ಕಾಂತಾರ ವಿವಾದ, ಕೊನೆಗೂ ಚಿತ್ರತಂಡಕ್ಕೆ ಸಿಕ್ತು ಜಯ

ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಪರ ಕೇರಳ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾತಂಡ ಖುಷಿ ಆಗಿದೆ. ಅರೇ ಇದೇನಿದು ಸುದ್ದಿ ಅಂತೀರಾ. ಹಾಗಿದ್ರೇ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಕನ್ನಡ ಚಿತ್ರರಂಗ ಇಂದು ವಿಶ್ವದ ಮಟ್ಟದಲ್ಲಿ ಗುರುತಿಸಿಕೊಂಡು ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಕೆಜಿಎಫ್ ನಂತರ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ವಿಸ್ತರಿಸಿದೆ. ನಮ್ಮ ಕನ್ನಡದ ಸಿನಿಮಾಗಳು ಯಾವ ಪರಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಅದ್ಭುತವಾಗಿ ಎಲ್ಲಾ ಕಡೆ ಜನಮೆಚ್ಚುಗೆ ಪಡೆಯುತ್ತಿವೆ. ಅದರಂತೆ ಕೆಜಿಎಫ್ ಅಂತಹ ಗೋಲ್ಡನ್ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರೋ ಕಾಂತಾರ ಅನ್ನೋ ಕ್ಲಾಸಿಕ್ ಸಿನಿಮಾವನ್ನ ನಿರ್ಮಾಣ ಮಾಡಿ ಅಭೂತಪೂರ್ವ ಯಶಸ್ಸನ್ನ ತಮ್ಮದಾಗಿಸಿಕೊಂಡಿದೆ.

ಕಾಂತಾರ ಸಿನಿಮಾವನ್ನ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿ ಗೆದ್ದಿದ್ದಾರೆ. ಕಾಂತಾರ ಸಿನಿಮಾವನ್ನ ನೋಡಿದ ಎಲ್ಲಾ ಭಾಷೆಯ ಪ್ರೇಕ್ಷಕರು ಕೂಡಾ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ರಿಷಬ್ ಶೆಟ್ಟಿ ಅವರ ನಟನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕಾಂತಾರ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಬರೋಬ್ಬರಿ ನಾಲ್ಕು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನೂ ಕೂಡ ಬೆಚ್ಚಿ ಬೀಳಿಸಿದೆ. ಐವತ್ತು ದಿನಗಳನ್ನ ಯಶಸ್ವಿಯಾಗಿ ಪೂರೈಸಿ ಇಂದಿಗೂ ಥಿಯೇಟರ್ ನಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ. ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಕಾಣ್ತಿದ್ದಾಗಲೇ ವಿವಾದವೊಂದು ಸುತ್ತಿಕೊಳ್ಳುತ್ತೆ. ಅದೇನಪ್ಪಾ ಅಂದರೆ ಕಾಂತಾರ ಸಿನಿಮಾದಲ್ಲಿ ಬಳಸಲಾಗಿರೋ ವರಾಹ ರೂಪಂ ಹಾಡು ಮಲೆಯಾಳಂನ ನವರಸಮ್ ಸಿನಿಮಾ ಹಾಡಿನ ಕಾಪಿ ಎಂದು.

ಆ ಚಿತ್ರದ ಮ್ಯೂಸಿಕ್ ಹಕ್ಕು ಪಡೆದಿದ್ದ ತೈಕ್ಕುಡಂ ಬ್ರಿಡ್ಜ್ ತಂಡ ಕಾಂತಾರ ಸಿನಿಮಾದ ವಿರುದ್ದ ಕೋರ್ಟ್ ನಲ್ಲಿ ಕೇಸ್ ಹಾಕಿ ಕಾಂತಾರ ಸಿನಿಮಾದಲ್ಲಿ ಬಳಸಿರೋ ವರಾಹ ರೂಪಂ ಹಾಡನ್ನ ಬಳಸಬಾರದು ಎಂದು ಕೋರ್ಟ್ ನಿಂದ ಸ್ಟೇ ತಂದಿರ್ತಾರೆ. ಇತ್ತ ಓಟಿಟಿಯಲ್ಲಿ ರಿಲೀಸ್ ಆದಾಗಿನಿಂದ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಹಾಡು ಕೂಡ ಬೇರೆಯದ್ದಾದ ಟ್ಯೂನ್ ಆಗಿರುತ್ತೆ. ಕೊನೆಗೆ ಕೇರಳ ಹೈ ಕೋರ್ಟ್ ಮೊರೆ ಹೋದ ಕಾಂತಾರ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಗೆ ನ್ಯಾಯಲಯದಲ್ಲಿ ನ್ಯಾಯ ಸಿಕ್ಕಿದೆ. ಹೌದು ಹೊಂಬಾಳೆ ಫಿಲಂಸ್ ಪರ ವಾದ ಮಾಡಿದ್ದ ವಕೀಲರಾದ ಶಶಿರಾಜ್ ಕಾವೂರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಂತಾರ ಸಿನಿಮಾದಲ್ಲಿನ ವರಾಹ ರೂಪಂ ಹಾಡಿನ ನಿಷೇಧಾಜ್ಞೆಯನ್ನ ತೆರವುಗೊಳಿಸಿ ಕೇರಳ ಹೈ ಕೋರ್ಟ್ ಆದೇಶ ನೀಡಿರೋದನ್ನ ತಿಳಿಸಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾ ತಂಡಕ್ಕೆ ಜಯ ಸಿಕ್ಕಿದ್ದು, ತೈಕ್ಕುಡಂ ಬ್ರಿಡ್ಜ್ ತಂಡಕ್ಕೆ ಮುಖಭಂಗವಾಗಿದೆ.

Leave a Reply

%d bloggers like this: