ಕಾಂತಾರ ಚಿತ್ರದ ಬಜೆಟ್ ಎಷ್ಟು ಎಂದು ಸ್ಪಷ್ಟನೆ ಕೊಟ್ರು ರಿಷಭ್ ಶೆಟ್ಟಿ ಅವರ ತಂದೆ

ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲದೇ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ನಿಜವಾದ ಬಜೆಟ್ ಎಷ್ಟು ಗೊತ್ತಾ! ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಬಿಚ್ಚಿಟ್ಟ ರಿಷಿಬ್ ಶೆಟ್ಟಿ ತಂದೆ. ಹೌದು ಸದ್ಯಕ್ಕೆ ಎಲ್ಲಾ ಕಡೆ ಕಾಂತಾರ ಸಿನಿಮಾದ ಕಲೆಕ್ಷನದ್ದೇ ಮಾತು. ಯಾಕಂದ್ರೆ ಈ ಸಿನಿಮಾ ಮಾಡುತ್ತಿರುವ ಕಮಾಲ್ ಅಷ್ಟಿಷ್ಟಲ್ಲ. ಸ್ವತಃ ಸಿನಿಮಾ ತಂಡವೇ ನಿರೀಕ್ಷೆ ಮಾಡದಂತಹ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರತಂಡ ಫುಲ್ ಖುಷ್ ಆಗಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಕಾಂತಾರ ಸಿನಿಮಾ ಕಳೆದ ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯೊಂದರಲ್ಲೇ ವರ್ಲ್ಡ್ ವೈಡ್ ರಿಲೀಸ್ ಆಗಿ ನೂರು ಕೋಟಿ ಕ್ಲಬ್ ಸೇರಿದೆ. ಅದಷ್ಟೇ ಅಲ್ಲದೆ ಕಾಂತಾರ ಸಿನಿಮಾದ ಬಗ್ಗೆ ಕೇಳಿಬಂದ ರಿಯಾಕ್ಷನ್ ಕಂಡು ಕಳೆದ ವಾರವಷ್ಟೇ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿಯೂ ಕೂಡ ರಿಲೀಸ್ ಮಾಡಲಾಗಿದೆ.

ಈಗಾಗಲೇ ಕಾಂತಾರ ಸಿನಿಮಾ ಕನ್ನಡ ಭಾಷೆಯನ್ನ ಹೊರತುಪಡಿಸಿ ಇನ್ನಿತರ ಭಾಷೆಗಳಲ್ಲಿಯೂ ಕೂಡ ಇದುವರೆಗೆ ಬರೋಬ್ಬರಿ ಇಪ್ಪತ್ತು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ. ಇದು ಕಾಂತಾರ ಸಿನಿಮಾ ಮಾಡುತ್ತಿರುವ ಬಾಕ್ಸ್ ಆಫೀಸ್ ಕಲೆಕ್ಷನ್ ಕಮಾಲ್ . ಆದರೆ ಇದುವರೆಗೆ ಬಹುತೇಕ ಮಂದಿಗೆ ಕಾಡುತ್ತಿರುವ ಪ್ರಶ್ನೆ ಗೊಂದಲ ಅಂದರೆ ಅದು ಕಾಂತಾರ ಸಿನಿಮಾದ ಬಜೆಟ್ ಎಷ್ಟಿರಬಹುದು ಅನ್ನೋದು. ಆರಂಭದ ದಿನಗಳಿಂದಾನೂ ಕಾಂತಾರ ಸಿನಿಮಾದ ಬಜೆಟ್ 10-12 ಕೋಟಿ ಅಂತಾನೇ ಹೇಳಲಾಗುತ್ತಿತ್ತು. ಕೇವಲ 10-12 ಕೋಟಿ ಬಂಡವಾಳ ಹೂಡಿಕೆ ಮಾಡಿ ಅದರ ಹತ್ತರಷ್ಟು ಲಾಭ ಮಾಡಿಕೊಂಡಿದೆ. ಆದರೆ ಇತ್ತೀಚೆಗೆ ಕಾಂತಾರ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಬಗ್ಗೆ ಮತ್ತು ಕಾಂತಾರ ಸಿನಿಮಾಗೆ ಖರ್ಚಾಗಿರುವ ನಿಜವಾದ ವೆಚ್ಚ ಎಷ್ಟು ಅನ್ನೋದನ್ನ ರಿಷಬ್ ಶೆಟ್ಟಿ ಅವರ ತಂದೆಯೇ ಬಾಯ್ಬಿಟ್ಟಿದ್ದಾರೆ. ಹೌದು ಇತ್ತೀಚೆಗೆ ನಟ ರಿಷಬ್ ಶೆಟ್ಟಿ ಅವರ ತಂದೆ ಭಾಸ್ಕರ್ ಶೆಟ್ಟಿ ಅವರು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ‌ಗೆ ಎಂಬಿಎ ಮಾಡಲಿ ಅಂತ ಎರಡು ಬಾರಿ ನಾನು ಫೀಸ್ ಕಟ್ಟಿದೆ.

ಆದರೆ ರಿಷಬ್ ಎರಡು ಬಾರಿಯೂ ಕೂಡಾ ಪೂರ್ಣಗೊಳಿಸಲಿಲ್ಲ. ಇನ್ನೊಂದು ವಿಷಯ ಏನಪ್ಪಾ ಅಂದರೆ ರಿಷಬ್ ಮೊದಲ ಹೆಸರು ಪ್ರಶಾಂತ್. ಸಿನಿಮಾಗಾಗಿ ಸಂಖ್ಯಾ ಶಾಸ್ತ್ರದ ಪ್ರಕಾರ ರಿಷಬ್ ಶೆಟ್ಟಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾ ಚೆನ್ನಾಗಿ ಓಡುತ್ತೆ. ಹಾಕಿದ ಬಂಡವಾಳ ವಾಪಸ್ ಬರುತ್ತೆ ಎಂದು ಹೇಳಿದ್ದೆ. ಆದರೆ ಈ ಪರಿಯಾಗಿ ಕಾಂತಾರ ಸಿನಿಮಾ ಅಭೂತಪೂರ್ವ ಯಶಸ್ಸು ಪಡೆದು ಅಧ್ಭುತ ಕಲೆಕ್ಷನ್ ಮಾಡುತ್ತೆ ಅಂತ ನಾವ್ ನಿರೀಕ್ಷೆ ಕೂಡ ಮಾಡಿರಲಿಲ್ಲ. ನಿಜ ಹೇಳಬೇಕೆಂದರೆ ಕಾಂತಾರ ಸಿನಿಮಾ ಏಳು ಕೋಟಿಯಲ್ಲಿ ತಯಾರಾಗುತ್ತೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಸಿನಿಮಾ ಶೂಟಿಂಗ್ ಆರಂಭ ಆದ ನಂತರ ಅನೇಕ ತೊಂದರೆ ತಾಪತ್ರಯಗಳಾಗಿ ಬರೋಬ್ಬರಿ ಹದಿನಾರು ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿಗೆ ಕಾಂತಾರ ಸಿನಿಮಾದ ಒಟ್ಟು ಬಜೆಟ್ ಹದಿನಾರು ಕೋಟಿ ಅನ್ನೋದು ತಿಳಿದಂತಾಗಿದೆ.

Leave a Reply

%d bloggers like this: