ಕರ್ನಾಟಕ ಸರ್ಕಾರದ ಲಾಂಛನವಾಗಿರುವ ಗಂಡ ಬೇರುಂಡ ಪಕ್ಷಿಯ ರೋಚಕ ಇತಿಹಾಸದ ಬಗ್ಗೆ ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ

ಸಾಮಾನ್ಯವಾಗಿ ನಮಗೆ ಇಂದಿನ ದಿನಮಾನಗಳಲ್ಲಿ ಜಗತ್ತಿನ ಎಲ್ಲಾ ವಿಚಾರಗಳ ಬಗ್ಗೆ ಅಂಗೈಯಲ್ಲಿ ಮಾಹಿತಿ ಸಿಗುತ್ತವೆ.ನಮಗೆ ಬೇಕಾದಾಗ ಅಗತ್ಯವಿದ್ದ ಮಾಹಿತಿ ವಿಚಾರಗಳನ್ನು ಕ್ಷಣಾರ್ಧದಲ್ಲಿ ತಿಳಿಯಬಹುದಾಗಿರುತ್ತದೆ. ಆದರೆ ನಮಗೆ ನಮ್ಮ ರಾಜ್ಯದ ಇತಿಹಾಸ ಮತ್ತು ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿದಿರುವುದಿಲ್ಲ.ಅಂತಹ ವಸ್ತು ವಿಚಾರಗಳಲ್ಲಿ ರಾಜ್ಯದ ಲಂಆಛನ ಕೂಡ ಒಂದು.ದೇಶದ ಪ್ರತಿಯೊಂದು ರಾಜ್ಯಕ್ಕೂ ಅದರದೇ ಆದ ಸಾಂಕೇತಿಕ ಲಾಂಛನ,ವಿನ್ಯಾಸ ಇರುತ್ತದೆ.ಅದರಂತೆ ಕರ್ನಾಟಕ ರಾಜ್ಯಕ್ಕೂ ಕೂಡ ಗಂಡಭೇರುಂಡ ಲಾಂಛನವಿದೆ.ಎರಡು ತಲೆಯ ಹದ್ದಿನ ಸ್ವರೂಪ ಹೊಂದಿದ್ದಾಗಿರುತ್ತದೆ.ಈ ಗಂಡಭೇರುಂಡ ಎಂಬ ಪಕ್ಷಿಯ ಹಿನ್ನೆಲೆಯನ್ನು ತಿಳಿಯುವುದಾದರೆ ಇದೊಂದು ಕಾಲ್ಪನಿಕ ಪಕ್ಷಿಯಾಗಿದ್ದು,ಮಹಾ ವಿಷ್ಣುವಿನ ಅವತಾರ ಎಂಬ ಪೌರಾಣಿಕ ಕಥೆಯೊಂದು ಬಿಚ್ಚಿಟ್ಟುಕೊಳ್ಳುತ್ತದೆ.

ಅಸುರ ರಾಜನಾಗಿದ್ದಂತಹ ಹಿರಣ್ಯ ಕಶ್ಯಪುವನ್ನು ಶ್ರೀ ಮಹಾವಿಷ್ಣು ನರಸಿಂಹನ ಅವತಾರ ತಾಳಿ ಕೊಂದ ಬಳಿಕವೂ ಕೂಡ ವಿಷ್ಣುವಿನ ಆ ಕೋಪ ಇಳಿದಿರಲಿಲ್ಲವಂತೆ.ಆಗ ಶಿವನು ವಿಷ್ಣುವಿನ ಕೋಪವನ್ನು ತಣಿಸಲು ಶರಭೇಶ್ವರನ ಸ್ವರೂಪ ತಾಳಬೇಕಾಯಿತು.ಇದಕ್ಕೆ ಪ್ರತಿಯಾಗಿ ಶರಭೇಶ್ವರ ರೂಪ ತಾಳಿದ್ದ ಶಿವನನ್ನೇ ಎದುರಿಸಲು ಮಹಾವಿಷ್ಣು ಗಂಡಭೇರುಂಢ ರೂಪದಲ್ಲಿ ಕಾಣಿಸಿಕೊಂಡನು ಎಂದು ಮಾರ್ಕಂಡೇಯ ಪುರಾಣದಲ್ಲಿ ಗಂಡಭೇರುಂಢ ರೂಪದ ಬಗ್ಗೆ ತಿಳಿಸಲಾಗಿದೆ.ಈ ಗಂಡಭೇರುಂಡ ಪಕ್ಷಿಯು ತುಂಬಾ ವಿಚಿತ್ರವಾಗಿದ್ದು,ಎರಡು ತಲೆ,ಎರಡು ಕೊಕ್ಕು ಹೊಂದುವುದರ ಜೊತೆಗೆ ತನ್ನ ಕಾಲಿನಲ್ಲಿ ನಾಲ್ಕು ಆನೆಗಳನ್ನ ಹಿಡಿದಿಟ್ಟಿಕೊಂಡಿರುವಂತೆ ಇರುವುದು ವಿಶೇಷವಾಗಿ ಕಾಣುತ್ತದೆ. ಈ ವಿಶೇಷವಾದ ಗಂಡಭೇರುಂಡ ಪಕ್ಷಿಯ ಶಿಲ್ಪಕಲೆಯನ್ನು ಕೆಳದಿಯ ಪ್ರಾಚೀನ ರಾಮೇಶ್ವರ ದೇಗುಲದಲ್ಲಿ ಕಾಣಬಹುದಾಗಿದೆ.

ಚಾಲುಕ್ಯರು ಈ ಪಕ್ಷಿಗೆ ಮೊಟ್ಟ ಮೊದಲು ಮಾನವ ರೂಪವನ್ನು ನೀಡುತ್ತಾರೆ.ಇವರ ಆಡಳಿತ ಅವಧಿಯಲ್ಲಿ ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯದಲ್ಲಿ ದೊಡ್ಡದಾದಂತಹ ಮಾನವಾಕೃತಿಯನ್ನು ಹೊಂದುವಂತಹ ಗಂಡಭೇರುಂಢ ಪಕ್ಷಿಯನ್ನು ಕೆತ್ತಲಾಯಿತು.ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದರೆ 1947 ರಿಂದ 1956 ರ ವರೆಗೆ ಮೈಸೂರು ರಾಜ್ಯದ ಲಾಂಛನವನ್ನಾಗಿ ಈ ಗಂಡಭೇರುಂಡ ಲಾಂಛನವನ್ನ ಬಳಸಲಾಗುತ್ತಿತ್ತು.ತದ ನಂತರದಲ್ಲಿ 1973 ಕರ್ನಾಟಕ ಏಕೀಕರಣ ಮೈಸೂರು ರಾಜ್ಯ ಎಂಬ ಹೆಸರು ಅಳಿಸಿ ಕರ್ನಾಟಕ ರಾಜ್ಯ ಎಂಬ ಹೆಸರು ಬಂದರೂ ಕೂಡ ಅಂದಿನಿಂದ ಇಂದಿನವರೆಗೆ ರಾಜ್ಯ ಲಾಂಛನದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡದೇ ಗಂಡಭೇರುಂಡ ಲಾಂಛನವನ್ನೇ ರಾಜ್ಯದ ಸಾಂಕೇತಿಕ ಚಿಹ್ನೆಯಾಗಿ ಬಳಸಿಕೊಂಡು ಬರುತ್ತಿದ್ದೇವೆ.