ಕರ್ನಾಟಕದ ಟೀ ಇಂಡಿಯಾ ಕ್ರಿಕೆಟ್ ಆಟಗಾರ್ತಿಗೆ‌ ಪ್ರಪೋಸ್ ಮಾಡಿದ ಕ್ರಿಕೆಟ್ ಆಟಗಾರ

ಭಾರತೀಯ ಮಹಿಳಾ ಕ್ರಿಕೆಟ್ ಸ್ಟಾರ್ ಆಟಗಾರ್ತಿ ಇದೀಗ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡಲು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ವೇದಾ ಕೃಷ್ಣ ಮೂರ್ತಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏನಿದು ಈ ಹೊಸ ಸಮಾಚಾರ ಅನ್ನೋದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಇತ್ತೀಚೆಗೆ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಒಂದಷ್ಟು ಅಪ್ ಡೇಟ್ಸ್ ಗಳು ಅವರ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ಆಗ್ತಿದೆ. ಅದು ಸಿನಿಮಾ ಅಥವಾ ಕ್ರಿಕೆಟ್ ತಾರೆಗಳಿರ್ಬೋದು ಬ್ಯಾಚ್ಯುಲರ್ ಪಾರ್ಟಿಗಳು ಈಗ ಫ್ಯಾಮಿಲಿ ಪಾರ್ಟಿ ಸೇರ್ಕೋಳೋಕೇ ತಯಾರಿ ಆಗ್ತಿದ್ದಾರೆ. ಅದ್ರಂತೆ ಇದೀಗ ಭಾರತೀಯ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣ ಮೂರ್ತಿ ಅವರು ಕೂಡ ವಿವಾಹ ಆಗೋದಕ್ಕೆ ದಾಂಪತ್ಯ ಜೀವನದ ಹೊಸ್ತಿಲಲ್ಲಿ ಇದ್ದಾರೆ.

ಅದಕ್ಕೆ ಪೂರಕವಾಗಿ ವೇದಾ ಕೃಷ್ಣಮೂರ್ತಿ ಅವರು ತಮ್ಮ ಪ್ರಿಯಕರ ಅರ್ಜುನ್ ಹೊಯ್ಸಳ ಅವರೊಟ್ಟಿಗೆ ಇರೋ ಒಂದಷ್ಟು ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ವೇದಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಅದ್ರಂತೆ ಇದೀಗ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಇದ್ದಕಿದ್ದಂತೆ ತಮ್ಮ ಬಾಯ್ ಫ್ರೆಂಡ್ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಅರ್ಜುನ್ ಹೊಯ್ಸಳ ಅವರು ವೇದಾ ಕೃಷ್ಣಮೂರ್ತಿ ಅವರ ಎದುರು ಮಂಡಿಯೂರಿ ಲವ್ ಪ್ರಪೋಸಲ್ ಮಾಡಿ, ಪರಸ್ಪರ ಆಲಂಗಿಸಿಕೊಂಡಿದ್ದಾರೆ. ಅಂದ್ಹಾಗೇ ಯಾರಪ್ಪಾ ಈ ಅರ್ಜುನ್ ಹೊಯ್ಸಳ ಅಂತೀರಾ. ಅರ್ಜುನ್ ಹೊಯ್ಸಳ ಬೇರಾರು ಅಲ್ಲ.

ರಣಜಿ ಪಂದ್ಯಲ್ಲಿ ಕರ್ನಾಟಕ ತಂಡದ ಪರ ಆಡುತ್ತಿದ್ದರು. ಅದಲ್ಲದೇ ಕರ್ನಾಟಕದ ಒಂದಷ್ಟು ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಅರ್ಜುನ್ ಹೊಯ್ಸಳ ಗುರುತಿಸಿಕೊಂಡಿದ್ದಾರೆ. ಇನ್ನೂ ವೇದಾ ಕೃಷ್ಣ ಮೂರ್ತಿ ಅವರು ಚಿಕ್ಕ ಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನವರಾಗಿದ್ದಾರೆ. ಅವರು ಕೂಡ ಕ್ರಿಕೆಟ್ ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ಪಂದ್ಯದಲ್ಲಿ 78 ಏಕ ದಿನ ಪಂದ್ಯದಲ್ಲಿ ಭಾಗವಹಿಸಿದ್ದು, 829 ರನ್ ಗಳನ್ನ ಗಳಿಸಿದ್ದಾರೆ. ಅದರ ಜೊತೆಗೆ 76 ಟಿ ಟ್ವೆಂಟಿ ಪಂದ್ಯಗಳಲ್ಲಿ 875 ರನ್ ಗಳಿಸಿದ್ದಾರೆ. ಸದ್ಯಕ್ಕೆ ವೇದಾ ಕೃಷ್ಣ ಮೂರ್ತಿ ಅವರು ತಮ್ಮ ಬಾಯ್ ಫ್ರೆಂಡ್ ಅರ್ಜುನ್ ಹೊಯ್ಸಳ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿರೋ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಜೋಡಿಗಳ ಫೋಟೋಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

Leave a Reply

%d bloggers like this: