ಕರ್ನಾಟಕದ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ತೆಲುಗು ನಟ

ತೆಲುಗಿನ ಸ್ಟಾರ್ ನಟ ನಮ್ಮ ಬೆಂಗಳೂರು ಬೆಡಗಿಯ ಜೊತೆ ಸಪ್ತಪದಿ ತುಳಿದಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಸ್ಟಾರ್ ನಟ ನಟಿಯರ ಮದುವೆ ಅಂದರೆ ಸಾಕೂ ಭಾರಿ ಸುದ್ದಿಯ ಜೊತೆಗೆ ಅದ್ದೂರಿಯ ಮದುವೆ ಸಂಭ್ರಮಾಚರಣೆ ಇರುತ್ತದೆ. ಆದರೆ ಟಾಲಿವುಡ್ ಈ ಸ್ಟಾರ್ ನಟ ಸೈಲೆಂಟಾಗಿ ತಮ್ಮ ಆಪ್ತರು ಕುಟುಂಬದವರ ಸಮ್ಮುಖದಲ್ಲಿ ಸೈಲೆಂಟಾಗಿ ನಮ್ಮ ಕನ್ನಡತಿ ಹುಡುಗಿಯನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಅರೇ ಯಾರಪ್ಪಾ ಆ ತೆಲುಗಿನ ಸ್ಟಾರ್ ನಟ, ಈ ಸ್ಟಾರ್ ನಟನನ್ನ ಕೈ ಹಿಡಿದ ಆ ನಮ್ಮ ಕನ್ನಡತಿ ಯಾರು ಅಂತೀರಾ. ಹಾಗಿದ್ರೇ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಹೌದು ಇತ್ತೀಚೆಗೆ ಅನೇಕ ಯುವ ಸ್ಟಾರ್ ನಟ ನಟಿಯರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅದಕ್ಕೆ ನಮ್ಮ ಚಂದನವನದ ತಾರೆಯರು ಸಹ ಹೊರತುಪಡಿಸಿಲ್ಲ.

ಇತ್ತೀಚೆಗೆ ಅಂದರೆ ಕಳೆದ ತಿಂಗಳು ನವೆಂಬರಂದು ತೆಲುಗಿನ ಜನಪ್ರಿಯ ನಟ ನಾಗಶೌರ್ಯ ಅವರು ಬೆಂಗಳೂರಿನ ಇಂಟೇರಿಯರ್ ಡಿಸೈನರ್ ಆಗಿರೋ ಅನುಷಾ ಶೆಟ್ಟಿ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಹೌದು ಕಳೆದ ನವೆಂಬರ್ 20 ರಂದು ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ತಮ್ಮ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಇತ್ತೀಚೆಗೆ ನಟ ನಾಗಶೌರ್ಯ ಅವರು ನಟಿಸಿದ ಕೃಷ್ಣವೃಂದಾ ವಿಹಾರಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ ಇದರ ಯಶಸ್ಸಿನ ಅಲೆಯಲ್ಲಿ ನಾಗಶೌರ್ಯ ಇದ್ದರು, ಇದರ ಬೆನ್ನಲ್ಲೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟ ನಾಗಶೌರ್ಯ ಅವರು ತೆಲುಗು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು 2011 ರಲ್ಲಿ ತೆರೆಕಂಡಂತಹ ಕ್ರಿಕೆಟ್, ಗರ್ಲ್ಸ್ ಅಂಡ್ ಬಿಯರ್ ಸಿನಿಮಾಗಳ ಮೂಲಕ.

ನಾಗಶೌರ್ಯ ಅವರಿಗೆ ಬ್ರೇಕ್ ನೀಡಿದ ಸಿನಿಮಾ ಅಂದರೆ ಅದು ಊಹಲು ಗುಸುಗುಸುಲಾಡೆ ಸಿನಿಮಾ. ಅದರಂತೆ ಅಪಾರ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಚಂದಮಾಮ ಕಥಾಲು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡಾ ದೊರೆಯಿತು. ಈ ಸಿನಿಮಾದಲ್ಲಿ ನಟ ನಾಗಶೌರ್ಯ ಅವರ ನಟನೆ ಅಪಾರ ಪ್ರಶಂಸೆಗೆ ಒಳಪಟ್ಟಿತ್ತು. ಅದೇ ರೀತಿಯಾಗಿ ಟಾಲಿವುಡ್ ಆಪಲ್ ಬ್ಯೂಟಿ ಸಮಂತಾ ಅವರೊಟ್ಟಿಗೆ ನಟಿಸಿದ ಓಹ್ ಬೇಬಿ ಸಿನಿಮಾ ಸಹ ನಟ ನಾಗಶೌರ್ಯ ಅವರಿಗೆ ಭಾರಿ ನೇಮು ಫೇಮು ತಂದುಕೊಟ್ಟಿತ್ತು. ಇಂದು ನಟ ನಾಗಶೌರ್ಯ ಅವರು ತೆಲುಗು ಸಿನಿಮಾರಂಗದ ಜನಪ್ರಿಯ ಬೇಡಿಕೆಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದು, ಇದೀಗ ನಮ್ಮ ಬೆಂಗಳೂರಿನ ಬೆಡಗಿ ಅನುಷಾ ಶೆಟ್ಟಿ ಅವರೊಟ್ಟಿಗೆ ಸಪ್ತಪದಿ ತುಳಿದು ಸುದ್ದಿಯಾಗಿದ್ದಾರೆ. ಇವರಿಬ್ಫರ ಜೋಡಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: