ಕನ್ನಡಿಗ ಕೆ ಎಲ್ ರಾಹುಲ್ ಡೇಟ್ ಮಾಡುತ್ತಿರುವ 5 ಬಾಲಿವುಡ್ ನಟಿಯರು ಇವರೇ ನೋಡಿ

ಭಾರತ ಕ್ರಿಕೆಟ್ ತಂಡದ ಕನ್ನಡಿಗ ಕೆ.ಎಲ್.ರಾಹುಲ್ ಫೀಮೆಲ್ ಫ್ಯಾನ್ಸ್ ಹೊಂದಿರುವ ಕ್ರಿಕೆಟ್ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.ತನ್ನ ಅದ್ಭುತ ಆಟದ ವೈಖರಿಯಿಂದ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿರು ಕೆ.ಎಲ್.ರಾಹುಲ್ ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಎಂದೇ ಗುರುತಿಸುಕೊಳ್ಳುತ್ತಿದ್ದಾರೆ.ಪರ್ಫೆಕ್ಟ್ ಹೈಟು,ವೇಯ್ಟು,ಹ್ಯಾಂಡ್ಸಮ್ ಆಗಿರುವ ಕೆ.ಎಲ್.ರಾಹುಲ್ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಪ್ರಮುಖ ಫ್ರಾಂಚೈಸಿಗಳಲ್ಲಿ ಒಂದಾದ ಪಂಜಾಂಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆ.ಎಲ್.ರಾಹುಲ್ ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಪಂಜಾಬ್ ತಂಡಕ್ಕೆ ವಿದಾಯ ಹೇಳುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದರು.ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕೆ.ಎಲ್.ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತೆಗೆದುಕೊಳ್ಳಬೇಕು ಎಂದು ಕನ್ನಡಿಗರ ಒಕ್ಕೋರಲ ಕೋರಿಕೆ ಎಲ್ಲೆಡೆ ಕೇಳಿ ಬಂದಿತ್ತು.

ಇನ್ನೂ ಕೂಡ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಕೆ.ಎಲ್.ರಾಹುಲ್ ಬಾಲಿವುಡ್ ಸ್ಟಾರ್ ನಟನ ಮಗಳೊಂದಿಗೆ ಡೇಟಿಂಗ್ ನಡೆಸುತ್ತಿರುವ ಬಗ್ಗೆ ವಿಚಾರ ಭಾರಿ ಸದ್ದು ಮಾಡಿತ್ತು.ಸದ್ಯಕ್ಕೆ ಕರ್ನಾಟಕ ಮೂಲದ ಕರಾವಳಿ ಭಾಗದ ಕನ್ನಡಿಗ ಬಾಲಿವುಡ್ ಖ್ಯಾತ ನಟರಾದ ಸುನೀಲ್ ಶೆಟ್ಟಿ ಅವರ ಪುತ್ರಿ ನಟಿ ಅತಿಥಿ ಶೆಟ್ಟಿಯವರೊಂದಿಗೆ ರಿಲೇಶನ್ ಶಿಪ್ ಅಲ್ಲಿರುವ ಕೆ.ಎಲ್.ರಾಹುಲ್ ಅವರು ಮುಂದಿನ ದಿನಗಳಲ್ಲಿ ಅತಿಥಿ ಶೆಟ್ಟಿ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಅತಿಥಿ ಶೆಟ್ಟಿ ಅವರ ತಂದೆ ನಟ ಸುನೀಲ್ ಶೆಟ್ಟಿ ಅವರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ ಎಂಬುದು ಕೂಡ ತಿಳಿದು ಬಂದಿದೆ.

ಇದಕ್ಕೂ ಮುಂಚೆ ಕೆ.ಎಲ್‌.ರಾಹುಲ್ ಅವರ ಹೆಸರಿನ ಜೊತೆ ಒಂದಷ್ಟು ಬಾಲಿವುಡ್ ಸ್ಟಾರ್ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು.ಅದರ ಬಗ್ಗೆ ಒಂದೊಂದೆ ತಿಳಿಯುವುದಾದರೆ ಬಾಲಿವುಡ್ ಜನಪ್ರಿಯ ನಟಿಯಾಗಿರುವ ಆಕಾಂಕ್ಷ ರಂಜನಾ ಕಪೂರ್ ಮತ್ತು ಕೆ.ಎಲ್.ರಾಹುಲ್ ಇಬ್ಬರು ಪರಸ್ಪರ ರೆಸ್ಟೋರೆಂಟ್ ಮತ್ತು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.ಈ ಇವರಿಬ್ಬರು ಜೊತೆಯಾಗಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿ ಬಿ-ಟೌನ್ ನಲ್ಲಿ ಇವರಿಬ್ಬರ ಬಗ್ಗೆ ಗುಸು ಗುಸು ಕೇಳಿ ಬಂದಿತ್ತು.

ಇನ್ನು ಇವರ ನಂತರ ಟೈಗರ್ ಶ್ರಾಫ್ ಅವರ ಮುನ್ನಾ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟ ನಿಧಿ ಅಗರ್ವಾಲ್ ಜೊತೆ ಕೆ.ಎಲ್.ರಾಹುಲ್ ಅವರು ಒಟ್ಟಿಗೆ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.ನಟಿ ನಿಧಿ ಅಗರ್ವಾಲ್ ಅವರು ಮೂಲತಃ ಬೆಂಗಳೂರಿನವರಾದ ಕಾರಣ ಕೆ.ಎಲ್.ರಾಹುಲ್ ಅವರೂ ಸಹ ನಿಧಿ ಅಗರ್ವಾಲ್ ಅವರ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.ಈ ಇಬ್ಬರ ನಟಿಯರ ಜೊತೆ ಇದ್ದ ಗುಲ್ಲು ಕಡಿಮೆ ಆಗುತ್ತಿದ್ದಂತೆ ಮತ್ತೊಬ್ಬ ನಟಿಯ ಜೊತೆ ಹೊಸ ಸುದ್ದಿಗೆ ಎಡೆ ಮಾಡಿಕೊಟ್ಟಿದ್ದು ಕೆ ಎಲ್.ರಾಹುಲ್ ಅವರೇ.

ಹೌದು ಪಂಜಾಬ್ ಮೂಲದ ನಟಿ ಸೋನಂ ಬಜ್ವ ಅವರ ಇನ್ಸ್ಟಾ ಗ್ರಾಮ್ ಪೋಸ್ಟಿಗೆ ರಿಯಾಕ್ಟ್ ಮಾಡಿದ ರಾಹುಲ್ ತಾವೇ ವಿನಾಕಾರಣ ಅನುಮಾನಕ್ಕೆ ದಾರಿ ಮಾಡಿಕೊಟ್ಟರು.ಸ್ವಲ್ಪ ದಿನದ ಬಳಿಕ ಈ ಒಂದು ಗಾಸಿಪ್ ಗೂ ಬ್ರೇಕ್ ಬಿದ್ದು,ಎಲ್ಲವೂ ಮುಕ್ತಾಯ ಅನ್ನುವ ಹೊತ್ತಿಗೆ ಕೆ.ಎಲ್.ರಾಹುಲ್ ಅವರು 2018 ರಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ದಾನ ಪಡೆದಾಗ ನಟಿ
ಸೋನಲ್ ಚೌಹಾನ್ ಇಮ್ರಾನ್ ಹಶ್ಮಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೆ.ಎಲ್.ರಾಹುಲ್ ಅವರಿಗೆ ವಿಶ್ ಮಾಡಿ ಶುಭ ಹಾರೈಸಿದ್ದರು.ಇವರ ಈ ಟ್ವೀಟ್ ಬಿ ಟೌನ್ ನಲ್ಲಿ ಇವರಿಬ್ಬರ ನಡುವೆ ಏನೋ ಇದೆ ಎಂಬಂತೆ ಬಿಂಬಿಸಲಾಗಿತ್ತು.

Leave a Reply

%d bloggers like this: