ಕಾಂತಾರ ಎಫೆಕ್ಟ್, ಕಾಂತಾರ ಚಿತ್ರದ ಬಗ್ಗೆ ಒಂದೇ ದಿನದಲ್ಲಿ ಗೂಗಲ್ ಅಲ್ಲಿ ಹುಡುಕಾಡಿದವರ ಸಂಖ್ಯೆ ಎಷ್ಟು

ವೈಡ್ ಕಾಂತಾರ ಸಿನಿಮಾದ ಹವಾ ಹೀಗಾ ಇರೋದು. ಕನ್ನಡ ಚಿತ್ರರಂಗಕ್ಕೆ 2022 ವರ್ಷ ಒಂದು ರೀತಿಯಾಗಿ ಬಂಪರ್ ವರ್ಷ ಅಂತಾನೇ ಹೇಳ್ಬೋದು‌. ಯಾಕಂದ್ರೆ ಈ ವರ್ಷ ಬಿಡುಗಡೆಯಾದ ಎಲ್ಲಾ ಕನ್ನಡ ಸಿನಿ‌ಮಾಗಳು ರಾಷ್ಟ್ರ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕೆಜಿಎಫ್ 2 ಚಿತ್ರ ಹಾಕಿಕೊಟ್ಟ ದಾರಿಯಲ್ಲಿ ಕನ್ನಡದ ಮತ್ತೊಂದಷ್ಟು ಸಿನಿ‌ಮಾಗಳು ಹೆಜ್ಜೆ ಇಟ್ಟಿವೆ. ಹೆಜ್ಜೆ ಇಡೋದು ಮಾತ್ರ ಅಲ್ಲ ಗಜ ಗಾಂಭೀರ್ಯವಾಗಿ ಹೆಜ್ಜೆ ಇಟ್ಟು ಘರ್ಜಿಸುತ್ತಿವೆ. ಅಂತಹ ಸಿನಿಮಾಗಳ ಸಾಲಿಗೆ ಇದೀಗ ರಿಷಬ್ ಶೆಟ್ಟಿ ಅವರ ‌ಕಾಂತಾರ ಸಿನಿ‌ಮಾ ಕೂಡಾ ಸೇರ್ಪಡೆಗೊಂಡಿದೆ. ಕಾಂತಾರ ಸಿನಿಮಾ ಈ ಪರಿ ಅಭೂತಪೂರ್ವ ಪ್ರತಿಕ್ರಿಯೆ ಪಡೆಯುತ್ತದೆ ಎಂದು ಸ್ವತಃ ಚಿತ್ರತಂಡವೇ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳ್ಬೋದು. ಆದರೆ ಸಿನಿಮಾ ಸೆಲೆಬ್ರಿಟಿ ಪ್ರೀಮಿಯರ್ ಶೋ ನಲ್ಲಿ ಬಂದ ಪ್ರತಿಕ್ರಿಯೆ ನೋಡಿ ಚಿತ್ರತಂಡಕ್ಕೆ ಒಂದೊಳ್ಳೆ ಭರವಸೆ ಅಂತೂ ಮೂಡಿತು.

ಅದಾದ ನಂತರ ಸೆಪ್ಟೆಂಬರ್ 30ರಂದು ವರ್ಲ್ಢ್ ವೈಡ್ ರಿಲೀಸ್ ಆಗಿ ಅದ್ಭುತ ಫೀಡ್ ಬ್ಯಾಕ್ ಕೇಳಿ ಬಂದ ನಂತರ ಕಾಂತಾರ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಭೇಟೆ ಭರ್ಜರಿಯಾಗಿಯೇ ಆರಂಭವಾಯಿತು. ಈಗಾಗಲೇ ಕನ್ನಡ ಭಾಷೆಯೊಂದರಲ್ಲಿಯೇ ಕಾಂತಾರ ಸಿನಿಮಾ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿದೆ. ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿರೋದನ್ನ ತಿಳಿದ ಬಹುತೇಕರು ಗೂಗಲ್ ನಲ್ಲಿ ಯಾವುದು ಈ ಸಿನಿಮಾ. ಯಾವ ಭಾಷೆಯ ಸಿನಿಮಾ ಅಂತ ಗೂಗಲ್ ಅಲ್ಲಿ ಹುಡುಕಾಟ ನಡೆಸಿದ್ದಾರೆ. ಮೌತ್ ಟಾಕ್ ನಲ್ಲಿಯೇ ಹೆಚ್ಚು ಮೈಲೇಜ್ ಪಡೆದುಕೊಂಡ ಕಾಂತಾರ ಸಿನಿಮಾ ದಿನಕಳೆದಂತೆ ಭಾರಿ ಪ್ರೇಕ್ಷಕರನ್ನ ಥಿಯೇಟರ್ ನತ್ತ ಬರ ಮಾಡಿಕೊಳ್ಳುತ್ತಿದೆ. ಕಾಂತಾರ ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಪೂರೈಸಿದರು ಕೂಡ ಎಲ್ಲಾ ಥಿಯೇಟರ್ ಗಳಲ್ಲಿ ಟಿಕೆಟ್ ಸಿಗದ ಹಾಗೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಪರಭಾಷಿಕರಂತೂ ಈ ಕಾಂತಾರ ಸಿನಿಮಾವನ್ನ ಅಪ್ಪಿಕೊಂಡು ಪ್ರೋತ್ಸಾಹ ನೀಡುತ್ತಿದ್ದಾರೆ. ವಿಶೇಷವಾಗಿ ಗಮನಿಸಬೇಕಾದ ಅಂಶ ಅಂದರೆ ಕಾಂತಾರ ಸಿನಿಮಾದ ಬಗ್ಗೆನೇ ಗೂಗಲ್ ನಲ್ಲಿ ಬರೋಬ್ಬರಿ ಹದಿಮೂರು ಲಕ್ಷಕ್ಕೂ ಅಧಿಕ ಮಂದಿ ಹುಡುಕಾಟ ನಡೆಸಿದ್ದಾರೆ. ಪ್ರತಿ ನಿತ್ಯ ಏನಿಲ್ಲವೆಂದರು ಸರಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಕಾಂತಾರ ಸಿನಿಮಾ, ಆ ಚಿತ್ರದ ಕಲಾವಿದರ ಬಗ್ಗೆ, ಸಿನಿಮಾದ ಅಪ್ ಡೇಟ್ಸ್ ಬಗ್ಗೆ ಹುಡುಕಾಟ ನಡೆಸುತ್ತಲೇ ಇದ್ದಾರೆ. ಮೊನ್ನೆ ಅಂದರೆ ರಜಾ ದಿನ ಭಾನುವಾರ ಒಂದೇ ದಿನದಲ್ಲಿ ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಕಾಂತಾರ ಸಿನಿಮಾ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಏನೇ ಆದರು ಗೂಗಲ್ ನಲ್ಲಿ ಕನ್ನಡ ಸಿನಿಮಾವೊಂದರ ಬಗ್ಗೆ ಈ ಪರಿಯಾಗಿ ಹುಡುಕಾಟ ನಡೆಯುತ್ತಾ, ಅದರ ಬಗ್ಗೆ ಚರ್ಚೆ ನಡೀತಿದೆ ಅಂದರೆ ನಿಜಕ್ಕೂ ಕೂಡ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯವೇ ಸರಿ.

Leave a Reply

%d bloggers like this: