ಕನ್ನಡದ ನಿರ್ದೇಶಕ, ನಿರ್ಮಾಪಕ ಹಾಗೂ ದಕ್ಷಿಣ ಭಾರತದ ಸ್ಟಾರ್ ನಟ, ಶುರುವಾಯಿತು ದಕ್ಷಿಣ ಭಾರತದ ಮತ್ತೊಂದು ದೊಡ್ಡ ಚಿತ್ರ

ಲೂಸಿಯಾ ಪವನ್ ಕುಮಾರ್ ಮತ್ತು ಮಲೆಯಾಳಂ ಸೂಪರ್ ಸ್ಟಾರ್ ನಟ ಫಹಾದ್ ಫಾಸಿಲ್ ಅವರ ಕಾಂಬಿನೇಶನ್ ಅಲ್ಲಿ ಮೂಡಿ ಬರುತ್ತಿರುವ ಧೂಮಂ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಧೂಮಂ ಸಿನಿಮಾದ ವಿಶೇಷತೆ ನೋಡೋದಾದ್ರೆ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಸದ್ಯದ ಮಟ್ಟಿಗೆ ಕನ್ನಡದ ಯಶಸ್ವಿ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ ಸಂಸ್ಥೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಧೂಮಂ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಧೂಮಂ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಅದೇ ರೀತಿಯಾಗಿ ಚಿತ್ರದ ನಾಯಕ ನಟ ಫಹಾದ್ ಫಾಸಿಲ್, ಅಪರ್ಣಾ ಬಾಲ ಮುರುಳಿ ಸೇರಿದಂತೆ ಚಿತ್ರತಂಡದ ಒಂದಷ್ಟು ಮಂದಿ ‌ಭಾಗವಹಿಸಿದ್ರು. ಇನ್ನು ಧೂಮಂ ಸಿನಿಮಾದ ಟೈಟಲ್ ಬಹಳ ವಿಭಿನ್ನ ವಿಶೇಷತೆಯಿಂದ ಕಾಣುತ್ತಿದ್ದು, ಚಿತ್ರದ ಬಗ್ಗೆ ಪೋಸ್ಟರ್ ಮೂಲಕವೇ ಈಗಾಗಲೇ ಕುತೂಹಲ ಮೂಡಿಸಿದೆ. ಇನ್ನು ಈ ಚಿತ್ರದ ನಟಿ ಅಪರ್ಣಾ ಬಾಲಮುರುಳಿ ಅವರು ಈಗಾಗಲೇ ಸೂರರೈ ಪೋಟ್ರು ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತಿದೆ. ಇದೀಗ ಧೂಮಂ ಚಿತ್ರದಲ್ಲಿ ಫಹಾದ್ ಫಾಸಿಲ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸ್ಟಾರ್ಸ್ ಜೊತೆಗೆ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಧೂಮಂ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಮಲೆಯಾಳಂ ಹೀಗೆ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದೆಯಂತೆ. ಈ ಧೂಮಂ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಈಗಾಗಲೇ ಮುಹೂರ್ತ ನೆರವೇರಿಸಿಕೊಂಡಿರೋ ಧೂಮಂ ಸಿನಿಮಾದ ಚಿತ್ರೀಕರಣ ಇದೇ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಿ ಮುಂದಿನ ವರ್ಷದ ಜೂನ್ ತಿಂಗಳ ಅಷ್ಟೊತ್ತಿಗೆ ಮುಗಿಯಲಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿದೆ. ರಾಜಕುಮಾರ, ಕೆಜಿಎಫ್, ಕೆಜಿಎಫ್2, ಕಾಂತಾರ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿರೋ ಹೊಂಬಾಳೆ ಫಿಲಂಸ್ ಇದೀಗ ಧೂಮಂ ಸಿನಿಮಾ ಮಾಡುತ್ತಿದ್ದು, ಇದೂ ಕೂಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಲಿದ್ಯ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply

%d bloggers like this: