ಕರೀನಾ,ಸೈಫ್ ಅಲಿ ಖಾನ್’ರ ಮಗ ತೈಮೂರ್ ನ್ನು ನೋಡಿಕೊಳ್ಳುವ ಆಯಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ದೇಶದ ಪ್ರಧಾನಿಮಂತ್ರಿ ಗಿಂತ ಜಾಸ್ತಿ

ಬಾಲಿವುಡ್ ಸ್ಟಾರ್ ದಂಪತಿಗಳಾದ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಅವರು ತಮ್ಮ ಸಿನಿಮಾಗಳ ವಿಚಾರವಾಗಿ ಸುದ್ದಿ ಆಗುವಷ್ಟೇ ಆಗಾಗ ತಮ್ಮ ಮಕ್ಕಳ ವಿಚಾರವಾಗಿಯೂ ಕೂಡ ಭಾರಿ ಸುದ್ದಿಯಾಗುತ್ತಿರುತ್ತಾರೆ. ಹೌದು ಬಿ-ಟೌನ್ ನಲ್ಲಿ ದಿನ ನಿತ್ಯ ಸ್ಟಾರ್ ನಟ-ನಟಿಯರ ಬಗ್ಗೆ ನೂರಾರು ಗಾಸಿಪ್ ಗಳು, ಸಿನಿಮಾಗಳ ಮಾಹಿತಿಗಳು ಮತ್ತು ಅವರ ವೈಯಕ್ತಿಕ ಜೀವನದ ಕುತೂಹಲಕಾರಿ ವಿಷಯಗಳು ಹೊರ ಬರುತ್ತಲೇ ಇರುತ್ತವೆ. ಸಿನಿಮಾ ತಾರೆಯರು ಸುದ್ದಿಯಲ್ಲಿರುವುದು ಹೊಸದೇನಲ್ಲ. ಆದರೆ ತಮ್ಮ ವೈಯಕ್ತಿಕ ಜೀವನದ ಕುರಿತು ಸುದ್ದಿಯಾಗುವುದು ಕೆಲವು ನಟ-ನಟಿಯರಿಗೆ ಅಸಮಾಧಾನ ಕೂಡ ಆಗುತ್ತದೆ. ಇದೀಗ ಬಾಲಿವುಡ್ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರು ಈಗ ತಮ್ಮ ಮಕ್ಕಳನ್ನ ನೋಡಿಕೊಳ್ಳಲು ನರ್ಸ್ ಒಬ್ಬರನ್ನ ನೇಮಕ ಮಾಡಿಕೊಂಡಿದ್ದಾರೆ. ಈ ವಿಚಾರವಾಗಿ ಸುದ್ದಿ ಅಗಿದ್ದಾರೆ ಅಂತಲ್ಲ. ಆದರೆ ನೇಮಕ ಮಾಡಿಕೊಂಡಿರುವ ಆ ನರ್ಸ್ ಗೆ ಈ ಸ್ಟಾರ್ ದಂಪತಿಗಳು ನೀಡುತ್ತಿರುವ ಸಂಬಳ ಕೇಳಿ ಇಡೀ ಬಿ-ಟೌನ್ ಅಚ್ಚರಿ ವ್ಯಕ್ತಪಡಿಸಿದೆ.

ಹೌದು ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳು ಅಂದರೆ ಚಿತ್ರೀಕರಣ, ಪೋಟೋಶೂಟ್, ಇವೆಂಟ್ ಪ್ರೋಗ್ರಾಂ ಅಂತಹ ಇನ್ನಿತರ ಕೆಲಸ ಕಾರ್ಯಗಳಲ್ಲಿ ಬಿಝಿ಼ ಆಗಿರುತ್ತಾರೆ. ಹಾಗಾಗಿ ತಮ್ಮ ಮನೆಯ ಕಡೆ ತಮ್ಮ ಮಕ್ಕಳ ಬಗ್ಗೆ ಗಮನ ನೀಡುವುದು ಸ್ವಲ್ಪ ಕಷ್ಟಕರವಾಗಿರುತ್ತದೆ. ಇಂತಹ ಸಂಧರ್ಭದಲ್ಲಿ ಅನೇಕ ಸಿನಿಮಾ ನಟ-ನಟಿಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ, ಅವರ ಯೋಗ ಕ್ಷೇಮ ಉಪಚಾರ ಮಾಡುವುದಕ್ಕೆ ಅಂತಾನೇ ಕೆಲಸದವರನ್ನ ನೇಮಕ ಮಾಡಿಕೊಳ್ಳುತ್ತಾರೆ. ಇದೀಗ ಅಂತೆಯೇ ಹಿಂದಿ ಚಿತ್ರರಂಗದ ಖ್ಯಾತ ನಟ ಸೈಫ್ ಅಲಿಖಾನ್ ಮತ್ತ ನಟಿ ಕರೀನಾ ಕಪೂರ್ ಅವರು ಕೂಡ ತಮ್ಮ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ನರ್ಸ್ ಒಬ್ಬರನ್ನ ನೇಮಕ ಮಾಡಿಕೊಂಡಿದ್ದಾರೆ. ಹೌದು ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ಇಬ್ಬರು ಕೂಡ ಜನಪ್ರಿಯ ಬಹು ಬೇಡಿಕೆಯ ಕಲಾವಿದರಾಗಿದ್ದು ಬಾಲಿವುಡ್ ನಲ್ಲಿ ಸಖತ್ ಬಿಝಿ ಇರುತ್ತಾರೆ.

ಹಾಗಾಗಿ ತಮ್ಮ ಮಕ್ಕಳಾದ ಜೆಹ್ ಅಲಿ ಮತ್ತು ತೈಮೂರ್ ನೋಡಿಕೊಳ್ಳಲು ನರ್ಸ್ ಒಬ್ಬರಿಗೆ ತಿಂಗಳಿಗೆ ಬರೋಬ್ಬರಿ ಒಂದೂವರೆ ಲಕ್ಷ ಸಂಬಳ ಕೊಟ್ಟು ನೇಮಕ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ಓಡಾಡಲು ದುಬಾರಿ ಕಾರು ಮತ್ತು ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಹೆಚ್ಚುವರಿ ವೇತನ ಕೂಡ ನೀಡುತ್ತಾರಂತೆ. ಇದರ ಜೊತೆಗೆ ವಿವಿಧ ರೀತಿಯ ಸೌಲಭ್ಯ ಸೌಕರ್ಯ ಕೂಡ ಮಾಡಿದ್ದಾರಂತೆ. ಸೈಫ್ ಅಲಿಖಾನ್ ಮತ್ತು ಕರೀನಾ ಕಪೂರ್ ದಂಪತಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ನರ್ಸ್ ಒಬ್ಬರಿಗೆ ಇಷ್ಟು ದೊಡ್ಡ ಮೊತ್ತದ ವೇತನ ನೀಡುತ್ತಿರುವುದು ಇದೀಗ ಬಿ-ಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

%d bloggers like this: