ಕಾಂತಾರ ಚಿತ್ರ ನೋಡಿದ ಮೇಲೆ ನನಗೆ ಮಾತೇ ಬರುತ್ತಿಲ್ಲ, ಕಾಂತಾರ ಚಿತ್ರಕ್ಕೆ ಮನಸೋತ ರಮ್ಯಾ ಅವರು

ಕಾಂತಾರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸನ್ಶೇನಲ್ ಕ್ರಿಯೆಟ್ ಮಾಡಿದ ರಿಷಭ್ ಶೆಟ್ಟಿ. ಕಾಂತಾರ ಸಿನಿಮಾ ನೋಡಿ ಬ್ಯೂಟಿಕ್ವೀನ್ ರಮ್ಯ ರಿಷಬ್ ಶೆಟ್ಟಿ ಅವರ ನಟನೆಗೆ ಫುಲ್ ಫಿಧಾ ಆಗಿದ್ದಾರೆ. ಹೌದು ಕನ್ನಡದಲ್ಲಿ ತಮ್ಮ ವಿಶಿಷ್ಟ ನಿರ್ದೇಶನ ಮತ್ತು ನಟನೆಯ ಮೂಲಕ ರಿಷಬ್ ಶೆಟ್ಟಿ ಸದ್ಯಕ್ಕೆ ಸಖತ್ ಶೈನ್ ಆಗಿದ್ದಾರೆ. ಈ ಕಾಂತಾರ ಸಿನಿಮಾ ಇಂದು ಅಂದರೆ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ರಿಷಬ್ ಶೆಟ್ಟಿ ಅವರ ನಿರ್ದೇಶನಕ್ಕೆ ಮತ್ತು ಅವರ ಅಮೋಘ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ರಿಲೀಸ್ ಗೂ ಮುನ್ನ ಟ್ರೇಲರ್ ಮತ್ತು ಸಿಂಗಾರ ಸಿರಿಯೇ ಎಂಬ ಹಾಡಿನ ಮೂಲಕವೇ ಅಪಾರ ನಿರೀಕ್ಷೆ ಹುಟ್ಟು ಹಾಕಿತ್ತು. ಅದರಂತೆ ಕಾಂತಾರ ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿದೆ.

ಕರಾವಳಿ ಭಾಗದಲ್ಲಿ ನಡೆಯುವ ಭೂತರಾಧನೆ ಕೋಲ ದೈವರ ಎಳೆ ಮತ್ತು ಅಲ್ಲಿನ ಪರಿಸರ ಜನ ಜೀವನವನ್ನ ಕಟ್ಟಿಕೊಡುವ ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಯ ನಡುವೆ ನಡೆಯುವ ಒಂದಷ್ಟು ಕಾಳಗ, ಮರಗಳನ್ನ ಕಳ್ಳತನ ಮಾಡುವ ಶಿವ ಅನ್ನೋ ಕಥಾ ನಾಯಕ. ಅವನ ಬೆನ್ನಿಗೆ ನಿಲ್ಲೋ ಒಂದಷ್ಟು ಮಂದಿ. ಈ ಮರಗಳ್ಳತನಕ್ಕೆ ಕುಮ್ಮಕ್ಕು ನೀಡುವ ಆ ಊರ ದಣಿ. ಇದೆಲ್ಲದರ ನಡುವೆ ಶಿವ ಮತ್ತು ಲೀಲಾ ನಡುವೆ ಮೂಡುವ ಒಂದು ನವಿರಾದ ಪ್ರೇಮ. ಈ ಎಲ್ಲಾ ಅಂಶಗಳ ಜೊತೆಗೆ ಮೊದಲಾರ್ಧ ಭಾಗ ಸಾಗಿದರೆ ತದ ನಂತರದ ದ್ವಿತೀಯಾರ್ಧದಲ್ಲಿ ರಿಷಬ್ ಶೆಟ್ಟಿ ಅವರು ಮಾಡಿರೋ ಕಥಾ ನಿರೂಪಣೆ, ಆ ಕಂಬಳದ ಅದ್ಭುತ ಸನ್ನಿವೇಶ, ಅದರ ಮೇಕಿಂಗ್ ನೋಡಿದ್ರೆ ಸಾಕು ನಿಜಕ್ಕೂ ಕೂಡ ಕಾಂತಾರ ಸಿನಿಮಾ ಅಲ್ಲಿಯೇ ಗೆದ್ಬಿಡ್ತು ಅಂತ ಹೇಳ್ಬೇಕು ಅಂತ ಅನಿಸ್ತದೆ‌.

ಅದರ ಜೊತೆಗೆ ದೈವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರೋ ರಿಶಷ್ ಶೆಟ್ಟಿ ಅವರ ಅಮೋಘ ನಟನೆ ಸಿನಿಪ್ರಿಯರಿಗೆ ಮೋಡಿ ಮಾಡೋದಂತೂ ಸತ್ಯ ಅಂತಾನೇ ಹೇಳ್ಬೋದು. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಕಾಂತಾರ ಸಿನಿಮಾಗೆ ಮತ್ತೊಂದು ಹೈಲೈಟ್ ಆಗಿದೆ. ಕಾಂತಾರಾ ಸಿನಿಮಾದಲ್ಲಿ ರಿಷಭ್ ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು, ತಾರಾಗಣದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಸೇರಿದಂತೆ ಮತ್ತೊಂದಷ್ಟು ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಈ ಕಾಂತಾರ ಸಿನಿಮಾ ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಬಂಡವಾಳ ಹೂಡಿದ್ದು, ರಿಷಭ್ ಕಥೆ ಬರೆದು ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಈ ಕಾಂತಾರ ಸಿನಿಮಾವನ್ನ ಸೆಲೆಬ್ರಿಟಿ ಪ್ರೀಮಿಯರ್ ಶೋನಲ್ಲಿ ನಟಿ ರಮ್ಯಾ, ರಕ್ಷಿತ್ ಶೆಟ್ಟಿ, ಶೈನ್ ಶೆಟ್ಟಿ, ಶೀತಲ್ ಶೆಟ್ಟಿ, ಸಿಂಪಲ್ ಸುನಿ ಸೇರಿದಂತೆ ಒಂದಷ್ಟು ತಾರೆಯರು ಕಾಂತಾರ ಚಿತ್ರ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದರಂತೆ ನಟಿ ರಮ್ಯಾ ಕಾಂತಾರ ಸಿನಿಮಾ ಬಗ್ಗೆ ತಮ್ಮ ಸೊಶಿಯಲ್ ಮೀಡಿಯಾ ಖಾತೆಯಲ್ಲಿ ಕೆಲವೊಮ್ಮೆ ನೀವು ಸಿನಿಮಾವನ್ನು ನೋಡುತ್ತೀರಿ ನಂತರ ನೀವು ಪದಗಳನ್ನು ಕಳೆದುಕೊಳ್ಳುತ್ತೀರಿ ಎಂದು ನಿಮಗೆ ತಿಳಿದಿದೆ ಏಕೆಂದರೆ ನೀವು ಅನುಭವಿಸಿರುವುದು ಅಭಿವ್ಯಕ್ತಿಗೆ ಮೀರಿದೆ ಕಾಂತಾರ ಅದರಲ್ಲಿ ಒಬ್ಬರು. ಕಾಂತಾರ ಸಿನಿಮಾ ಅನುಭವಿಸಬೇಕಾದದ್ದು. ನಾನು ಭೂತ ಕೋಲದ ಬಗ್ಗೆ ತುಂಬಾ ಕಲಿತಿದ್ದೇನೆ ಮತ್ತು ಚಿತ್ರದ ಕೊನೆಯ 10 ನಿಮಿಷಗಳಲ್ಲಿ ರಿಷಬ್ ಅವರ ಅಭಿನಯದಲ್ಲಿ ದೈವಿಕ ಪಾತ್ರಕ್ಕೆ ನಾನು ಮನಸೋತಿದ್ದೇನೆ. ಕಾಂತಾರ ಚಿತ್ರ ನೋಡಿದ ನಂತರ ನೀವು ನನ್ನ ಮಾತನ್ನು 100% ಒಪ್ಪುತ್ತೀರಿ. ರಿಷಬ್ ಶೆಟ್ಟಿ ನಾನು ನಿಮ್ಮನ್ನು ಸಾಕಷ್ಟು ಅಭಿನಂದಿಸಲು ಸಾಧ್ಯವಿಲ್ಲ ಆದರೆ ಈ ಚಿತ್ರದ ಬಗ್ಗೆ ಮತ್ತು ನೀವು ಏನು ಮಾಡಿದ್ದೀರಿ ಎಂಬುದರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಈ ಸಿನಿಮಾ ತಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದು ಕಾಂತಾರ ಸಿನಿಮಾ ನೋಡಲು ಪ್ರೇಕ್ಷಕರಿಗೆ ಹೇಳಿದ್ದಾರೆ. ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಎಲ್ಲಾ ಮುನ್ಸೂಚನೆ ನೀಡಿದೆ.

Leave a Reply

%d bloggers like this: