ಕಾಂತಾರ ಚಿತ್ರಕ್ಕಿಂತ ಜಾಸ್ತಿ ಬೆಲೆಗೆ ಓಟಿಟಿಗೆ ಮಾರಾಟವಾದ ಜಗ್ಗೇಶ್ ಅವರ ತೋತಾಪುರಿ ಚಿತ್ರ

ನವರಸ ನಾಯಕ ಜಗ್ಗೇಶ್ ತಮ್ಮ ತೋತಾಪುರಿ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಒಂದಷ್ಟು ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ. ಹೌದು ಕಳೆದ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಜಗ್ಗೇಶ್ ಮತ್ತು ಅಧಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ತೋತಾಪುರಿ ಭಾಗ1 ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಒಂದೇ ದಿನದಲ್ಲಿ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆದವು. ಅದರಂತೆ ಟ್ರೇಲರ್ ನಿಂದಾನೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸಿನಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಆದರೆ ಅದೇ ದಿನ ಬಿಡುಗಡೆಗೊಂಡ ತೋತಾಪುರಿ ಸಿನಿಮಾ ಆರಂಭದಲ್ಲಿ ಕೆಲವರು ಡಬ್ಬಲ್ ಮೀನಿಂಗ್ ಸಿನಿಮಾ ಎಂದು ವಿಮರ್ಶೆ ಮಾಡಿದ ಕಾರಣ ತೋತಾಪುರಿ ಸಿನಿಮಾ ಆರಂಭದ ದಿನಗಳಲ್ಲಿ ಸಾಧಾರಣ ಪ್ರದರ್ಶನ ಕಾಣಬೇಕಾಯಿತು.

ಆದರೆ ನಂತರದ ದಿನಗಳಲ್ಲಿ ತೋತಾಪುರಿ ಸಿನಿಮಾ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡು ಬಾಕ್ಸ್ ಆಫೀಸ್ ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ತೋತಾಪುರಿ ಸಕ್ಸಸ್ ಮೀಟ್ ನಲ್ಲಿ ಮಾತನಾಡಿದ ನಟ ಜಗ್ಗೇಶ್ ನಮ್ಮ ತೋತಾಪುರಿ ಸಿನಿಮಾ ಗೆದ್ದಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಉತ್ತಮ ಸಂದೇಶ ನೀಡಿದ್ದೀರಿ ಎಂದು ಹೊಗಳಿದ್ದಾರೆ. ಅದರ ಜತೆಗೆ ಉನ್ನತ ಸರ್ಕಾರಿ ಅಧಿಕಾರಿಗಳು ಚಿತ್ರ ನೋಡಿ ಅಪಾರ ಮೆಚ್ಚುಗೆ ತಿಳಿಸಿದ್ದಾರೆ. ಹಾಗೆಯೇ ವಿಕಲಚೇತನರು ಕೂಡ ತೋತಾಪುರಿ ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ತೋತಾಪುರಿ ಸಿನಿಮಾ ದೊಡ್ಡ ಸಿನಿಮಾಗಳ ನಡುವೆಯೂ ಕೂಡ ಜಗ್ಗದೆ ಮೈಸೂರು ದಸರಾ ಅಂಬಾರಿ ಹೊತ್ತಿರೋ ಆನೆಯ ಹಾಗೇ ಗಾಂಭೀರ್ಯದಿಂದ ಸಾಗುತ್ತಿದೆ. ಈಗ ತೋತಾಪುರಿ ಭರ್ಜರಿ ಹಿಟ್ ಆಗಿರುವ ಕಾಂತಾರ ಚಿತ್ರಕ್ಕಿಂತ ಜಾಸ್ತಿ ಬೆಲೆಗೆ ಮಾರಾಟವಾಗಿ ಸುದ್ದಿಯಾಗಿದೆ.

ಥಿಯೇಟರ್ ನಲ್ಲಿ ಒಳ್ಳೆಯ ಕಲೆಕ್ಷನ್ ಆಗ್ತಿದೆ. ಇನ್ನೊಂದು ವಿಶೇಷ ಅಂದರೆ ನಮ್ಮ ತೋತಾಪುರಿ ಸಿನಿಮಾವನ್ನ ಓಟಿಟಿಗೆ ಬರೋಬ್ಬರಿ ಹತ್ತು ಕೋಟಿಗೆ ಮಾರಾಟ ಮಾಡಿದ್ದೇವೆ. ಓಟಿಟಿಯಲ್ಲಿ ತೋತಾಪುರಿ ಸಿನಿಮಾ ನೋಡಿದ ನಂತರ ಪ್ರೇಕ್ಷಕರು ಖಂಡಿತಾ ಇಷ್ಟ ಪಡುತ್ತಾರೆ. ಜೊತೆಗೆ ತೋತಾಪುರಿ ಸಿನಿಮಾದ ಮುಂದುವರಿದ ಭಾಗವಾಗಿ ಬರೋ ಭಾಗ2 ಕ್ಕೂ ಭಾರಿ ನಿರೀಕ್ಷೆ ವ್ಯಕ್ತಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ತೋತಾಪುರಿ ಸಿನಿಮಾ ಈಗಾಗಲೇ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ನಿಧಾನವಾಗಿ ರಿಲೀಸ್ ಆದ ಎಲ್ಲಾ ಸೆಂಟರ್ ಗಳಲ್ಲಿ ತುಂಬು ಪ್ರೇಕ್ಷಕರಿಂದ ಉತ್ತಮ ಪ್ರದರ್ಶನ ಕಾಣುತ್ತಿದೆ. ಅನೂಪ್ ಸೀಳಿನ್ ಅವರ ಸಾಹಿತ್ಯ, ವಿಜಯ್ ಪ್ರಸಾದ್ ಅವರ ಸಾಹಿತ್ಯ ಮತ್ತು ಅವರ ಸಂಭಾಷಣೆ ನಿರ್ದೇಶನ ಎಲ್ಲಾವೂ ರಸವತ್ತಾಗಿದ್ದು ಪ್ರೇಕ್ಷಕರಿಗೆ ಒಂದೊಳ್ಳೆ ಮನರಂಜನೆ ನೀಡುತ್ತಿದೆ.

Leave a Reply

%d bloggers like this: