ಕನ್ನಡತಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮತ್ತೆ ವಾಪಸ್ ಬಂದ್ರು ನಟಿ

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ದ ವಾಹಿನಿ ಮತ್ತು ನಾಡಿನ ಮೂಲೆ ಮೂಲೆಗಳಲ್ಲಿ ಅತಿ ಹೆಚ್ಚು ಜನರ ಪ್ರೀತಿ ಪಡೆದಿರುವ ವಾಹಿನಿ ಅಂದರೆ ಅದು ಒನ್ ಅಂಡ್ ಓನ್ಲಿ ಕಲರ್ಸ್ ಕನ್ನಡ ವಾಹಿನಿ. ಈ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೌಟುಂಬಿಕ, ಪ್ರೇಮಾಧಾರಿತ ಧಾರಾವಾಹಿಗಳು ಮತ್ತು ಆಕರ್ಷಕ ರೋಚಕ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿವೆ. ಅದ್ರಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಪಾರ ಜನಪ್ರಿಯತೆ ಪಡೆದು ಜನ ಮೆಚ್ಚುಗೆ ಪಡೆದಿರೋದು ಕನ್ನಡತಿ ಧಾರಾವಾಹಿ. ಈ ಕನ್ನಡತಿ ಧಾರಾವಾಹಿ ಇತ್ತೀಚೆಗೆ ಒಂದು ಹೊಸ ವಿಷಯವಾಗಿ ಭಾರಿ ಸೌಂಡ್ ಮಾಡಿತ್ತು. ಅದು ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಪಾತ್ರ ಕಣ್ಮರೆಯಾಗಿದೆ. ಇನ್ಮುಂದೆ ವರೂಧಿನಿ ಪಾತ್ರ ಇರೋದಿಲ್ಲ ಎಂಬ ಸುದ್ದಿ. ಈ ವರೂಧಿನಿ ಹರ್ಷನನ್ನ ಹೀರೋ ಹೀರೋ ಅಂತೇಳಿ ಹಿಂದೆ ಬಿದ್ದಿರ್ತಾಳೆ.

ಹರ್ಷನನ್ನ ತುಂಬಾ ಇಷ್ಟ ಪಡುತ್ತಿರ್ತಾಳೆ. ಆದ್ರೇ ಹರ್ಷ ಮಾತ್ರ ವರೂಧಿನಿ ಜೀವದ ಗೆಳತಿ ಭುವಿಯನ್ನ ಪ್ರೀತಿಸಿ ಮದುವೆ ಆಗ್ಬಿಡ್ತಾನೆ. ಕೊನೆಗೆ ವರೂಧಿನಿ ಬೇಸರನು ಕೂಡಾ ಪಡ್ತಾಳೆ‌. ಅದಾದ ನಂತರ ಈ ವರೂಧಿನಿ ಪಾತ್ರ ಕನ್ನಡತಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳೋದಿಲ್ಲ. ಹಾಗಾಗಿ ವೀಕ್ಷಕರು ಕೂಡ ಬಹುಶಃ ವರೂಧಿನಿ ಪಾತ್ರ ಮುಕ್ತಾಯ ಆಗಿರಬೇಕು ಎಂದು ತಿಳಿಯುತ್ತಾರೆ. ಇದಕ್ಕೆ ಪೂರಕವಾಗಿ ವರೂಧಿನಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಸಾರಾ ಅವರು ಇತ್ತೀಚೆಗೆ ನಡೆದ ಅನುಬಂಧ ಕಾರ್ಯಕ್ರಮದಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸಡನ್ ಶಾಕ್ ನೀಡಿದ್ದಾರೆ ಕನ್ನಡತಿ ಧಾರಾವಾಹಿ ತಂಡ. ಅದೇನಪ್ಪಾ ಅಂದರೆ ವರೂಧಿನಿ ಪಾತ್ರ ಕನ್ನಡತಿ ಧಾರಾವಾಹಿಯಲ್ಲಿ ಮತ್ತೇ ರೀಎಂಟ್ರಿ ಪಡೆದುಕೊಂಡಿದೆ.

ಧಾರಾವಾಹಿಯಲ್ಲಿ ವರೂಧಿನಿ ಹರ್ಷನನ್ನ ಭೇಟಿ ಮದುವೆ ಪೋಟೋ ನೀಡಿದ್ದಾಳೆ. ಫೋಟೋ ಪಡೆದು ಹರ್ಷ ಸಹ ಸಂತಸಗೊಂಡು ರಿಯಾಕ್ಟ್ ಮಾಡಿದ್ದಾನೆ‌. ಅಲ್ಲಿಗೆ ವರೂಧಿನಿ ಪಾತ್ರ ಕನ್ನಡತಿ ಧಾರಾವಾಹಿಯಲ್ಲಿ ಇನ್ನೂ ಕೂಡ ಜೀವಂತವಾಗಿ ಇದೆ ಅನ್ನೋದನ್ನ ತಿಳಿಯಬಹುದು.ಅಸಲಿಗೆ ವರೂಧಿನಿ ಪಾತ್ರ ಕೊಂಚ ದಿನಗಳ ಕಾಲ ಬರದೇ ಇರಲು ಕಾರಣ ಏನಪ್ಪಾ ಅಂದರೆ ವರೂಧಿನಿ ಪಾತ್ರ ಮಾಡ್ತಿರೋ ನಟಿ ಸಾರಾ ಅವರು ವೈಯಕ್ತಿಕವಾಗಿ ಕೆಲವು ದಿನಗಳ ಕಾಲ ಹೊರಗಡೆ ಪ್ರವಾಸ ಹೋಗಿದ್ದರಂತೆ. ಹಾಗಾಗಿ ಇಷ್ಟು ದಿನಗಳ ಕಾಲ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರಲಿಲ್ಲವಂತೆ. ಇತ್ತೀಚೆಗೆ ಕನ್ನಡತಿ ಧಾರಾವಾಹಿ ಬರೋಬ್ಬರಿ ಏಳುನೂರು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಸಂಭ್ರಮಾಚರಣೆ ಕೂಡ ಮಾಡಿ ಸುದ್ದಿಯಾಗಿತ್ತು.

Leave a Reply

%d bloggers like this: