ಕಾಂತಾರ ಚಿತ್ರದಲ್ಲಿ ಎಲ್ಲರಿಂದ ಮೆಚ್ಚುಗೆ ಪಡೆದ ನಟಿ ಸಪ್ತಮಿ ಗೌಡ ಯಾರ ಮಗಳು ಗೊತ್ತೇ

ಸದ್ಯಕ್ಕೆ ಎಲ್ಲೆಡೆ ಸಖತ್ ಸೌಂಡ್ ಮಾಡುತ್ತಿರುವ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಭಾರತೀಯ ಚಿತ್ರರಂಗದಾದ್ಯಂತ ಎಲ್ಲೆಡೆ ಭಾರಿ ಟಾಕ್ ಆಗ್ತಿರೋದು ಅಂದರೆ ಅದು ಲೀಲಾ ಪಾತ್ರದ ಮೂಲಕ ಮೋಡಿ ಮಾಡಿರೋ ನಟಿ ಸಪ್ತಮಿ ಗೌಡ. ನಟಿ ಸಪ್ತಮಿಗೌಡ ಅವರಿಗೆ ಕಾಂತಾರ ಸಿನಿಮಾ ಎರಡನೇ ಸಿನಿಮಾ. ಈ ಹಿಂದೆ ಅವರು ಡಾರಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು. ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಧನಂಜಯ್ ಹೆಂಡ್ತಿಯಾಗಿ ಒಂದ್ ರೀತಿ ಬಜಾರಿ ಪಾತ್ರದಲ್ಲಿ ಕಾಣಿಸಿಕೊಂಡು ಚೊಚ್ಚಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದರು.

ನಟಿ ಸಪ್ತಮಿ ಗೌಡ ಅವರು ಬಣ್ಣದ ಲೋಕಕ್ಕೆ ಬರೋ ಮುನ್ನ ಅವರು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹೌದು ಸಪ್ತಮಿಗೌಡ ಅವರು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ರಾಷ್ಟ್ರ ಮಟ್ಟದ ಈಜುಗಾರ್ತಿಯಾಗಿ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರೋ ಸಪ್ತಮಿಗೌಡ ಅವರು ಕಾಂತಾರ ಸಿನಿಮಾದಲ್ಲಿ ಕರಾವಳಿ ಹುಡುಗಿಯ ಪಾತ್ರದಲ್ಲಿ ಜೀವ ತುಂಬಿ ನಟಿಸಿದ್ದಾರೆ. ಸಿಲಿಕಾನ್ ಸಿಟಿಯ ಮಾಡ್ರನ್ ಹುಡ್ಗಿ ಕರಾವಳಿ ಹುಡ್ಗಿಯಾಗಿ ಅರಣ್ಯ ಇಲಾಖೆಯ ಸಿಬ್ಬಂದಿಯ ಪಾತ್ರದಲ್ಲಿ ಗಮನಾರ್ಹ ನಟನೆ ಮಾಡಿದ್ದಾರೆ.

ನಟಿ ಸಪ್ತಮಿಗೌಡ ಅವರ ಬಗ್ಗೆ ಮತ್ತೊಂದು ಆಸಕ್ತಿಕರ ವಿಚಾರ ಏನೆಂದರೆ ಇವರು ಯಾರ ಮಗಳು ಅಂತ ಗೊತ್ತಾದ್ರೇ ನೀವು ನಿಜಕ್ಕೂ ಕೂಡ ಅಚ್ಚರಿ ಪಡುತ್ತೀರಿ. ಹೌದು ನಟಿ ಸಪ್ತಮಿ ಗೌಡ ಅವರು ಬೇರಾರು ಇಲ್ಲ ನಿವೃತ್ತ ಎಸ್.ಪಿ ಎಸ್.ಕೆ ಉಮೇಶ್ ಅವರ ಪುತ್ರಿ. ಉಮೇಶ್ ಅವರು ಕರ್ನಾಟಕ ಕಂಡ ದೊಡ್ಡ ಹಾಗೂ ಪ್ರಸಿದ್ಧ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಆದರೆ ಈ ವಿಚಾರವನ್ನ ಸಪ್ತಮಿಗೌಡ ಅವರು ಎಲ್ಲಿಯೂ ಕೂಡ ಹೆಚ್ಚಾಗಿ ಹೇಳಿಕೊಂಡಿಲ್ಲ. ಒಳ್ಳೇ ಹೈಟು ವೇಯ್ಟು ಬ್ಯೂಟಿಫುಲ್ ಆಗಿರೋ ನಟಿ ಸಪ್ತಮಿಗೌಡ ಅವರು ಸದ್ಯಕ್ಕೆ ಕಾಂತಾರ ಸಿನಿಮಾದ ಮೂಲಕ ಭಾರತ ಮಾತ್ರ ಅಲ್ಲದೆ ರಾಷ್ಟ್ರ ಅಂತರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿದ್ದಾರೆ. ಹೀಗೆ ಸಪ್ತಮಿಗೌಡ ಅವರಿಗೆ ಮತ್ತೊಂದಷ್ಟು ಅವಕಾಶಗಳು ಸಿಗಲಿ ಅನ್ನೋದು ಅವರ ಅಭಿಮಾನಿಗಳ ಆಶಯ.

Leave a Reply

%d bloggers like this: