ಕನ್ನಡಿಗ ರಾಹುಲ್ ದ್ರಾವಿಡ್ ಅವರ ಪತ್ನಿ ಯಾರು ಗೊತ್ತಾ? ಮೊದಲ ಬಾರಿ ನೋಡಿ

ಭಾರತ ಕ್ರಿಕೆಟ್ ತಂಡದ ಮಹಾಗೋಡೆ (ದಿ ವಾಲ್) ಎಂದು ಕರೆಸಿಕೊಳ್ಳುತ್ತಿದ್ದ ಕರ್ನಾಟಕದ ಹೆಮ್ಮೆಯ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಮುನ್ನೆಡೆಸಿದವರು.ಕ್ರಿಕೆಟ್ ಜಗತ್ತಿನಲ್ಲಿ ದ್ರಾವಿಡ್ ಅವರ ಸಾಧನೆ ಎಲ್ಲರಿಗೂ ಗೊತ್ತೇ ಇರುತ್ತದೆ.ಆದರೆ ಅವರ ವೈಯಕ್ತಿಕ ಕುಟುಂಬದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ.ಇನ್ನು ದ್ರಾವಿಡ್ ಅವರ ಪೂರ್ಣ ಹೆಸರು ರಾಹುಲ್ ಶರದ್ ದ್ರಾವಿಡ್.ಇವರು 1973 ಜನವರಿ 11 ರಂದು ಮಧ್ಯ ಪ್ರದೇಶದ ಇಂದೋರ್ ನಲ್ಲಿ ಜನಿಸುತ್ತಾರೆ.ದ್ರಾವಿಡ್ ತಮ್ಮ ಬ್ಯಾಟಿಂಗ್ ಟೆಕ್ನಿಕ್ ಮೂಲಕ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇಯಾದ ಒಂದು ವಿಶಿಷ್ಟ ಛಾಯೆಯನ್ನು ಹೊಂದಿದ್ದಾರೆ.ಅಂತರಾಷ್ಟೀಯ ಪಂದ್ಯಗಳಲ್ಲಿ 24,177 ರನ್ ಗಳಿಸಿರುವ ರಾಹುಲ್ ದ್ರಾವಿಡ್ ಅವರು 2005 ರಿಂದ 2007 ರವರೆಗೆ ಭಾರತ ತಂಡದ ಕ್ಯಾಪ್ಟನ್ ಆಗಿದ್ದರು.ಅದಲ್ಲದೆ ಪ್ರಸ್ತುತ ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಅದಲ್ಲದೆ ಇತ್ತೀಚೆಗಷ್ಟೇ ಭಾರತ ತಂಡದ ಕೋಚ್ ಆಗಿ ಆಯ್ಕೆ ಆಗಿದ್ದು,ಕೋಚ್ ಹುದ್ದೆಗೆ ಬಿಸಿಸಿಐ ದ್ರಾವಿಡ್ ಅವರಿಗೆ ಬರೋಬ್ಬರಿ ಹತ್ತು ಕೋಟಿ ಸಂಭಾವನೆ ನೀಡುತ್ತಾರೆ ಎಂದು ತಿಳಿದು ಬಂದಿದೆ.

ಇವಿಷ್ಟು ಅವರ ಕ್ರಿಕೆಟ್ ವೃತ್ತಿಗೆ ಸಂಬಂಧಪಟ್ಟಂತಹ ಒಂದಷ್ಟು ವಿಚಾರಗಳಾದರೆ,ನಾವೀಗ ಅವರ ಕೌಟುಂಬಿಕ ವಿಚಾರಗಳನ್ನು ತಿಳಿಯೋಣ.ರಾಹುಲ್ ದ್ರಾವಿಡ್ ಅವರು 2003 ರಲ್ಲಿ ಡಾಕ್ಟರ್ ಆದ ವಿಜೇತ ಪಂಧರ್ಕರ್ ಎಂಬುವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ.ದ್ರಾವಿಡ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೆಂಜ್ ಎನ್ನಬಹುದು.ಇವರಿಬ್ಬರ ಪ್ರೇಮ್ ಕಹಾನಿ ಸ್ವಾರಸ್ಯಕರವಾಗಿಯೇ ಕೂಡಿದೆ.ದ್ರಾವಿಡ್ ಅವರ ಪತ್ನಿ ವಿಜೇತ ಪಂಧರ್ಕರ್ ಅವರ ತಂದೆ ಭಾರತೀಯ ವಾಯು ಸೇನೆಯಲ್ಲಿ ವಿಂಗ್ಕ ಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.ಹೀಗಾಗಿ ಅವರ ತಂದೆ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.1968 ರಿಂದ 1971.ರವರೆಗೆ ವಿಜೇತ ಅವರ ತಂದೆಗೆ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಈ ನಡುವೆ ವಿಜೇತ ಕುಟುಂಬ ಮತ್ತು ರಾಹುಲ್ ದ್ರಾವಿಡ್ ಅವರ ಕುಟುಂಬಕ್ಕೆ ಪರಿಚವಾಗಿರುತ್ತದೆ.ಇದದ ನಡುವೆಯೇ ವಿಜೇತ ಮತ್ತು ದ್ರಾವಿಡ್ ಅವರಿಗೆ ಉತ್ತಮ ಬಾಂಧವ್ಯ ಏರ್ಪಟ್ಟಿರುತ್ತದೆ.ಇದರ ಪರಿಣಾಮ ವಿಜೇತ ಅವರ ವಿಧ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಸಾಗುತ್ತದೆ.

ಇವರ ತಂದೆಯು ಸೇವೆಯಿಂದ ನಿವೃತ್ತಿಗೊಂಡ ನಂತರ ನಾಗ್ಪುರದಲ್ಲಿ ಬಂದು ಕುಟುಂಬ ಸಮೇತ ನೆಲೆಸುತ್ತಾರೆ.2002 ರಲ್ಲಿ ವಿಜೇತ ಅವರು ಶಸ್ತ್ರ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ.ಇವರಿಬ್ಬರ ಪೋಷಕರು ಕೂಡ ಪರಸ್ಪರ ಆತ್ಮೀಯರಾಗಿದ್ದ ಕಾರಣ ಎರಡೂ ಮನೆಯವರು ಒಪ್ಪಿ ವಿಜೇತ ಮತ್ತು ದ್ರಾವಿಡ್ ಅವರಿಗೆ ವಿವಾಹ ನಿಶ್ಚಯ ಮಾಡುತ್ತಾರೆ.ಅದರಂತೆ ದ್ರಾವಿಡ್ ಅವರು ವಿಶ್ವಕಪ್ ಮುಗಿಸಿ ಬಂದ ಬಳಿಕ 2003 ಮೇ 4 ರಂದು ರಾಹುಲ್ ದ್ರಾವಿಡ್ ಮತ್ತು ವಿಜೇತ ಪಂಧಾರ್ಕರ್ ಅವರು ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ.ಇವರ ಸುಂದರ ಸಾಂಸಾರಿಕ ಜೀವನಕ್ಕೆ ಸಾಕ್ಷಿಯಾಗಿ 2005 ರಲ್ಲಿ ಒಂದು ಗಂಡು ಮಗುವಾಗುತ್ತದೆ.ಈ ಮಗುವಿಗೆ ಸಮೀತ್ ಎಂದು ಹೆಸರಿಡುತ್ತಾರೆ.ತದ ನಂತರ 2009 ರಲ್ಲಿ ಮತ್ತೊಂದು ಗಂಡು ಮಗುವಿಗೆ ಪೋಷಕರಾದ ಈ ದಂಪತಿಗಳು ತಮ್ಮ ಎರಡನೇ ಮಗುವಿಗೆ ಅನ್ವೇ ಎಂದು ನಾಮಕರಣ ಮಾಡುತ್ತಾರೆ.ಇದೀಗ ಕ್ರಿಕೆಟ್ ಭಾರತ ತಂಡದ ಆಪತ್ಭಾಂಧವವಾಗಿ ಆಟವಾಡುತ್ತಿದ್ದ ರಾಹುಲ್ ದ್ರಾವಿಡ್ ಮತ್ತು ವೈದ್ಯೆ ವಿಜೇತ ಪಂಧಾರ್ಕರ್ ಅವರು ಇಬ್ಬರು ಮುದ್ದಾದ ಮಕ್ಕಳೊಂದಿಗೆ ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ.