ಕನ್ನಡತಿ ರಶ್ಮಿಕಾ ಅವರು ಈಗ ಬಹು ಬೇಡಿಕೆಯ ನಟಿ, ಮತ್ತೊಬ್ಬ ನಟನ ಚಿತ್ರದಲ್ಲಿ ಅವಕಾಶ

ಭಾರತೀಯ ಚಿತ್ರರಂಗದ ಲಕ್ಕಿ ಗರ್ಲ್ ಎನಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೆನೋ ಗೊತ್ತಿಲ್ಲ ರಶ್ಮಿಕಾ ಮಂದಣ್ಣ ಯಾವುದೇ ಸಿನಿಮಾದಲ್ಲಿ ನಟಿಸುತ್ತಿದ್ದರು ಕೂಡ ಕೆಲವು ಒಂದೆರಡು ಚಿತ್ರ ಹೊರತು ಪಡಿಸಿದರೆ ಉಳಿದ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗುತ್ತಿವೆ. ಹಾಗಾಗಿಯೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಅನೇಕ ಸ್ಟಾರ್ಸ್ ನಟರೊಟ್ಟಿಗೆ ನಟಿಸುವ ಅವಕಾಶ ಒದಗಿ ಬರುತ್ತಿದೆ. ಇದರ ಜೊತೆಗೆ ರಶ್ಮಿಕಾ ಮಂದಣ್ಣ ಅವರು ತಮ್ಮ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸಂಭಾವನೆಯನ್ನ ಕೂಡ ದುಪ್ಪಟ್ಟಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ತಾನೇ ಅದೂ ಕೂಡ ಸುದ್ದಿಯಾಗಿತ್ತು. ರಶ್ಮಿಕಾ ಅಲ್ಲು ಅರ್ಜುನ್ ಅವರ ಪುಷ್ಪಾ ಸಿನಿಮಾಗೆ ಎರಡು ಕೋಟಿ ಸಂಭಾವನೆ ಪಡೆದಿದ್ದರಂತೆ.

ತದ ನಂತರ ಪುಷ್ಪಾ2 ಸಿನಿಮಾದಲ್ಲಿ ನಟಿಸಲು ನಾಲ್ಕು ಕೋಟಿ ಸಂಭಾವನೆ ಪಡೆದಿದ್ದಾರಂತೆ. ಅದಲ್ಲದೆ ಇತ್ತೀಚೆಗೆ ಕಳೆದ ವಾರ ರಿಲೀಸ್ ದುಲ್ಖರ್ ಸಲ್ಮಾನ್ ಅವರ ಸೀತಾ ರಾಮಂ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿರುವ ರಶ್ಮಿಕಾ ಮಂದಣ್ಣ ಅವರ ನಟನೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಸಕ್ಸಸ್ ಕಂಡಿದ್ದೇ ಕಂಡದ್ದು, ಟಾಲಿವುಡ್ ನಲ್ಲಿ ಸ್ಟಾರ್ ನಟ ವಿಜಯ್ ದೇವರಕೊಂಡ, ತಮಿಳಿನಲ್ಲಿ ಕಾರ್ತಿ ಅಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಯಶಸ್ಸನ್ನು ಕೂಡ ಪಡೆದರು. ನಂತರ ಇದೀಗ ಸೌತ್ ಸಿನಿಮಾ ಮಾತ್ರ ಬಾಲಿವುಡ್ ನಲ್ಲಿಯೂ ಸಹ ಮಿಂಚುತ್ತಿದ್ದು, ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಟ್ಟಿಗೆ ಸಹ ನಟಿಸಿದ್ದಾರೆ ಈ ಕರಾವಳಿ ಬೆಡಗಿ ರಶ್ಮಿಕಾ ಮಂದಣ್ಣ.

ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ ಅವರೊಟ್ಟಿಗೆ ನಟಿಸುತ್ತಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಅವರೊಟ್ಟಿಗೆ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿರ್ದೇಶಕ ಪರಶುರಾಮ್ ಅವರು ಸ್ವತಃ ಹೇಳಿರುವಂತೆ ರಶ್ಮಿಕಾ ಮಂದಣ್ಣ ಅವರು ಚಿತ್ರದ ಕಥೆ ಕೇಳಿ ಇಷ್ಟ ಪಟ್ಟಿದ್ದಾರಂತೆ. ಆದರೆ ಇನ್ನೂ ಕೂಡ ಅಧಿಕೃತವಾಗಿ ಒಪ್ಪಿಗೆ ಸೂಚಿಸಿಲ್ಲ ಎಂದು ಹೇಳಿದ್ದಾರೆ. ಪರಶುರಾಮ್ ಅವರು ತಮ್ಮ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಬೇಕು ಎಂಬುದು ನನಗೆ ತುಂಬಾ ಆಸೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಇದೀಗ ಕನ್ನಡದ ಕರಾವಳಿ ಬೆಡಗಿ ರಶ್ಮಿಕಾ ಮಂದಣ್ಣ ಅಂತೂ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಟ್ಟಿಗೆ ನಟಿಸುವ ಮೂಲಕ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಲಕ್ಕಿ ಗರ್ಲ್ ಎನಿಸಿಕೊಂಡಿದ್ದಾರೆ.