ಕಣ್ಣಿನ ಸುತ್ತ ಆಗುವ ಡಾರ್ಕ್ ಸರ್ಕಲ್ಗೆ ಇಲ್ಲಿದೆ ಮನೆಮದ್ದು

ಹವಾಮಾನ ಬದಲಾದಂತೆ ನಮ್ಮ ದೇಹದ ಮೇಲೆ ಅನೇಕ ರೀತಿಯ ನಕರಾತ್ಮಕ ಪರಿಣಾಮಗಳು ಬೀರುತ್ತವೆ. ಅದು ಆರೋಗ್ಯದಲ್ಲಿ ಏರು ಪೇರಾಗಬಹುದು ಅಥವಾ ದೈಹಿಕವಾಗಿ ಕೆಲವು ಸಮಸ್ಯೆಗಳು ಕಾಡಬಹುದು. ಅದು ವ್ಯಕ್ತಿಯ ಆರೋಗ್ಯ ಮತ್ತು ಅವನಲ್ಲಿರುವ ರೋಗ ನಿರೋಧಕ ಶಕ್ತಿಯ ಮೇಲೆ ಅವಲಂಬನೆ ಆಗಿರುತ್ತದೆ. ಅದೇ ರೀತಿಯಾಗಿ ಈ ಮಳೆ ಮತ್ತು ಚಳಿಗಾಲದ ಸಂಧರ್ಭದಲ್ಲಿ ಚರ್ಮದ ಕೆಲವು ಸಮಸ್ಯೆಗಳು ಕಾಡುತ್ತವೆ. ಅವು ಶಾಶ್ವತವಾಗಿ ಇರೋವಂತಹ ಸಮಸ್ಯೆಗಳಂತೂ ಅಲ್ಲ. ಒಂದಷ್ಟು ದಿನಗಳ ಕಾಲ ಮಾತ್ರ ಕಾಡುತ್ತವೆ. ಆದರೂ ಕೂಡ ಅವು ವ್ಯಕ್ತಿಯನ್ನ ಭಾದಿಸುತ್ತದೆ. ಅಂತಹ ಸಮಸ್ಯೆಗಳ ಪೈಕಿ ಮುಖದ ಚರ್ಮ ಹೊಡೆಯುವಂತದ್ದು, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಅದರಂತೆ ಕಣ್ಣಿನ ಸುತ್ತಾ ಕಪ್ಪಾಗಿ ಮೂಡಿ ಆ ಕಣ್ಣಿನ ಕೆಳಭಾಗದಲ್ಲಿ ಒಂದು ರೀತಿ ಡಾರ್ಕ್ ಸರ್ಕಲ್ ಆಗಿ ಕಾಣುತ್ತದೆ.

ಈ ಸಮಸ್ಯೆ ಹವಾಮಾನ ವೈಪರೀತ್ಯಯಿಂದ ಕಾಣಿಸಿಕೊಳ್ಳುವಂತದ್ದಲ್ಲ. ಈ ಕಣ್ಣಿನ ಕೆಳ ಭಾಗದಲ್ಲಿ ಡಾರ್ಕ್ ಸಮಸ್ಯೆ ಕಾಣಿಸಿಕೊಳ್ಳುವುದು ಅತಿಯಾದ ಆಯಾಸ ಮತ್ತು ನಿರ್ದಿಷ್ಟ ಸಮಯದವರೆಗೆ ನಿದ್ರೆ ಮಾಡದೇ ಹೋದರೆ ಈ ರೀತಿಯ ಕಪ್ಪು ಕಲೆಯ ಸಮಸ್ಯೆ ಕಾಡುತ್ತದೆ. ಇತ್ತೀಚಿಗಿನ ದಿನಮಾನಗಳಲ್ಲಿ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಸರ್ವೇ ಸಾಮಾನ್ಯ. ಇದಕ್ಕೇ ಮನೆಯಲ್ಲಿ ಒಂದಷ್ಟು ಪರಿಹಾರ ಮಾರ್ಗೋಪಾಯಗಳನ್ನ ಕಂಡು ಕೊಳ್ಳಬಹುದಾಗಿದೆ. ನಿಮ್ಮ ದೇಹದಲ್ಲಿ ವಿಟಮಿನ್ ಗಳ ಕೊರತೆ ಆದಾಗ ಅಥವಾ ನೀವು ಸೂಕ್ತ ಸಮಯಕ್ಕೆ ನಿದ್ದೆ ಮಾಡದೇ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ, ಅಥವಾ ದಿನದ ಬಹುತೇಕ ಗಂಟೆಗಳು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡೋವಾಗ ಈ ರೀತಿಯ ಡಾರ್ಕ್ ಸರ್ಕಲ್ ಗಳು ಮೂಡುತ್ತವೆ.

ಹಾಗಾಗಿ ನೀವು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವುದಾದರೆ ಕನಿಷ್ಠ ಎರಡು ಗಂಟೆಗಳಿಗೊಮ್ಮೆಬಿಡುವು ಮಾಡಿಕೊಂಡು ಕೆಲಸ ಮಾಡಿ. ವಿಟಮಿನ್ ಕೊರತೆ ಇದ್ದಲ್ಲಿ ಪ್ರತಿನಿತ್ಯ ಹಣ್ಣು ತರಕಾರಿಗಳನ್ನ ಹೆಚ್ಚಾಗಿ ಸೇವಿಸಿ. ಇನ್ನು ರಾತ್ರಿಯ ಹೊತ್ತು ಮಲಗುವ ಮುನ್ನ ಕಪ್ಪಾಗಿರುವ ಕಣ್ಣಿನ ಕೆಳಭಾಗಕ್ಕೆ ಹಾಲಿನಿಂದ ಹತ್ತಿಯಿಂದ ಅದ್ದಿ ಸ್ವಲ್ಪ ಹೊತ್ತು ಮಸಾಜ್ ಮಾಡಿ. ಅದರ ಜೊತೆಗೆ ಸಾಧ್ಯವಾದರೆ ಸೌತೆಕಾಯಿಯನ್ನ ರೌಂಡ್ ಆಗಿ ಕಟ್ ಮಾಡಿ ಅದನ್ನ ಕಣ್ಣಿನ ಮೇಲ್ಭಾಗದಲ್ಲಿಟ್ಟುಕೊಂಡು ಮಲಗಿಕೊಳ್ಳಿ. ಹಾಗೇ ಇದೇ ರೀತಿಯಾಗಿ ಟಮೋಟ ಹಣ್ಣನ್ನು ಕೂಡ ಬಳಸಬಹುದು. ಈ ರೀತಿಯಾಗಿ ಮಾಡಿದರೆ ಕಣ್ಣಿನ ಕೆಳಭಾಗದಲ್ಲಿ ಮೂಡುವಂತಹ ಕಪ್ಪು ವೃತ್ತಾದಾಕಾರವನ್ನು ಹೋಗಲಾಡಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಕನಿಷ್ಟ ಏಳು ಗಂಟೆ ನಿದ್ದೆ ಮಾಡುವುದನ್ನ ರೂಢಿಸಿಕೊಳ್ಳಿ ಎಂದು ಆರೋಗ್ಯದ ಹಿತ ದೃಷ್ಠಿಯಿಂದ ವೈದ್ಯರು ಸಲಹೆ ನೀಡುತ್ತಾರೆ.

Leave a Reply

%d bloggers like this: