ಕಾನೂನು ಪ್ರಕಾರ ಒಬ್ಬ ತಂದೆ ವಿಲ್ ಮಾಡದೆ ಸತ್ತರೆ ಆ ಆಸ್ತಿ ಯಾರಿಗೆ ಸೇರತ್ತೆ ಗೊತ್ತಾ? ಕಾನೂನು ಏನು ಹೇಳತ್ತೇ ಗೊತ್ತಾ? ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ

ತಾನು ಸ್ವಂತ ದುಡಿದು ಸಂಪಾದಿಸಿದ ಆಸ್ತಿ ಹಣ ಇವರಿಗೆ ಸೇರಬಾರದು ಎಂದು ವಿಲ್ ಮಾಡ್ಬಿಟ್ರೇ ಖಂಡಿತಾ ನಿಮಗೆ ಒಂದು ಸೂಜಿ ಮೊಣದಷ್ಟು ಕೂಡ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಹೌದು ಇಂದಿನ ಕಾನೂನು ನಿಯಮಗಳು ಎಷ್ಟರ ಮಟ್ಟಿಗೆ ಕಠಿಣವಾಗಿವೆ ಅಂದರೆ ಎಂತಹವರನ್ನು ಕೂಡ ಒಮ್ಮೆಲೆ ದಂಗಾಗಿ ಬಿಡುಸುತ್ತವೆ. ಕಾನೂನು ಕಟ್ಟಳೆ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಲೇಬೇಕು. ಭಾರತ ಸಂವಿಧಾನದ ಬಗ್ಗೆ ಪೀಠಿಕೆಯನ್ನ ಕೂಡ ಸರಿಯಾಗಿ ಓದಿ ಅರ್ಥೈಸಿಕೊಳ್ಳದ ಜನರಿಗೆ ಈ ಕಾನೂನು ಪಾಠಗಳು ಹೇಗೆ ಅರ್ಥ ಆಗುತ್ತವೆ. ಆದರೆ ಯಾವಾಗ ಆ ಆಸ್ತಿ-ಪಾಸ್ತಿ ಪಾಲುದಾರಿಕೆ ವಿಚಾರ ಬರುತ್ತದೋ ಆಗ ಪ್ರತಿಯೊಬ್ಬ ರು ಕೂಡ ಕಾನೂನು ಮಾತನಾಡಲು ಆರಂಭಿಸುತ್ತಾರೆ. ಇತ್ತೀಚೆಗಂತೂ ಆಸ್ತಿಗಳ ಮೌಲ್ಯ ದಿಢೀರ್ ಏರಿಕೆ ಕಂಡಿರುವ ಕಾರಣ ತಮ್ಮ ತಂದೆಯ ಊರಿನ ಆಸ್ತಿ ಬೇಡವೇ ಬೇಡ ಎಂದು ದೂರದಲ್ಲಿದ್ದ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ತಮ್ಮ ಆಸ್ತಿಯಲ್ಲಿ ಪಾಲು ಬರಬೇಕು ಕೇಳುತ್ತಿದ್ದಾರೆ.

ಇದಕ್ಕೆ ಅಣ್ಣ ತಮ್ಮ ಅಥವಾ ಇನ್ಯರೋ ಭಾಗ ನೀಡಲು ಒಪ್ಪದಿದ್ದಾಗ ಕೋರ್ಟು ಕಾನೂನು ಎಂದು ಮಾತನಾಡುವಷ್ಟು ಧೈರ್ಯ ಕಾನೂನಿನ ಅರಿವು ಬೆಳೆಸಿಕೊಂಡಿದ್ದಾರೆ. ಅದೇ ರೀತಿಯಾಗಿ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತಾನೇ ಸ್ವತಃ ದುಡಿದು ಸಂಪಾದಿಸಿ ಗಳಿಸಿದ ಆಸ್ತಿಪಾಸ್ತಿಯಲ್ಲಿ ಇಂತವರಿಗೆ ಇಷ್ಟು ಪಾಲು ಸಿಗಬೇಕು. ನನ್ನ ಸಾವಿನ ನಂತರ ನನ್ನ ಹೆಂಡತಿ ಮಕ್ಕಳಗೆ ಇಂತಿಷ್ಟು ಪಾಲು ಸಿಗಬೇಕು ಎಂದು ಸ್ಪಷ್ಟವಾಗಿ ನಮೂದು ಮಾಡಿದ್ದರು ಅಷ್ಟೇ ಪಾಲು ಸಿಗುತ್ತದೆ. ಒಂದು ವೇಳೆ ವಿಲ್ ನಲ್ಲಿ ಆ ವ್ಯಕ್ತಿ ತನ್ನ ಆಸ್ತಿಯಲ್ಲಿ ನನ್ನ ಹೆಂಡತಿ ಮಕ್ಕಳಿಗೆ ಯಾವುದೇ ರೀತಿಯ ಪಾಲು ಅಧಿಕಾರ ಇರುವುದಿಲ್ಲ ಎಂದು ಬರೆಸಿಬಿಟ್ಟಿದ್ದರೆ ಅಂತಹ ಸಂಧರ್ಭದಲ್ಲಿ ಆ ವ್ಯಕ್ತಿಯ ಸ್ವಂತ ಆಸ್ತಿಯಲ್ಲಿ ಆತನ ಹೆಂಡತಿ ಮಕ್ಕಳಿಗೆ ಯಾವುದೇ ಅಧಿಕಾರ ಇರುವುದಿಲ್ಲ.

ಒಂದು ವೇಳೆ ಪೂರ್ವಜರ ಆಸ್ತಿ ಇದ್ದರೆ ಅದು ನಿಧನವೊಂದುವ ವ್ಯಕ್ತಿಯ ಹೆಂಡತಿ ಮಕ್ಕಳಿಗೆ ಸಮವಾಗಿ ಹಂಚಿಕೆ ಮಾಡಲು ಅವಕಾಶ ಇರುತ್ತದೆ. ಈ ವಿಲ್ ಎಂಬುದು ಪೂರ್ವಜರ ಆಸ್ತಿಗೆ ಯಾವುದೇ ಸಮಸ್ಯೆಯನ್ನ ಉಂಟು ಮಾಡುವುದಿಲ್ಲ. ಇನ್ನು ಈ ವಿಲ್ ನಲ್ಲಿ ಕೆಲವರು ತಮ್ಮ ಮುಂದಾಲೋಚನೆಯಿಂದಾಗಿ ತನ್ನ ಅಂತ್ಯದ ದಿನಗಳಲ್ಲಿ ಯಾರು ಚೆನ್ನಾಗಿ ನೋಡಿಕೊಂಡಿರುತ್ತಾರೋ ಅವರಿಗೆ ತಮ್ಮ ಎಲ್ಲಾ ಆಸ್ತಿ ಪಾಸ್ತಿಯನ್ನ ನೀಡಲು ಮನಸ್ಸು ಮಾಡಿರುತ್ತಾರೆ.

Leave a Reply

%d bloggers like this: