ಕಾಂತಾರ ನೋಡಿ ಮನಸೋತ ಸ್ಟಾರ್ ನಟನಿಂದ ಕೇರಳ ರಾಜ್ಯದ ತುಂಬೆಲ್ಲಾ ಕಾಂತಾರ ಚಿತ್ರ ಬಿಡುಗಡೆ

ಕಾಂತಾರ ಸಿನಿಮಾ ನೋಡಿ ದಂಗಾದ ಭಾರತೀಯ ಸಿನಿರಂಗದ ದಿಗ್ಗಜ ನಟರು. ಅದ್ರಲ್ಲೂ ಮಾಲಿವುಡ್ ಸೂಪರ್ ಸ್ಟಾರ್ ನಟ, ನಿರ್ದೇಶಕ ಕಮ್ ನಿರ್ಮಾಪಕ ಆಗಿರೋ ಪೃಥ್ವಿರಾಜ್ ಸುಕುಮಾರನ್ ಕಾಂತಾರ ಸಿನಿಮಾ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಪೃಥ್ವಿರಾಜ್ ಸುಕುಮಾರನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾಂತಾರ ಸಿನಿಮಾದ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಬಗ್ಗೆಯೂ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕಾಂತಾರ ಸಿನಿಮಾ ನಿಜಕ್ಕೂ ಕೂಡ ಒಂದು ಸಾಧನೆಯೇ ಸರಿ.

ರಿಷಬ್ ಶೆಟ್ಟಿ ಅವರು ಆನ್ ಸ್ಕ್ರೀನ್ ಅಂಡ್ ಆಫ್ ಸ್ಕ್ರೀನ್ ಎರಡರಲ್ಲಿಯೂ ಕೂಡ ಅಪಾರ ಶ್ರಮವಹಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಅಮೋಘವಾಗಿದೆ. ಹೊಂಬಾಳೆ ಫಿಲಂಸ್ ಅವರು ಕೂಡ ತಾವು ನೀಡುತ್ತಿರುವ ಒಂದೊಂದು ಸಿನಿಮಾ ಕೂಡ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಕಾಂತಾರ ಸಿನಿಮಾವನ್ನ ಮಲೆಯಾಳಂನಲ್ಲಿ ನಟ ಪೃಥ್ವಿರಾಜ್ ಅವರೇ ವಿತರಣೆ ಹಕ್ಕನ್ನ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದೇ ಹೊಂಬಾಳೆ ಫಿಲಂಸ್ ನಲ್ಲಿ ತಯಾರಾದ ಕೆಜಿಎಫ್ ಚಿತ್ರದ ಮಲೆಯಾಳಂ ಭಾಷೆಯ ವಿತರಣೆಯ ಹಕ್ಕನ್ನ ಪೃಥ್ವಿರಾಜ್ ಅವರೇ ಪಡೆದಿದ್ದರು಼.

ಇದೀಗ ಕಾಂತಾರ ಸಿನಿಮಾದ ಹಕ್ಕನ್ನ ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಕಾಂತಾರ ಸಿನಿಮಾ ರಿಲೀಸ್ ಆದ ಮೊದಲ ದಿನ ಕೇವಲ 250 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿತ್ತು. ಆದರೆ ಸಿನಿಮಾ ನೋಡಿದ ನಂತರ ಪ್ರೇಕ್ಷಕರು ಕೊಟ್ಟ ಅಭೂತ ಪೂರ್ವ ಪ್ರತಿಕ್ರಿಯೆಗೆ ಇದೀಗ ಕಾಂತಾರ ಸಿನಿಮಾಗೆ ಕರ್ನಾಟಕ ಮಾತ್ರ ಅಲ್ಲ ದೇಶಾದ್ಯಂತ ಮತ್ತು ಅಮೆರಿಕ, ಯುರೋಪ್, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ವರ್ಲ್ಡ್ ವೈಡ್ ಅಪಾರ ಬೇಡಿಕೆ ಉಂಟಾಗಿದೆ. ಇನ್ನು ರಿಷಬ್ ಶೆಟ್ಟಿ ಕಾಂತಾರ ಸಿನಿಮಾಗೆ ತಮ್ಮನ್ನ ತಾವು ತೊಡಗಿಸಿಕೊಂಡಿರೋ ರೀತಿ ಮತ್ತು ಅವರು ಆಯ್ದುಕೊಂಡ ಕಂಟೆಂಟ್ ಅಂಡ್ ಅದನ್ನ ನಿರೂಪಣೆ ಮಾಡಿರೋ ಶೈಲಿಗೆ ಬಾದ್ ಶಾ ಕಿಚ್ಚ ಸುದೀಪ್ ಅವರು ಕೂಡ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: