ಕಾಂತಾರ ಅಂತಹ ಅದ್ಬುತ ಚಿತ್ರ ಕೊಟ್ಟಿದ್ದಕ್ಕೆ ಥ್ಯಾಂಕ್ಯೂ, ಅನುಷ್ಕಾ ಶೆಟ್ಟಿ

ಕನ್ನಡದ ಕರಾವಳಿ ಬೆಡಗಿ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಇದೀಗ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಶಬ್ಬಾಸ್ ಗಿರಿ ನೀಡಿದ್ದಾರೆ. ಸದ್ಯಕ್ಕೆ ಕಳೆದ ಎರಡು ವಾರಗಳಿಂದ ಇಡೀ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸುದ್ಥಿಯಲ್ಲಿ ಇರೋದು ಅಂದರೆ ಅದು ಕಾಂತಾರ ಸಿನಿಮಾ. ಈ ಸಿನಿಮಾ ಮಾಡ್ತಿರೋ ದಾಖಲೆ ಒಂದೆರಡಲ್ಲ ಬಿಡಿ. ಸಿನಿಮಾದ ಒಂದು ತೂಕವೇ ಒಂದೆಡೆಯಾದರೆ ಈ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಇನ್ನೊಂದು ತೂಕ ಅಂತೇಳ್ಬೋದು. ಕನ್ನಡಕ್ಕೆ ಕೆಜಿಎಫ್ ಅಂತಹ ಗೋಲ್ಡನ್ ಸಿನಿಮಾ ನೀಡಿರೋ ಹೊಂಬಾಳೆ ಫಿಲಂಸ್ ಸಂಸ್ಥೆ ಇದೀಗ ಕಾಂತಾರ ಅನ್ನುವಂತಹ ಮತ್ತೊಂದು ಅದ್ಭುತ ಸಿನಿಮಾವೊಂದನ್ನ ಸಿನಿ ರಸಿಕರಿಗೆ ನೀಡಿದೆ.

ಕಾಂತಾರ ಸಿನಿಮಾ ಹತ್ತನ್ನೆರಡು ಕೋಟಿ ರೂಗಳಲ್ಲಿ ತಯಾರಾದ ಸಿನಿಮಾ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಂತ ಆಗಿರಲಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ಪರಭಾಷೆಯ ಸಿನಿ ಪ್ರೇಕ್ಷಕರು ಕೂಡಾ ಕಾಂತಾರ ಸಿನಿಮಾ ಅಭೂತಪೂರ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ ಕಾರಣ ಕಾಂತಾರ ಸಿನಿಮಾ ಈಗ ಇತರೆ ಭಾಷೆಗಳಿಗೂ ಕೂಡ ಡಬ್ ಆಗಿ ರಿಲೀಸ್ ಆಗಿದೆ. ಇಂದು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ಕಾಂತಾರ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ. ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿಯೂ ಕೂಡ ಒಂದೊಳ್ಳೆಯ ಓಪನಿಂಗ್ ಪಡೆದುಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾವನ್ನ ಕೇವಲ ಸಾಮಾನ್ಯ ಪ್ರೇಕ್ಷಕರು ಮಾತ್ರ ಅಲ್ಲದೆ ದಕ್ಷಿಣ ಭಾರತದ ದಿಗ್ಗಜ ನಟ ನಟಿಯರು ಕೂಡ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮಿಳಿನ ಖ್ಯಾತ ನಟರಾದ ಸೂರ್ಯ, ಧನುಷ್ ಸೇರಿದಂತೆ ಅನೇಕ ಕಲಾವಿದರು ರಿಷಬ್ ಶೆಟ್ಟಿ ಅವರ ಪ್ರಯತ್ನಕ್ಕೆ ಶಬ್ಬಾಸ್ ಗಿರಿ ನೀಡಿದ್ದರು. ಇದೀಗ ಅದರಂತೆ ಕಾಂತಾರ ಸಿನಿಮಾವನ್ನ ದಕ್ಷಿಣ ಭಾರತದ ಸುಪ್ರಸಿದ್ದ ಬೇಡಿಕೆಯ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ ಅವರು ಸಹ ಕಾಂತಾರ ಸಿನಿಮಾ ನೋಡಿ ಈ ಚಿತ್ರ ಅದ್ಭುತವಾಗಿದೆ. ರಿಷಬ್ ಶೆಟ್ಟಿ ಅವರೇ ನಿಮ್ಮ ನಟನೆ, ನಿರ್ದೇಶನಕ್ಕೆ ಸಲಾಂ. ಇಡೀ ಕಾಂತಾರ ಚಿತ್ರತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಇಂತಹ ಒಂದು ಅದ್ಭುತ ಅನುಭವ ಕೊಟ್ಟಿದಕ್ಕೆ ರಿಷಬ್ ಶೆಟ್ಟಿ ಅಂಡ್ ಟೀಮ್ ಗೆ ಧನ್ಯವಾದ. ಎಲ್ಲಾರು ಕೂಡ ಕಾಂತಾರ ಸಿನಿಮಾವನ್ನ ಥಿಯೇಟರ್ ಗೆ ಹೋಗಿ ನೋಡಿ ಎಂದು ಅನುಷ್ಕಾ ಶೆಟ್ಟಿ ತಮ್ಮಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ನಟಿ ಅನುಷ್ಕಾ ಶೆಟ್ಟಿ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Leave a Reply

%d bloggers like this: