ಕರೀನಾ ಕಪೂರ್ ಅವರ ಮನೆಗೆ ಬಂತು ದುಬಾರಿ ಬೆಲೆಯ ಬೆಂಜ್ ಕಾರು, ಬೆಲೆ ಎಷ್ಟು

ಬಾಲಿವುಡ್ ನಲ್ಲಿ ಈ ಸ್ಟಾರ್ ನಟ ನಟಿಯರಿಗೆ ತಮ್ಮ ಪ್ರತಿಸ್ಪರ್ಧಿ ನಟ ನಟಿಯರು ತಮಗಿಂತ ಉತ್ತಮ ಸಿನಿಮಾ ನೀಡಿದ್ರು. ಅವರಿಗಿಂತ ನಾನು ಇನ್ನೂ ಉತ್ತಮ ಸಿನಿಮಾ ಮಾಡ್ಬೇಕು ಅಂತ ಒಂದು ರೀತಿಯ ಸ್ಪರ್ಧಾತ್ಮಕ ಮನೋಭಾವ ಇದ್ದೇ ಇರುತ್ತೆ. ಅದರ ಜೊತೆಗೆ ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಹೈಫೈ ಲೈಫ್ ಲೀಡ್ ಮಾಡೋಕೂ ಕೂಡ ಮುಂದಾಗ್ತಾರೆ. ಅದ್ರಲ್ಲೂ ಈ ಕಾರ್ ಕೊಳ್ಳುವುದರಲ್ಲಿ ಅಂತೂ ಭಾರಿ ಉತ್ಸುಕರಾಗಿರ್ತಾರೆ. ಈ ಕಾರ್ ಕ್ರೇಜ಼್ ಕೇವಲ ನಟರಿಗೆ ಮಾತ್ರ ಅಲ್ಲ ನಟಿಯರಿಗೂ ಕೂಡ ಇದ್ದೇ ಇರುತ್ತೆ. ಅದರಂತೆ ಇದೀಗ ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಕೂಡ ಹೊಸ ಕಾರ್ ಖರೀದಿ ಮಾಡಿ ಸುದ್ದಿ ಆಗಿದ್ದಾರೆ. ಹೌದು ನಟಿ ಕರೀನಾ ಕಪೂರ್ ಶೂಟಿಂಗ್ ಇಲ್ಲದ ಬಿಡುವಿನ ವೇಳೆಯಲ್ಲಿ ಹೊರ ದೇಶಗಳಿಗೆ ಹೋಗುತ್ತಲೇ ಇರ್ತಾರೆ.

ಅಲ್ಲಿ ಅವರಿಗೆ ಇಂಪೋರ್ಟೆಡ್ ಕಾರ್ ಗಳಲ್ಲಿ ಓಡಾಡೋಕೆ ತುಂಬಾ ಇಷ್ಟ ಪಡ್ತಾರೆ. ಅದರಂತೆ ಮಾರುಕಟ್ಟೆಗೆ ಬರುವಂತಹ ಹೊಸ ಹೊಸ ಕಾರಿನ ಬಗ್ಗೆ ಅವುಗಳ ವಿಶೇಷತೆಯ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿರ್ತಾರೆ. ಅದರಲ್ಲೂ ಕರೀನಾ ಕಪೂರ್ ಅವರಿಗೆ ಮರ್ಸಿಡಿಸ್ ಬೆಂಝ್ ಕಾರ್ ಗಳೆಂದರೆ ಬಲು ಇಷ್ಟ. ಅವರ ಬಳಿ ಈಗಾಗಲೇ ಒಂದಷ್ಟು ಕಾರುಗಳಿವೆ. ಅದರ ಜೊತೆಗೆ ಇದೀಗ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ s350d ಮಾದರಿಯ ಕಾರನ್ನ ಕೂಡ ಖರೀದಿ ಮಾಡಿದ್ದಾರೆ. ಇದರಲ್ಲಿ ಅತ್ಯಾಧುನಿಕ ಆಕರ್ಷಕ ಫೀಚರ್ ಗಳನ್ನ ನೋಡಬಹುದು. ಈ ಹೊಸ ಮರ್ಸಿಡಿಸ್ ಬೆಂಝ್ ಕಾರಿನ ಮುಂಭಾಗದಲ್ಲಿ ಕಪ್ಪು ಬಣ್ಣದ ಗ್ರಿಲ್ ಇದ್ದು, ಡಿಜಿಟಲ್ ಎಲ್ಇಡಿ ಹೆಡ್ ಲೈಟ್ ಅಂಡ್ 20 ಇಂಚಿನ ಅಲಾಯ್ ವ್ಹೀಲ್ ಗಳನ್ನೊಂದಿದೆ.

ಇದರಲ್ಲಿ 12.8 ಇಂಚಿನ ಡಿಜಿಟಲ್ ಎಂಐಡಿ ಟಚ್ ಸ್ಕ್ರಿನ್, ಎಂಬಿಯುಎಕ್ಸ್ ವಾಯ್ಸ್ ಕಂಟ್ರೋಲ್ ಸೇರಿದಂತೆ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಶನ್, ಮಸಾಜ್ ಫಂಕ್ಷನ್, ಬರ್ಮಿಸ್ಟರ್ 4ಡಿ ಸರೌಂಡ್ ಸೌಂಡ್ ಸಿಸ್ಟಂ ಅಂತಹ ಫೀಚರ್ಸ್ ಗಳನ್ನ ಹೊಂದಿದೆ. ಇನ್ನೂ ಸೇಫ್ಟಿ ವಿಚಾರವಾಗಿ ಕಾರಿನಲ್ಲಿ 10 ಏರ್ ಬ್ಯಾಗ್ ಗಳಿದ್ದು, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್, ಸೈಡ್ ಡಿಕ್ಕಿಂಗ್ ಮಾನಿಟರಿಂಗ್ ಅಂಡ್ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ವ್ಯವಸ್ಥೆಯನ್ನೊಳಗೊಂಡಿದೆ. ಇನ್ನು ಇಂಧನದ ಸಾಮರ್ಥ್ಯ ವಿಚಾರವಾಗಿ ನೋಡೋದಾದ್ರೆ ಪೆಟ್ರೋಲ್ ಅಂಡ್ 3.0 ಲೀಟರ್ ಡೀಸೆಲ್ ಇಂಜಿನ್ ಅಂತಹ ಎರಡೂ ಆಯ್ಕೆಗಳನ್ನೊಂದಿದೆ. ಪೆಟ್ರೋಲ್ ಇಂಜಿನ್ 367 ಬಿಎಚ್ಪಿ ಪವರ್ ಅಂಡ್ 500 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡಿದರೆ.

ಡೀಸೆಲ್ ಎಂಜಿನ್ 286 ಬಿಎಚ್ಪಿ ಪವರ್ ಅಂಡ್ 600 ಎನ್ಎಮ್ ಟಾರ್ಕ್ ಅನ್ನ ಉತ್ಪಾದನೆ ಮಾಡುತ್ತದೆ. ಇಂತಹ ಅಡ್ವಾನ್ಸ್ಡ್ ಫೀಚರ್ಸ್ ಹೊಂದಿರೋ ಬರೋಬ್ಬರಿ 1.95 ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರನ್ನ ಕರೀನಾ ಕಪೂರ್ ಅವರು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಈ ಹೊಸ ಮರ್ಸಿಡಿಸ್ ಕಾರ್ ಹತ್ತೋವಾಗ ತಮ್ಮ ಕಿರಿಯ ಮಗ ಜೆಹ್ ಅನ್ನ ಕಂಕುಳಲ್ಲಿ ಎತ್ಕೊಂಡಿರೋ ಪೋಟೋ ವೈರಲ್ ಆಗಿತ್ತು. ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ತಾರಾ ಜೋಡಿಗಳು ತಮ್ಮ ಸಿನಿಮಾ, ಲೈಫ್ ಸ್ಟೈಲ್ ವಿಚಾರವಾಗಿ ಸುದ್ದಿ ಆದಂತೆ ತಮ್ಮಿಬ್ಬರ ಮಕ್ಕಳಿಗೆ ತೈಮೂರ್ ಮತ್ತು ಜೆಹ್ ಎಂಬ ಹೆಸರನ್ನ ಇಡುವ ಮೂಲಕ ಕೂಡ ಭಾರಿ ಟೀಕೆಗೆ ಒಳಪಟ್ಟಿದ್ದರು.