ಕನ್ಯಾಕುಮಾರಿ ಧಾರಾವಾಹಿ ನಟ ಧ್ರುವ ನಿಜಕ್ಕೂ ಯಾರು ಗೊತ್ತಾ? ತಡವಾಗಿ ಗೊತ್ತಾಯ್ತು ಅಸಲಿ ಸತ್ಯ.. ನೋಡಿ ಒಮ್ಮೆ

ಇವರು ಜೀವನೋಪಾಯಕ್ಕಾಗಿ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದರು. ಬಣ್ಣದ ಲೋಕದಲ್ಲಿ ಮಿಂಚುವ ಕನಸೊತ್ತು ಬೆಂಗಳೂರಿನ ಹಾದಿ ಹಿಡಿದ ಈ ಮೈಸೂರಿನ ಹೈದನಿಗೆ ಗೊತ್ತಾಗಿದ್ದು ನಿಜವಾದ ಬಣ್ಣದ ಬದುಕು ಹಸಿವನಿ ಸಂಕಟ ಆದಾಗ. ಕೈಯಲ್ಲಿದ್ದ ಹಣ ಖಾಲಿ ಆದಾಗ. ಹೊಟ್ಟೆ ಪಾಡಿಗೆ ಫುಡ್ ಡೆಲಿವರಿ ಕೆಲಸ ಮಾಡಲು ಆರಂಭ ಮಾಡಿದ ಇವರು ಬಿಡುವಿನ ವೇಳೆಯಲ್ಲಿ ಸಿನಿಮಾ, ಸೀರಿಯಲ್ ಅಂತೇಳಿ ಅಡಿಶನ್ ಕೊಡ್ತಾನೇ ಇರ್ತಾರೆ. ಒಂದು ದಿನ ಹೀಗೆ ತಮ್ಮ ಪರಿಶ್ರಮಕ್ಕೆ ತಕ್ಕಂತೆ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ತಾರೆ. ಈ ಸೀರಿಯಲ್ ಹೆಸರೇ ಕನ್ಯಾ ಕುಮಾರಿ. ಈ ಫುಡ್ ಡೆಲಿವರಿ ಕೆಲ್ಸ ಮಾಡ್ತಾ ಅವಕಾಶ ಪಡೆದ ವ್ಯಕ್ತಿಯೆ ನಟ ನಕುಲ್ ಶರ್ಮಾ. ಜನಪ್ರಿಯ ವಾಹಿನಿ ಆದಂತಹ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಧ್ರುವ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟ ನುಕುಲ್ ಶರ್ಮ ನಿಜಕ್ಕೂ ಕೂಡ ಅನೇಕರಿಗೆ ಆದರ್ಶ ಎಂದು ಹೇಳಿದರೆ ತಪ್ಪಾಗಲಾರದು.

ಇವರು ಇಂದು ನಾಡಿನ ಮನೆ ಮನೆಗಳಲ್ಲಿ ಮಾತಾಗಿದ್ದಾರೆ. ಅದು ಸೀರೀಯಲ್ ಮುಖಾಂತರ. ಅದೇ ನಟ ನಕುಲ್ ಶರ್ಮಾ ಅವರು ಮನೆ ಬಾಗಿಲಿಗೆ ಊಟ ತಲುಪಿಸುವ ಕೆಲಸವನ್ನು ಕೂಡ ಮಾಡ್ತಿದ್ರು ಎಂಬುದು ತಿಳಿದಿರುವುದಿಲ್ಲ. ಯಾಕಂದ್ರೆ ನಟ ನಕುಲ್ ನೋಡಲು ಸ್ಫುರದ್ರೂಪಿ ಯುವಕ. ನೋಡಲು ಸುಂದರವಾಗಿ ಶ್ರೀಮಂತ ಕುಟುಂಬದ ಹುಡುಗನಂತೆ ಕಾಣುವ ಇವರು ಬಡ ಕುಟುಂಬದಲ್ಲಿ ಅರಳಿದ ಪ್ರತಿಭೆ. ಮೈಸೂರಿನವರಾದ ನಕುಲ್ ಶರ್ಮಾ ಅವರು ಬಾಲ್ಯದಿಂದಾನು ತಾನೊಬ್ಬ ನಟನಾಗಬೇಕು ಎಂಬ ಕನಸು ಹೊತ್ತವರು. ಆದರೆ ಅಂದುಕೊಂಡ ಸ್ಥಿತಿವಂತರಲ್ಲ. ತಮ್ಮ ಮಗ ಎಲ್ಲ ಮಕ್ಕಳಂತೆ ಕಾನ್ವೆಂಟ್ ಅಲ್ಲೇ ಓದ್ಬೇಕು ಅಂತ ಅವರ ತಾಯಿ ಅಲ್ಲಿ ಇಲ್ಲಿ ಕೆಲಸ ಮಾಡಿ ನಕುಲ್ ಶರ್ಮಾ ಅವರನ್ನ ಓದಿಸಿದಂತೆ. ತದ ನಂತರ ಕಾಲೇಜು ಮೆಟ್ಟಿಲು ಹತ್ತುತ್ತಿದ್ದ ಸಂದರ್ಭದಲ್ಲಿ ನಕುಲ್ ಅವರಿಗೆ ತನ್ನ ತಾಯಿ ತನಗೋಸ್ಕರ ದುಡಿತಿದ್ದ ಕಷ್ಟ ಕಣ್ಮುಂದೆ ಬರ ತೊಡಗಿದ್ದಾಗ ಅವರೇ ಸ್ವತಃ ಪಾರ್ಟ್ ಟೈಮ್ ಜಾಬ್ ಆಗಿ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರ್ಕೋತ್ತಾರೆ .

ತದ ನಂತರ ತನ್ನ ಗುರಿ ಕನಸು ಈಡೇರಿಸಿಕೊಳ್ಳಲು ಬೆಂಗಳೂರು ಬಂದು ಅನೇಕ ಕಷ್ಟ ಎದುರಿಸಿ ಫುಡ್ ಡೆಲಿವರಿ ಕೆಲ್ಸ ಮಾಡ್ಕೊಂಡು ಆಡೀಶನ್ ಗೆ ಹೋಗಿ ತನ್ನ ನಟನಾ ಪ್ರತಿಭೆಯನ್ನು ತೋರಿಸಿ ಅವಕಾಶ ಗಿಟ್ಟಿಸಿಕೊಳ್ಥಾರೆ. ಇದೀಗ ಕನ್ಯಾ ಕುಮಾರಿ ಧಾರಾವಾಹಿಯಲ್ಲಿ ಧೃವ ಪಾತ್ರದ ಮೂಲಕ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ ನಟ ನಕುಲ್ ಶರ್ಮಾ. ನಕುಲ್ ಶರ್ಮಾ ಅವರು ತಾವು ಸೀರಿಯಲ್ ನಲ್ಲಿ ನಟಿಸುತ್ತಿದ್ದರು ಕೂಡ ಆರ್ಥಿಕ ನಿರ್ವಹಣೆಗೆ ಫುಡ್ ಡೆಲಿವರಿ ಕೆಲ್ಸ ಮಾಡ್ತಾ ಇದ್ದಂತೆ. ಅನೇಕ ಬಾರಿ ಊಟ ಕೊಡಲು ಹೋದಾಗ ಇವರನ್ನ ಗುರುತಿಸಿ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಒಟ್ಟಾರೆಯಾಗಿ ಬಣ್ಣದ ಬದುಕು ತೆರೆ ಮೇಲೆ ಕಂಡಷ್ಟು ಸುಂದರ ಅಲ್ಲ ಎಂಬುದನ್ನು ನಟ ನಕುಲ್ ಶರ್ಮಾ ಅವರ ಬದುಕು ಮತ್ತೇ ಸಾಕ್ಷಿಯಾಗಿದೆ.

Leave a Reply

%d bloggers like this: