ಕಾಂತಾರ ಚಿತ್ರದ ಬಗ್ಗೆ ಹೀಗೆ ಮಾತನಾಡಿದ ಬಾಲಿವುಡ್ ಸ್ಟಾರ್ ನಟ

ಕನ್ನಡದ ಕಾಂತಾರ ಸಿನಿಮಾ ದೇಶಾದ್ಯಂತ ಅಪಾರ ಮೆಚ್ಚುಗೆ ಪಡೆದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಸೂಪರ್ ಹಿಟ್ ಆಗಿರೋ ಕಾಂತಾರ ಸಿನಿಮಾದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಗ್ಗೆ ಸದ್ಯಕ್ಕೆ ಎಲ್ಲೆಡೆ ಸಖತ್ ಟಾಕ್ ಇದೆ. ಇದರ ನಡುವೆಯೇ ಬಾಲಿವುಡ್ ಖ್ಯಾತ ನಟ ವರುಣ್ ಧವನ್ ಹೇಳಿರೋ ಈ ಮಾತು ಸದ್ಯಕ್ಕೆ ಬಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿಯಾಗಿದೆ. ಹಾಗಿದ್ರೇ ನಟ ವರುಣ್ ಧವನ್ ಅಂತಹ ಯಾವ ಮಾತನ್ನ ಹೇಳಿದ್ರು. ಯಾವ ವಿಚಾರವಾಗಿ ಅವರು ಹೇಳಿದ್ದಾರೆ ಅನ್ನೋದನ್ನ ತಿಳಿಯೋದಾದ್ರೆ. ನಟ ವರುಣ್ ಧವನ್ ಹಿಂದಿ ಚಿತ್ರರಂಗದ ಸುಪ್ರಸಿದ್ದ ಬಹು ಬೇಡಿಕೆಯ ನಟ. ವರುಣ್ ಧವನ್ ಇತ್ತೀಚೆಗೆ ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಾವು ಸೌತ್ ಸಿನಿಮಾಗಳಿಂದ ಸ್ಪೂರ್ತಿಯಾಗಬೇಕು ಎಂದು ಹೇಳಿದ್ದಾರೆ.

ಅದೂ ಕೂಡ ವರುಣ್ ಧವನ್ ಅವರು ಮೆನ್ಷನ್ ಮಾಡಿ ಹೇಳಿರೋದು ನಮ್ಮ ಕನ್ನಡದ ಸಿನಿಮಾಗಳನ್ನ ಅನ್ನೋದು ವಿಶೇಷ. ಹೌದು ಸದ್ಯಕ್ಕೆ ಕೆಲವು ವರ್ಷಗಳಿಂದೀಚೆಗೆ ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ದಕ್ಷಿಣ ಭಾರತದ ಸಿನಿಮಾಗಳದ್ದೇ ಹವಾ ಜೋರಾಗಿದೆ. ಈ ಬಗ್ಗೆ ವರುಣ್ ಧವನ್ ಅವರು ಈಗ ಹಿಂದಿಯಲ್ಲಿ ಹೇಳಿಕೊಳ್ಳೋವಂತಹ ಸಿನಿಮಾಗಳು ಬರುತ್ತಿಲ್ಲ. ನನಗೆ ಅವಕಾಶ ಸಿಕ್ಕರೆ ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತೇನೆ. ನಾನು ಕಮಲ್ ಹಾಸನ್, ರಜಿನಿಕಾಂತ್ ಅವರ ಅಪ್ಪಟ ಅಭಿಮಾನಿ. ಅವರೊಟ್ಟಿಗೆ ನಟಿಸುವ ಸದಾವಕಾಶ ಸಿಕ್ಕರೆ ಖಂಡಿತಾ ನಾನು ಅಭಿನಯಿಸುತ್ತೇನೆ. ಈಗಾಗಲೇ ವಿಕ್ರಮ್ ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಒಂದು ಅವಕಾಶ ನೀಡಿದ್ದಾರೆ.

ಭಾರತೀಯ ಚಿತ್ರರಂಗದ ಎಲ್ಲಾ ಕಲಾವಿದರು, ತಂತ್ರಜ್ಞರು ಒಗ್ಗಟ್ಟಾಗಿದ್ದರೆ ನಮ್ಮ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಮತ್ತಷ್ಟು ಬೆಳೆಯುತ್ತದೆ. ಕನ್ನಡದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಾಣ್ತಿರೋ ಕಾಂತಾರ, ಯಶ್ ಅವರ ಕೆಜಿಎಫ್ ಜೊತೆಗೆ ಕಮಲ್ ಹಾಸನ್ ಅವರ ವಿಕ್ರಮ್ ಅಂತಹ ಸಿನಿಮಾಗಳಿಂದ ಸ್ಪೂರ್ತಿ ಪಡೆಯಬೇಕು. ಕಾಂತಾರ ಸಿನಿಮಾದ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಅವರನ್ನ ಭಾಷೆಯಿಂದ ಬೇರೆಯವರು ಅಂತೇಳ್ಬೋದು. ಆದರೆ ಅವರು ನಮ್ಮ ಭಾರತೀಯರು ಅಲ್ಲವೇ. ಅವರು ಭಾರತೀಯ ಚಿತ್ರರಂಗದ ಕಲಾವಿದರು. ಹೀಗಾಗಿ ನಾವೆಲ್ಲಾ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ನಮ್ಮ ಭಾರತೀಯ ಚಿತ್ರರಂಗ ಮತ್ತಷ್ಟು ಉತ್ತುಂಗ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌತ್ ಸಿನಿರಂಗದಲ್ಲಿ ಸದ್ಯಕ್ಕೆ ಯಶ್ ಮತ್ತು ಅಲ್ಲು ಅರ್ಜುನ್ ಅವರು ಅದ್ಭುತ ನಟರು ಎಂದು ರಿಷಬ್ ಶೆಟ್ಟಿ ಅವರನ್ನು ಸೇರಿದಂತೆ ನಮ್ಮ ಸೌತ್ ಸಿನಿಮಾಗಳ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: