ಕರ್ನಾಟಕ ಮೂಲದ ಖ್ಯಾತ ನಟನ ಮಗಳನ್ನು ಶೀಘ್ರದಲ್ಲೇ ಕೈಹಿಡಿಯಲಿದ್ದಾರೆ ಕೆಎಲ್ ರಾಹುಲ್ ಅವರು

ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ನಂತರ ಅತಿ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ ಅಂದರೆ ಅದು ಕನ್ನಡಿಗ ಕೆಎಲ್ ರಾಹುಲ್. ತಮ್ಮ ಬ್ಯಾಟಿಂಗ್ ವೈಖರಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ನಾಯಕರಾಗಿ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಅಚ್ಚು ಮೆಚ್ಚಿನ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಕೆಎಲ್ ರಾಹುಲ್ ಅವರ ಅಧ್ಭುತ ಆಲ್ ರೌಂಡರ್ ಆಗಿ ಬಹುತೇಕ ಬಾರಿ ಕ್ರಿಕೆಟ್ ಅಭಿಮಾನಿಗಳು ರಾಹುಲ್ ಅವರನ್ನ ಭವಿಷ್ಯದ ಟೀಮ್ ಇಂಡಿಯಾ ನಾಯಕ ಅಂತಾನೇ ಕರೆಯುತ್ತಿದ್ದರು. ಇನ್ನು ಇದೀಗ ಕೆಎಲ್ ರಾಹುಲ್ ಅವರು ಸುದ್ದಿಗೆ ಬರುವುದಕ್ಕೆ ಕಾರಣ ಏನಪ್ಪಾ ಅಂದರೆ ಅವರ ಲವ್ ಕಮ್ ಅರೆಂಜ್ ಮ್ಯಾರೇಜ್ ವಿಚಾರವಾಗಿ.

ಹೌದು ಈ ಕ್ರಿಕೆಟ್ ಕ್ಷೇತ್ರ ಮತ್ತು ಬಾಲಿವುಡ್ ಅಂಗಳಕ್ಕೂ ಒಂದು ಅವಿನಾಭಾವ ಸಂಬಂಧ ಇರ್ಬೇಕು. ಯಾಕಪ್ಪಾ ಅಂದ್ರೆ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಅನೇಕ ನಟಿಯರನ್ನ ಭಾರತೀಯ ಕ್ರಿಕೆಟ್ ತಂಡದ ಒಂದಷ್ಟು ಆಟಗಾರರು ಪ್ರೀತಿಸಿ ಮದ್ವೆ ಕೂಡ ಆಗ್ಬಿಡ್ತಾರೆ. ಅದರಂತೆ ಕೆಎಲ್ ರಾಹುಲ್ ಕೂಡ ಬಾಲಿವುಡ್ ಸ್ಟಾರ್ ನಟರಾದ ಕರ್ನಾಟಕ ಮೂಲದ ಸುನೀಲ್ ಶೆಟ್ಟಿ ಪುತ್ರಿ ನಟಿ ಅತಿಥಿ ಶೆಟ್ಟಿ ಅವರನ್ನ ಪ್ರೀತಿಸುತ್ತಿದ್ದರು. ಮೂಲತಃ ಕರಾವಳಿ ಭಾಗದ ಕನ್ನಡಿಗರಾಗಿರುವ ಸುನೀಲ್ ಶೆಟ್ಟಿ ಅವರು ತಮ್ಮ ಪುತ್ರಿ ಅತಿಥಿ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ಪರಸ್ಪರ ಪ್ರೀತಿಸುತ್ತಿರುವ ವಿಷಯ ತಿಳಿದು ಇಬ್ಬರಿಗೂ ಮದುವೆ ಮಾಡುವುದಾಗಿ ಈ ಹಿಂದೆ ತಿಳಿಸಿದ್ದರು. ಇದೀಗ ಆ ಸುಸಂಧರ್ಭ ಕಂಕಣ ಭಾಗ್ಯ ಕೂಡಿ ಬಂದಿದೆ.

ಹೌದು ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಯುವ ನಟಿ ಅತಿಥಿ ಶೆಟ್ಟಿ ಅವರ ಮದುವೆಯ ಯೋಜನೆ ಆರಂಭಗೊಂಡಿದೆ. ಎರಡೂ ಕುಟುಂಬದವರು ಕೂತು ಮಾತನಾಡಿಕೊಂಡು ಇವರಿಬ್ಬರ ಮದುವೆಯನ್ನ ಅದ್ದೂರಿಯಾಗಿಯೇ ಮಾಡಲು ನಿರ್ಧರಿಸಿದ್ದಾರಂತೆ. ಮೂಲಗಳ ಪ್ರಕಾರ ಕೆಎಲ್ ರಾಹುಲ್ ಮತ್ತು ಅತಿಥಿ ಶೆಟ್ಟಿ ಅವರ ಮದುವೆ ಮುಂದಿನ ವರ್ಷ ಆರಂಭದಲ್ಲಿ ಅಂದರೆ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಬಹು ವರ್ಷಗಳ ಪ್ರೇಯಸಿ ಅತಿಥಿ ಶೆಟ್ಟಿ ಅವರನ್ನ ತಮ್ಮ ಜೀವನ ಸಂಗಾತಿಯಾಗಿ ವರಿಸುತ್ತಿದ್ದಾರೆ. ಈ ಸುದ್ದಿ ಇದೀಗ ಬಿಟೌನ್ ನಲ್ಲಿ ವೈರಲ್ ಆಗಿದ್ದು ಕೆಎಲ್ ರಾಹುಲ್ ಅವರ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.