ಕನ್ನಡಿಗರ ಕಣ್ಣೀರಿನ ಕ್ಷಮೆ ಕೇಳಿದ ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ! ಯಾಕೆ ಗೊತ್ತಾ

ಕನ್ನಡಿಗರ ಕ್ಷಮೆ ಕೇಳಿದ ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ..! ಬಾಹುಬಲಿ ಎಂಬ ಅದ್ದೂರಿ ಮೇಕಿಂಗ್ ಸಿನಿಮಾ ಮೂಲಕ ಇಡೀ ವಿಶ್ವದ ಚಿತ್ರರಂಗ ತೆಲುಗು ಸಿನಿಮಾರಂಗದ್ತತ ಅಚ್ಚರಿಯಾಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಇದೀಗ ಮಲ್ಟಿ ಸ್ಟಾರ್ ಸಿನಿಮಾ ಮಾಡಿದ್ದಾರೆ.ಟಾಲಿವುಡ್ ಸ್ಟಾರ್ ನಟರಾದ ರಾಮ್ ಚರಣ್ ರಾಜ್ ಮತ್ತು ಯಂಗ್ ಟೈಗರ್ ಖ್ಯಾತಿಯ ಜ್ಯೂನಿಯರ್ ಎನ್.ಟಿ.ಆರ್ ಜೋಡಿಯಾಗಿ ಅಭಿನಯಿಸಿರುವ ಆರ್.ಆರ್‌.ಆರ್ ಸಿನಿಮಾ ಮುಂದಿನ ವರ್ಷ 2022 ರ ಜನವರಿ 07 ರಂದು ವರ್ಲ್ಡ್ ವೈಡ್ ಬಿಡುಗಡೆಯಾಗಲಿದೆ. ಇನ್ನು ಈಗಾಗಲೇ ಬಿಡುಗಡೆ ಆಗಿರುವ ಆರ್.ಆರ್.ಆರ್ ಚಿತ್ರದ ಟೀಸರ್,ಟ್ರೇಲರ್, ಸಾಂಗ್ ಗಳು ಸೂಪರ್ ಹಿಟ್ ಆಗಿವೆ. ಟ್ರೇಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಹುಟ್ಟಿಹಾಕಿರುವ ಆರ್.ಆರ್.ಆರ್ ಚಿತ್ರದ ಒಂದೆರಡು ಹಾಡುಗಳು ಯುವ ಮನಸ್ಸುಗಳನ್ನು ಗೆದ್ದಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ಯುವ ಸಮೂಹವು ರೀಲ್ಸ್ ಮಾಡುವ ಮೂಲಕ ಸಖತ್ ವೈರಲ್ ಮಾಡುತ್ತಿದ್ದಾರೆ.

ಇನ್ನು ಇತ್ತೀಚೇಗೆ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ತಮ್ಮ ಆರ್‌.ಆರ್.ಆರ್.ಚಿತ್ರದ ಜನನಿ ಎಂಬ ಮತ್ತೊಂದು ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದ ಚಿತ್ರತಂಡ ಇದು ಪ್ರಮೋಶನ್ ಆಕ್ಟಿವಿಟಿ ಅಲ್ಲ ಎಂದು ತಿಳಿಸಿದೆ. ನಿರ್ದೇಶಕ ರಾಜಮೌಳಿ ಮಾತನಾಡಿ ನನ್ನನ್ನು ನೀವು ಮೊದಲಿಗೆ ಎರಡು ವಿಚಾರಕ್ಕೆ ಕ್ಷಮಿಸಬೇಕು. ಒಂದು ನನ್ನ ಕನ್ನಡ ಭಾಷೆಯ ಬಗ್ಗೆ.ನಾನೂ ಕೂಡ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇನೆ.ಇನ್ನು ನನ್ನಿಂದ ಸಾಧ್ಯವಾಗಲ್ಲ.ದಯವಿಟ್ಟು ಸಹಕಾರ ನೀಡಿ ಎಂದು ಮನವಿ ಮಾಡಿದರು. ಎರಡನೇಯದಾಗಿ ನಾನು ಕನ್ನಡ ಮಾಧ್ಯಮಗಳಿಗೆ ಯಾವುದೇ ರೀತಿಯ ಸಂದರ್ಶನ ನೀಡುತ್ತಿಲ್ಲ. ಕೇವಲ ನಾನೊಬ್ಬನೇ ಮಾತನಾಡುತ್ತಿದ್ದೇನೆ.

ಮುಂದಿನ ತಿಂಗಳು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆರ್‌.ಆರ್.ಆರ್.ಸಿನಿಮಾದ ಭರ್ಜರಿ ಪ್ರಚಾರ ಆರಂಭವಾಗಲಿದೆ.ಆಗ ಕಾರ್ಯಕ್ರಮಕ್ಕೆ ರಾಮ್ ಚರಣ್ ತೇಜಾ,ಜ್ಯೂನಿಯರ್ ಎನ್.ಟಿ.ಆರ್.,ಅಜಯ್ ದೇವಗನ್ ಮತ್ತು ನಟಿ ಆಲಿಯಾ ಭಟ್ ಬರಲಿದ್ದಾರೆ ಎಂದು ತಿಳಿಸಿದರು. ಇಂದು ನಾನು ಚಿತ್ರದ ಪ್ರಮೋಶನ್ ಬಗ್ಗೆ ಮಾತನಾಡುವುದಿಲ್ಲ.ಇದೀಗ ನಾವು ರಿಲೀಸ್ ಮಾಡುತ್ತಿಲುವ ಜನನಿ ಹಾಡಿನ ಬಗ್ಗೆ ಮಾತ್ರ ಹೇಳುತ್ತೇನೆ. ಆರ್‌.ಆರ್.ಆರ್.ಚಿತ್ರದ ಟೀಸರ್ ಟ್ರೇಲರ್ ನಲ್ಲಿ ಫುಲ್ ಮಾಸ್ ಆಕ್ಷನ್ ದೃಶ್ಯಗಳನ್ನ ನೋಡಿದ್ದೀರಿ.ಈ ಚಿತ್ರದಲ್ಲಿ ಆಕ್ಷನ್ ಜೊತೆಗೆ ಭಾವನಾತ್ಮಕ ವಿಚಾರಗಳಿವೆ.

ಭಾವನಾತ್ಮಕ ವಿಷಯಗಳಿಲ್ಲದೆ ನಾನು ಸಿನಿಮಾ ಮಾಡುವುದಿಲ್ಲ. ಈ ಜನನಿ ಹಾಡು ಈ ಚಿತ್ರದ ಮುಖ್ಯ ಜೀವಾಳ ಅಗಿರುತ್ತದೆ ಎಂದು ಈ ಜನನಿ ಹಾಡಿನ ವಿಶೇಷತೆ ಮಹತ್ವ ತಿಳಿಸಿದರು. ಇನ್ನ ಡಿ.ವಿ‌.ವಿ ದಾನಯ್ಯ ಅವರ ಅದ್ದೂರಿ ನಿರ್ಮಾಣದ ಆರ್‌.ಆರ್ ಆರ್.ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ರಾಗ ಸಂಯೋಜನೆ ಮಾಡಿದ್ದು,ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆದಿದ್ಧಾರೆ.ಬರೋಬ್ಬರಿ ನಾಲ್ಕು ನೂರು ಕೋಟಿ ಬಜೆಟ್ ಹೊಂದಿದೆ ಎನ್ನಲಾದ ಆರ್.ಆರ್‌.ಆರ್.ಸಿನಿಮಾ ಮುಂದಿನ ವರ್ಷ ಜನವರಿ 7 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಈ ಚಿತ್ರ ನೋಡಲು ರಾಮ್ ಚರಣ್ ರಾಜ್ ಅಭಿಮಾನಿಗಳು ಮತ್ತು ಜ್ಯೂನಿಯರ್ ಎನ್.ಟಿ.ಆರ್.ಅಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಶ್ರೇ ಮಾಡಿ. ಈ ನಮ್ಮ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಮತ್ತಷ್ಟು ಹೊಸ ಹೊಸ ಸುದ್ದಿಗಳಗಾಗಿ ನಮ್ಮ ಪೇಜ್ ನ್ನು ತಪ್ಪದೆ ಲೈಕ್ ಮಾಡಿ.

Leave a Reply

%d bloggers like this: