ಕನ್ನಡದ ಮತ್ತೊಂದು ಜನಪ್ರಿಯ ರಿಯಾಲಿಟಿ ಶೋ ಅಂತ್ಯ, ಗೆದ್ದ ಜೋಡಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಗಳಲ್ಲಿ ಜೀ಼ ಕನ್ನಡ ವಾಹಿನಿ ಕೂಡಾ ಒಂದಾಗಿದೆ. ವಿಭಿನ್ನ ಬಗೆಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಜೀ಼ ಕನ್ನಡ ವಾಹಿನಿ ನಾಡಿನಾದ್ಯಂತ ಪ್ರಸಿದ್ದವಾಗಿದೆ. ಈ ಜೀ಼ ಕನ್ನಡ ವಾಹಿನಿಯಲ್ಲಿ ಸರಿಗಮಪ, ಡ್ರಾಮಾ ಜ್ಯೂನಿಯರ್ಸ್ ಅಂಡ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗಳು ಭಾರಿ ಜನ ಮೆಚ್ಚುಗೆ ಪಡೆದಿವೆ. ಅದೇ ರೀತಿಯಾಗಿ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಗೆ ತೆರೆ ಬಿದ್ದಿದೆ. ಈ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಗೆದ್ದವರಿಗೆ ಪವರ್ ಸ್ಟಾರ್ ಟ್ರೋಫಿ ನೀಡಲಾಗಿದೆ. ಈ ಟ್ರೋಫಿಗೆ ಪವರ್ ಸ್ಟಾರ್ ಟ್ರೋಫಿ ಎಂದು ಹೆಸರಿಡಲಾಗಿತ್ತು. ಹಾಗಾಗಿ ಈ ಪವರ್ ಸ್ಟಾರ್ ಟ್ರೋಫಿ ಎತ್ತಿಡಿಯಬೇಕು ಅನ್ನೋದು ಈ ಡ್ಯಾನ್ಸ್ ಶೋನ ಪ್ರತಿಯೊಬ್ಬ ಸ್ಪರ್ಧಿಗಳ ಕನಸಾಗಿತ್ತು.

ಆದರೆ ಎಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ತಮ್ಮ ವಿಶಿಷ್ಟ ನೃತ್ಯ ಪ್ರತಿಭೆಯ ಮೂಲಕ ಈ ಪವರ್ ಸ್ಟಾರ್ ಟ್ರೋಫಿ ಎತ್ತಿ ಹಿಡಿದದ್ದು ಸದ್ವಿನ್ ಎಸ್.ಶೆಟ್ಟಿ ಅಂಡ್ ಶಾರಿಕಾ ಶೆಟ್ಟಿ ಜೋಡಿ. ಈ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆರನೇ ಆವೃತ್ತಿಯಲ್ಲಿ ಶಶಾಂಕ್-ತ್ರಿಷಾ, ದಕ್ಷಿತ್ ಗೌಡ-ಪ್ರಣನ್ಯ, ಗಗನ್ ಶೆಟ್ಟಿ-ದಿಶಾ ದೇಚಮ್ಮ, ಋಷಿಕೇಶ್-ಶ್ರಾವ್ಯ, ಕೀತಾ ಜಾನ್ಸ್-ಆಶ್ರಿತಾ ಎಸ್.ವಿ, ಮಹೇಶ್-ಚಾಹತ್ ಶಬೀರ್ ಸೇರಿದಂತೆ ಒಟ್ಟು ಏಳು ಜೋಡಿಗಳು ಫೈನಲ್ ಹಂತಕ್ಕೆ ತಲುಪಿದ್ದವು. ಈ ಎಲ್ಲಾ ಜೋಡಿಗಳು ಒಬ್ಬರಿಗೊಬ್ಬರು ಉತ್ತಮವಾಗಿ ಸ್ಪರ್ಧೆ ನೀಡುತ್ತಾ ಯಾವ ಜೋಡಿ ಗೆಲ್ಲುತ್ತೆ ಅನ್ನೋ ಮಟ್ಟಕ್ಕೆ ಭಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮೊದಲ ರನ್ನರ್ ಆಪ್ ಆಗಿ ಮಹೇಶ್-ಚಾಹತ್ ಶಬೀರ್ ಶೇಖ್ ಆಯ್ಕೆ ಆಗಿದ್ದು, ಈ ಜೋಡಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅದೇ ರೀತಿಯಾಗಿ ಎರಡನೇ ರನ್ನರ್ ಅಪ್ ಆಗಿ ದಕ್ಷತ್ ಗೌಡ-ಪ್ರಣನ್ಯ ಆಯ್ಕೆ ಆಗಿದ್ದಾರೆ. ಇವರೆಲ್ಲರಗಿಂತ ತಮ್ಮ ನೃತ್ಯದ ಮೂಲಕ ಹೆಚ್ಚು ಗಮನ ಸೆಳೆದ ಸದ್ವಿನ್ ಅಂಡ್ ಶಾರಿಕಾ ಜೋಡಿ ಈ ಡಿಕೆಡಿ ಸೀಸನ್6 ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಈ ಜೋಡಿ ಮೂವತ್ತು ಲಕ್ಷ ರೂಪಾಯಿ ಬಹುಮಾನ ಮೊತ್ತದ ಜೊತೆಗೆ ಪವರ್ ಸ್ಟಾರ್ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ವಿಜೇತ ಸದ್ವಿನ್ ಶೆಟ್ಟಿ ಅವರು ಡಿಕೆಡಿ ಸೀಸನ್ 6ನಲ್ಲಿ ಗೆದ್ದಿರೋದಕ್ಕೆ ಸಂತಸವಾಗಿದ್ದು, ಅವರಿಗೆ ಮೂವತ್ತು ಲಕ್ಷ ಗೆದ್ದಿದಕ್ಕಿಂತ ಹೆಚ್ಚಾಗಿ ಪವರ್ ಸ್ಟಾರ್ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದಕ್ಕೆ ಸಖತ್ ಖುಷಿ ಆಗಿದೆಯಂತೆ. ಇನ್ನು ಈ ಜೋಡಿಯ ಮಾಸ್ಟರ್ ಅರುಣ್ ಅವರಿಗೆ ಪವರ್ ಸ್ಟಾರ್ ಟ್ರೋಫಿ ನೋಡಿದಾಗಿನಿಂದ ಈ ಟ್ರೋಫಿಯನ್ನ ತಾವೇ ಪಡೆಯಬೇಕು ಎಂಬ ಹಠ ಮೂಡಿತ್ತಂತೆ. ಕೊನೆಗೂ ಅವರ ಇಚ್ಚೆಯಂತೆ ಅವರ ಪರಿಶ್ರಮಕ್ಕೆ ತಕ್ಕಂತೆ ಪವರ್ ಸ್ಟಾರ್ ಟ್ರೋಫಿಯನ್ನ ಅರುಣ್, ಸದ್ವಿನ್ ಶೆಟ್ಟಿ ಅಂಡ್ ಶಾರಿಕಾ ಶೆಟ್ಟಿ ತಮ್ಮ ಪಾಲಾಗಿ ಮಾಡಿಕೊಂಡಿದ್ದಾರೆ.

Leave a Reply

%d bloggers like this: