ಕರ್ನಾಟಕ ರಾಜ್ಯದಲ್ಲಿ ಲೀಗಲ್ ಆಗಿ ಅತ್ಯಂತ ಶ್ರೀಮಂತ ರಾಜಕಾರಣಿ ಯಾರು ಗೊತ್ತಾ? ನಿಮ್ಮ ನಾಯಕರು ಎಷ್ಟು ಆಸ್ತಿ ಮಾಡಿದ್ದಾರೆ ನೋಡಿ ಒಮ್ಮೆ

ರಾಜಕೀಯ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಹಣ.ಯಾಕೆಂದರೆ ಹಣ ಇಲ್ಲದೆ ಇಂದು ರಾಜಕೀಯ ಕ್ಷೇತ್ರದಲ್ಲಿ ಹೆಸರು,ಪದವಿ ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂಬುವಷ್ಟರ ಮಟ್ಟಿಗೆ ಮಿತಿ ಮೀರಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ,ಪ್ರಜೆಗಳಿಗೋಸ್ಕರ ಜನರಿಂದ ಚುನಾಯಿತರಾಗಿ ಅಧಿಕಾರ ಪಡೆಯುವ ಜನಪ್ರತಿನಿಧಿಗಳು ತಾವು ಗೆದ್ದು ಬಂದಂತಹ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಗಮನ ನೀಡುವುದು ಅವರ ಆದ್ಯ ಕರ್ತವ್ಯ ಆಗಿರುತ್ತದೆ.ಆದರೆ ಶಾಸಕರು, ಸಂಸದರು, ಮಂತ್ರಿಗಳು ಅಂತಹ ಈ ಮಹತ್ವದ ಹುದ್ದೆಯನ್ನ ಏರಿ ಅವರು ಮಾಡುವಂತಹ ಕೆಲಸ ಕಾರ್ಯಗಳನ್ನು ನೋಡುತ್ತಲೇ ಇದ್ದಾವೆ. ರಾಷ್ಟ್ರ ರಾಜಕಾರಣದಿಂದ ಹಿಡಿದು ಸ್ಥಳೀಯ ಗ್ರಾಮ ಪಂಚಾಯ್ತಿ ಚುನಾವಣೆವರೆಗೆ ಈ ಭ್ರಷ್ಟಾಚಾರ,ಹಣ ಲೂಟಿ ಎಂಬುದನ್ನ ಕಾಣಬಹುದಾಗಿದೆ.

ಅಂತೆಯೇ ಕೋಟಿ ಕೋಟಿ ಸುರಿದು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು ಎಂದು ಚುನಾವಣೆಗಳಲ್ಲಿ ಹಣವನ್ನ ನೀರಿನಂತೆ ಖರ್ಚು ಮಾಡುತ್ತಾರೆ.ಹಾಗಾದರೆ ಕರ್ನಾಟಕ ರಾಜ್ಯದ ಯಾವ ಯಾವ ರಾಜಕಾರಣಿಗಳ ಹತ್ತಿರ ಎಷ್ಟು ಎಷ್ಟು ಹಣ ಹೊಂದಿದ್ದಾರೆ. ಅತ್ಯಂತ ಹೆಚ್ಚು ಶ್ರೀಮಂತ ಪ್ರಭಾವಿ ರಾಜಕೀಯ ವ್ಯಕ್ತಿಗಳು ಯಾರು ಎಂದು ತಿಳಿಯುವುದಾದರೆ.ರಾಜಕೀಯದಲ್ಲಿ ಇರುವ ಎಲ್ಲರೂ ಕೂಡ ಲೂಟಿಕೋರರು ಎಂದು ಹೇಳಲು ಸಾಧ್ಯವಿಲ್ಲ. ಅವರಲ್ಲಿಯೂ ಕೂಡ ಒಂದಷ್ಟು ಜನರು ಉದ್ಯಮ ನಡೆಸುತ್ತಿರುವವರು, ತಮ್ಮದೆಯಾದಂತಹ ವೈಯಕ್ತಿಕ ಆದಾಯದ ಮೂಲಗಳು,ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.ಇನ್ನು ಅದರಂತೆ ಕಾನೂನಿನ ಪ್ರಕಾರ ಸಂಪಾದಿಸಿ ಕೋಟ್ಯಾಂತರ ರೂ.

ಆಸ್ತಿ ಹೊಂದಿರುವ ರಾಜಕೀಯ ನಾಯಕರನ್ನ ತಿಳಿಯುವುದಾದರೆ ರಾಜಧಾನಿ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕರಾದ ಹ್ಯಾರೀಸ್ ಅವರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು,ಇವರ ಬಳಿ ಬರೋಬ್ಬರಿ 220 ಕೋಟಿ ಆಸ್ತಿಯಿದೆ. ಇನ್ನು ಇವರ ಮಗ ನಲಪಾಡ್ ಹ್ಯಾರಿಸ್ ಕೂಡ ಕಾಂಗ್ರೆಸ್ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದಾರೆ.ಇನ್ನು ನೈಸ್ ಸಂಸ್ಥೆಯ ಮುಖ್ಯಸ್ಥರಾದಂತಹ ಅಶೋಕ್ ಖೇಣಿ ಅವರು ಬೀದರ್ ಕ್ಷೇತ್ರದಿಂದ ಪ್ರತನಿಧಿಸಿದ್ದ ಮಾಜಿ ಶಾಸಕರಾಗಿದ್ದು,ಇವರು ಬರೋಬ್ಬರಿ ಇನ್ನೂರು ಕೋಟಿ ಆಸ್ತಿಯನ್ನ ಹೊಂದಿದ್ದಾರೆ.ಹಾಗೇ ಬಸವನಗುಡಿ ಕ್ಷೇತ್ರದ ಬಾಗೇಗೌಡರು ಮುನ್ನೂರ ಇಪ್ಪತ್ತು ಕೋಟಿ ಆಸ್ತಿಯನ್ನ ಹೊಂದಿದ್ದಾರೆ.

ಐರನ್ ಅಂಡ್ ಗಣಿಗಾರಿಕೆ ಉದ್ಯಮದಲ್ಲಿ ಹೆಸರಾಗಿರುವ ಕಲಘಟಗಿ ಕ್ಷೇತ್ರದ ಶಾಸಕರಾಗಿರುವ ಮಾಹಿತಿ ಮತ್ತು ಮೂಲ ಸೌಕರ್ಯ ಸಚಿವರಾಗಿರುವ ಸಂತೋಷ್ ಲಾಡ್ ಅವರು ಸರಿ ಸುಮಾರು ಮುನ್ನೂರ ಇಪ್ಪತ್ತು ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರೆ.ಇವರ ಸೋದರ ಗಣಿಕಾರಿಕೆ,ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ಲಾಡ್ ಕೂಡ ಬರೋಬ್ಬರಿ ನಾನೂರು ಕೋಟಿ ಆಸ್ತಿಯನ್ನ ಹೊಂದಿದ್ದಾರೆ.ಬೆಂಗಳೂರಿನ ವಿಜಯ ನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ಇನ್ನೂರ ಐವತ್ತು ಕೋಟಿ ಆಸ್ತಿ ಹೊಂದಿದ್ದಾರೆ.ಕೆ.ಆರ್.ಪುರಂ ಶಾಸಕರಾದ ಭೈರತಿ ಸುರೇಶ್ ನಾನೂರು ಕೋಟಿ ಆಸ್ತಿ ಮೌಲ್ಯ ಹೊಂದಿದ್ದಾರೆ.

ಕನಕಪುರ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದು, ಕೃಷಿ,ಸಿನಿಮಾ, ಕಾಲೇಜು ಹೀಗೆ ಇತರೆ ವ್ಯವಹಾರಗಳನ್ನೊಳಗೊಂಡ ಉದ್ಯಮಿಯಾಗಿರುವ ಇವರ ಬಳಿ 850 ಕೋಟಿಗೂ ಅಧಿಕ ಆಸ್ತಿಯನ್ನ ಹೊಂದಿದ್ದಾರೆ .ಎಂಟಿಬಿ ನಾಗರಾಜ್ 880 ಕೋಟಿ ಆಸ್ತಿಯನ್ನ ಹೊಂದಿದ್ದರೆ,ಇವರ ಹೆಂಡತಿಯ ಹೆಸರಿನಲ್ಲಿ ಬರೋಬ್ಬರಿ 1200.ಕೋಟಿ ಆಸ್ತಿಯಿದೆ ಎಂದು ತಿಳಿದು ಬಂದಿದೆ.ಒಟ್ಟಾರೆಯಾಗಿ ಶ್ರೀಮಂತ ರಾಜಕೀಯ ವ್ಯಕ್ತಿಗಳಾಗಿ ಒಂದಷ್ಟು ರಾಜಕೀಯ ಮಂದಿ ತಮ್ಮ ಆದಾಯದ ಆಸ್ತಿಯ ಮೌಲ್ಯದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ. ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಿಗಾಗಿ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.