ಯಕ್ತಿ ತನ್ನ ಗುರಿಯತ್ತ ನಿರಂತರವಾಗಿ ಶ್ರದ್ದೆ ಯಿಂದ ಹೋರಾಟ ಮಾಡುತ್ತಾರೋ ಅವರು ಜೀವನದಲ್ಲಿ ತಮ್ಮ ಕನಸಂತೆ ಯಶಸ್ಸು ಪಡೆಯುತ್ತಾರೆ. ಇದಕ್ಕೆ ಪುರುಷ ಅಥವಾ ಮಹಿಳೆ, ಬಡವ -ಶ್ರೀಮಂತ ಎಂಬ ಭೇಧ ಭಾವ ಇರುವುದಿಲ್ಲ.

ಯಾರು ಯಾವ ಸಾಧನೆ ಬೇಕಾದರು ಮಾಡಬಹುದು. ಗೆಲ್ಲುವುದಕ್ಕೆ ಮೊದಲು ನಾವು ಕೆಲವು ತ್ಯಾಗಗಳಿಗೆ ಸಿದ್ದರಾಗಿರಬೇಕು ಅಷ್ಟೇ. ಅದೇ ರೀತಿಯಾಗಿ ಕಾಶ್ಮೀರದ ಈ ಯುವತಿ ಒಬ್ಬಳು ತನ್ನ ಕನಸಿಗಾಗಿ ತನಗೆ ಇದ್ದ ಉತ್ತಮ ಅವಕಾಶವನ್ನು ಕೈ ಬಿಟ್ಟಿದ್ದಾರೆ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ತನ್ನ ಅಸ್ತಿತ್ವವನ್ನು ಹುಟ್ಟು ಹಾಕಿ ನಾವು ಕೂಡ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತಮ್ಮ ಸಾಮರ್ಥ್ಯದ ಮೂಲಕ ಸಾಬೀತು ಪಡಿಸಿದ್ದಾರೆ. ಅದರಂತೆ ಕಾಶ್ಮೀರದ ಇಮಾಮ್ ಹಬೀಬ್ ಎಂಬ ಯುವತಿ ಬಾಲ್ಯದಿಂದಾನು ತಾನು ಪೈಲಟ್ ಆಗಬೇಕು ಎಂಬ ಮಹದಾಸೆಯನ್ನ ಹೊಂದಿದ್ದರಂತೆ. ನೋಡಲು ಸ್ಫುರದ್ರೂಪಿ ಆಗಿರುವ ಈಕೆ ಯಾವ ಸಿನಿಮಾ ತಾರೆಗೇನೂ ಕಡಿಮೆ ಇಲ್ಲ. ಅಷ್ಟು ಸೌಂದರ್ಯವತಿ ಆಗಿದ್ದಾರೆ ಈ ಮೂವತ್ತು ವರ್ಷದ ಇರಾಮ್ ಹಬೀಬ್. ಇರಾಮ್ ಹಬೀಬ್ ಅವರ ತಂದೆ ಅವರು ಕಾಶ್ಮೀರದ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನ ಪೂರೈಕೆ ಮಾಡುವ ಸಾಮಾನ್ಯ ವ್ಯಕ್ತಿಯಾಗಿದ್ದಾರೆ.

ಇರಾಮ್ ಹಬೀಬ್ ಅವರಿಗೆ ತಾನೊಬ್ಬ ಗಗನ ಸಖಿ ಆಗಬೇಕು ಎಂಬ ಗುರಿ ಇತ್ತಂತೆ. ಇದರ ನಡುವೆ ಓದಿನಲ್ಲಿ ವಿವಿಧ ಅಧ್ಯಾಯನ ನಡೆಸಿದ ಕಾರಣ ಅರಣ್ಯ ವಿಭಾಗದಲ್ಲಿ ಡಾಕ್ಟರೇಟ್ ಪಡೆಯುವ ಅವಕಾಶ ಕೂಡ ಸಿಗುತ್ತದೆ. ಆದರೆ ಬಾಲ್ಯದಿಂದ ಗಗನ ಸಖಿ ಆಗಬೇಕು ಎಂಬ ಕನಸು ಹೊತ್ತ್ತಿದ್ದ ಕಾರಣ ಇರಾಮ್ ಹಬೀಬ್ ಅವರು 2016 ರಲ್ಲಿ ಮಿಯಾಮಿಯ ಫ್ಲೈಯಿಂಗ್ ಸ್ಕೂಲಿನಲ್ಲಿ ಪೈಲಟ್ ತರಬೇತಿ ನಡೆಸುತ್ತಾರೆ. ಇದೀಗ ತನ್ನ ಕನಸಿನಂತೆ ಇರಾಮ್ ಹಬೀಬ್ ಅವರು ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆಯುವುದಕ್ಕಾಗಿ ಟ್ರೈನಿಂಗ್ ಪಡೆಯುತ್ತಿದ್ದಾರೆ. ಈ ಮೂಲಕ ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದನ್ನು ಮುಸ್ಲಿಂ ಸಮುದಾಯದ ಸಾಮಾನ್ಯ ಕುಟುಂಬದ ಹೆಣ್ಣು ಮಗಳು ಇರಾಮ್ ಹಬೀಬ್ ತೋರಿಸಿಕೊಟ್ಟು ಮಹಿಳೆಯರಿಗೆ ಮಾದರಿ ಆಗಿದ್ದಾರೆ.

Leave a Reply

%d bloggers like this: