ಕನ್ನಡತಿ ರಂಜನಿ ರಾಘವನ್ ಇಬ್ಬರು ಸಹೋದರಿಯರು ಯಾರು ಗೊತ್ತಾ?. ನೋಡಿ ಒಮ್ಮೆ ಎಷ್ಟು ಸುಂದರವಾಗಿದ್ದಾರೆ

ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿ ಅಪಾರ ಹೆಂಗಳೆಯರ ಅಭಿಮಾನಿ ಬಳಗ ಹೊಂದಿರುವ ನಟಿ, ಕಥೆಗಾರ್ತಿ ರಂಜಿನಿ ರಾಘವನ್ ಅವರಿಗೆ ಇಬ್ಬರು ಸೋದರಿಯರು ಕೂಡ ಇದ್ದಾರಂತೆ. ಮೂವರು ಸೋದರಿಯರು ಬಿಡುವಿದ್ದಾಗಲೆಲ್ಲಾ ಒಟ್ಟಾಗಿ ಕಾಲ ಕಳೆಯುತ್ತಾರಂತೆ. ಹಾಗಾದರೆ ರಂಜಿನಿ ರಾಘವನ್ ಅವರ ತುಂಬು ಕುಟುಂಬದ ಬಗ್ಗೆ ತಿಳಿಯೋಣ. ಹೌದು ಕನ್ನಡ ಕಿರುತೆರೆಯಲ್ಲಿ ಹೊಸದೊಂದು ಸಂಚಲನ ಮೂಡಿಸಿದ ಧಾರಾವಾಹಿ ಅಂದರೆ ಅದು ಪುಟ್ಟಗೌರಿ ಮದುವೆ. ಈ ಸೀರಿಯಲ್ ನಲ್ಲಿ ಗೌರಿಯ ಪಾತ್ರದಲ್ಲಿ ಮುಗ್ದಭಾವದ ನಟನೆಯ ಮೂಲಕ ನಟಿ ರಂಜಿನಿ ರಾಘವನ್ ಅವರು ಕನ್ನಡ ನಾಡಿನ ಮನೆ ಮಗಳಂತಾದರು. ಬಳಿಕ ರಾಜಹಂಸ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಚಂದನವನಕ್ಕೂ ಕೂಡ ಎಂಟ್ರಿ ಆದರು. ಆದರೆ ಕಿರುತೆರೆ ಕೈ ಹಿಡಿದಿಷ್ಟು ಬೆಳ್ಳಿ ತೆರೆಯಲ್ಲಿ ಯಶಸ್ಸು ಸಿಗಲಿಲ್ಲ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಜನಪ್ರಿಯ ಧಾರಾವಾಹಿಯಾಗಿ ಹೊರ ಹೊಮ್ಮಿರುವ ಕನ್ನಡತಿ ಧಾರಾವಾಹಿಯ ಮೂಲಕ ಮತ್ತೆ ವೀಕ್ಷಕರ ಮನ ಗೆದ್ದಿದ್ದಾರೆ.

ನಟಿ ರಂಜಿನಿ ರಾಘವನ್ ಅವರಿಗೆ ಗಾಯನದಲ್ಲಿಯೂ ಕೂಡ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಶೂಟಿಂಗ್ ಬಿಡುವಿನ ವೇಳೆ ಸಹ ಕಲಾವಿದ,ತಂತ್ರಜ್ಞರೊಟ್ಟಿಗೆ ಕೂತು ತಮ್ಮ ಮಧುರವಾದ ಕಂಠದಲ್ಲಿ ಹಾಡನ್ನು ಕೂಡ ಹಾಡಿದ್ದರು‌. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಜೊತೆಗೆ ನಟಿ ರಂಜಿನಿ ರಾಘವನ್ ಅವರಿಗೆ ಸಾಹಿತ್ಯದ ಒಲವು ಕೂಡ ಇದೆ. ಅವಧಿ ಮಾಧ್ಯಮದಲ್ಲಿ ಬರೆಯುತ್ತಿದ್ದ ಸರಣಿ ಕಥೆಗಳು ಓದುಗರ ಮನ ಗೆದ್ದ ಕಾರಣ ಕಥೆ ಡಬ್ಬಿ ಎಂಬ ಕಥಾ ಸಂಕಲನವನ್ನು ಕೂಡ ಬರೆದಿದ್ದಾರೆ ರಂಜಿನಿ. ಹೀಗೆ ಸಿನಿಮಾ, ಕಿರುತೆರೆ, ಗಾಯನ, ಸಾಹಿತ್ಯ ಕ್ಷೇತ್ರದ ಬಗ್ಗೆ ಅಪಾರ ಒಲವು ಹೊಂದಿರುವ ನಟಿ ರಂಜಿನಿ ರಾಘವನ್ ಅವರಿಗೆ ಇಬ್ಬರು ಸೋದರಿಯರು ಕೂಡ ಇದ್ದಾರಂತೆ. ಹೌದು ನಟಿ ರಂಜಿನಿ ರಾಘವನ್ ಅವರಿಗೆ ವೈಷ್ಣವಿ ರಾಘವನ್ ಮತ್ತು ಸೌದಾಮಿನಿ ರಾಘವನ್ ಎಂಬ ಇಬ್ಬರು ಸೋದರಿಯರಿದ್ದಾರೆ.

ರಂಜಿನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಅಕ್ಕ ರಂಜಿನಿ ಅವರಂತೆ ಸೋದರಿ ವೈಷ್ಣವಿ ರಾಘವನ್ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿ ತೊಡಗಿಕೊಂಡಿದ್ದಾರೆ. ವೈಷ್ಣವಿ ಅವರಿಗೂ ಕೂಡ ಗಾಯನ ಮತ್ತು ನೃತ್ಯದ ಬಗ್ಗೆ ಅತೀವ ಆಸಕ್ತಿ ಇದೆಯಂತೆ. ಇನ್ನೊಬ್ಬ ಸೋದರಿ ಸೌದಾಮಿನಿ ರಾಘವನ್ ಅವರಿಗೆ ಶೈಕ್ಷಣಿಕವಾಗಿ ಮುಂದಿದ್ದು ತಮ್ಮ ವಿಧ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಿದ್ದಾರಂತೆ. ಆಗಾಗ ಈ ಮೂವರು ಸೋದರಿಯರು ತಮ್ಮ ಪೋಷಕರೊಟ್ಟಿಗೆ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇವರ ಮುದ್ದಾದ ಕುಟುಂಬ ನೋಡಿ ನಟಿ ರಂಜಿನಿ ರಾಘವನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿರುತ್ತಾರೆ.

Leave a Reply

%d bloggers like this: