ಕಾಂತಾರ ಚಿತ್ರ ಚೆನ್ನಾಗಿಲ್ಲ ಎಂದು ಟೀಕೆ ಮಾಡಿದ ಮತ್ತೊಬ್ಬ ನಿರ್ದೇಶಕ

ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸದ್ದು ಮಾಡುತ್ತಿರುವ ಕನ್ನಡದ ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಾಣ ಮಾಡಿ ರಿಷಬ್ ಶೆಟ್ಟಿ ಅವರ ನಿರ್ದೇಶನ ಮಾಡುವುದರ ಜೊತೆಗೆ ನಟನೆ ಮಾಡಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ಅಭೂತಪೂರ್ವ ಪ್ರತಿಕ್ರಿಯೆ ಪಡೆದುಕೊಂಡ ನಂತರ ಪರಭಾಷಾ ಸಿನಿ ಪ್ರೇಕ್ಷಕರು ಕೂಡ ಕಾಂತಾರ ಸಿನಿಮಾ ನೋಡಿ ತಮ್ಮ ಭಾಷೆಯಲ್ಲಿಯೂ ಸಹ ಡಬ್ಬಿಂಗ್ ಗೆ ಬೇಡಿಕೆಯಿಟ್ಟಿದ್ದರು. ಕಾಂತಾರ ಸಿನಿಮಾದಲ್ಲಿ ಕರಾವಳಿ ಭಾಗದ ಸಂಸ್ಕೃತಿ ಅಲ್ಲಿನ ಜನರ ನಂಬಿಕೆ ಆಚರಣೆಗಳ ಜೊತೆಗೆ ಮನುಷ್ಯ ಮತ್ತು ಕಾಡಿನ ನಡುವೆ ಇರೋ ಸಂಬಂಧವನ್ನ.

ಅಲ್ಲಿನ ಜನರು ಪೂಜಿಸುವ ಪಂಜುರ್ಲಿ ದೈವದ ಬಗ್ಗೆ ಅಚ್ಚು ಕಟ್ಟಾಗಿ ನಿರ್ದೇಶಕ ರಿಷಬ್ ಶೆಟ್ಟಿ ತೋರಿಸಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರಿಗೆ ಇಲ್ಲಿ ಹೊಸತನದ ಅನುಭವವಾಗಿದ್ದು, ಎರಡು ಮೂರು ಬಾರಿ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ. ಅದರಂತೆ ಕಾಂತಾರ ಸಿನಿಮಾ ಇಂದು ಎಲ್ಲಾ ಭಾಷೆಯ ಸಿನಿ ರಸಿಕರ ಮನಗೆದ್ದು ಬಾಕ್ಸ್ ಆಫೀಸ್ ನಲ್ಲಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ.ಇದರ ನಡುವೆ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಕಾಂತಾರ ಸಿನಿಮಾದಲ್ಲಿ ತೋರಿಸಿರುವ ಭೂತಕೋಲ ಮತ್ತು ಅಲ್ಲಿನ ಆಚರಣೆಗಳು ನಮ್ಮ ಹಿಂದೂ ಸಂಸ್ಕೃತಿ ಎಂದು ಹೇಳ್ತಾರೆ. ಇದಕ್ಕೆ ಪ್ರತಿರೋಧವಾಗಿ ನಟ ಮತ್ತು ಚಿಂತಕರಾದ ಚೇತನ್ ರಿಷಬ್ ಶೆಟ್ಟಿ ಅವರ ಹೇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಮೂಲಕ ಕಾಂತಾರ ಸಿನಿಮಾದಲ್ಲಿನ ಕೆಲವು ವಿಚಾರದ ಬಗ್ಗೆ ಚೇತನ್ ಅಸಮಾಧಾನ ಹೊರ ಹಾಕ್ತಾರೆ.

ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಕಾಂತಾರ ಸಿನಿಮಾಗೆ ಚೇತನ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಕಾಂತಾರ ಸಿನಿಮಾ ನೋಡಿ ಬಾಲಿವುಡ್ ನಿರ್ದೇಶಕ ಕೂಡ ನಕರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಬಾಲಿವುಡ್ ನಿರ್ದೇಶಕ ಅಭಿರೂಪ್ ಬಸು ಅವರು ಕಾಂತಾರ ಸಿನಿಮಾ ನೋಡಿ ಇದು ಹಳೆಯ ಕಾಲದ ಕಥೆ. ಇದರಲ್ಲಿ ಹೊಸತನ ಅಂತಾದ್ದೂ ಏನು ಇಲ್ಲ. ಟ್ವಿಸ್ಟ್ ಬರೀ ಗಿಮಿಕ್. ಕ್ಲೈಮ್ಯಾಕ್ಸ್ ನನಗೆ ಇಂಟ್ರೆಸ್ಟಿಂಗ್ ಅನಿಸಲಿಲ್ಲ. ನನಗೆ ಬೋರ್ ಹೊಡಿತು ಎಂದು ನಿರ್ದೇಶಕ ಅಭಿರೂಪ್ ಬಸು ಕಾಂತಾರ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಇಡೀ ಭಾರತ ಮಾತ್ರ ಅಲ್ಲದೇ ಹೊರ ದೇಶಗಳಲ್ಲಿಯೂ ಕೂಡ ಭಾರಿ ಪ್ರಶಂಸೆ ಪಡೆಯುತ್ತಿರುವ ಕಾಂತಾರ ಸಿನಿಮಾವನ್ನ ಚೆನ್ನಾಗಿಲ್ಲ ಎಂದು ಅಭಿರೂಪ್ ಬಸು ಹೇಳಿರೋ ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೆಲ್ಲದರ ನಡುವೆ ಕಾಂತಾರ ಸಿನಿಮಾ ಮಾತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Leave a Reply

%d bloggers like this: