ಕನ್ನಡದ ಖ್ಯಾತ ನಿರೂಪಕಿ ಸುಷ್ಮಾ ಮೊದಲ ಪತಿ ಯಾರು ಗೊತ್ತಾ? ಆದರೆ ಇಂದಿಗೂ ಡಿವೋರ್ಸ್ ಪಡೆದಿಲ್ಲ

ಕನ್ನಡ ಕಿರುತೆರೆಯ ಜನಪ್ರಿಯ ಈ ನಿರೂಪಕಿಗೆ ಮದುವೆ ಆಗಿದೆ. ಆದರೆ ಡಿವೋರ್ಸ್ ಪಡೆದಿಲ್ಲ. ಯಾಕೆ ಗೊತಾ..!ಸಿನಿಮಾ ಅಥವಾ ಕಿರುತೆರೆಯಲ್ಲಿ ಮಿಂಚುವ ಅನೇಕ ಸ್ಟಾರ್ ನಟ-ನಟಿಯರ ಬದುಕು ಬಣ್ಣದ ತೆರೆಯಲ್ಲಿ ಕಂಡಷ್ಟೇ ಅದ್ದೂರಿಯಾಗಿರುತ್ತದೆ. ಸದಾ ಅವರು ಸಂಭ್ರಮದಲ್ಲೇ ಜೀವನ ಮಾಡುತ್ತಾರೆ ಎಂಬಂತೆ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಆದರೆ ತೆರೆಯ ಮೇಲೆ ಸುಂದರವಾಗಿ, ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ಕೆಲವು ಕಲಾವಿದರ ಬದುಕು ನೋವಿನ ಕಡಲಲ್ಲಿ ಮುಳುಗಿರುತ್ತದೆ. ಆದರೆ ಎಲ್ಲಿಯೂ ಕೂಡ ಅವರು ತಮ್ಮ ನೋವನ್ನ ವ್ಯಕ್ತಪಡಿಸಿಕೊಳ್ಳುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವಂತಹ ಅನೇಕ ಮಂದಿ ಇದೇ ರೀತಿಯಾಗಿ ತಮ್ಮ ಮನದಾಳದ ನೋವನ್ನ ತಾವೇ ಅನುಭವಿಸುತ್ತಾರೆ. ಅಂತೆಯೇ ಕಿರುತೆರೆಯ ಬಣ್ಣದ ಲೋಕದಲ್ಲಿ ಯಶಸ್ಸು ಕಂಡ ನಟಿ ಕಮ್ ಖ್ಯಾತ ನಿರೂಪಕಿ ಸುಷ್ಮಾ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಾದಿ ತಪ್ಪುತ್ತಾರೆ.

ಆದರೆ ಆ ತಪ್ಪಿದ ಹಾದಿಯಿಂದ ಹೊರ ಬಂದು ಇದೀಗ ತಮ್ಮದೇಯಾದ ಹೊಸ ದಾರಿ ಕಂಡುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಸುಷ್ಮಾ ಅವರ ಹಿನ್ನೆಲೆ ತಿಳಿದುಕೊಳ್ಳುವುದಾದರೆ ನಟಿ, ನಿರೂಪಕಿ ಸುಷ್ಮಾ ಅವರು ಜನಿಸಿದ್ದು ಚಿಕ್ಕ ಮಗಳೂರು ಜಿಲ್ಲೆಯ ಕೊಪ್ಪದಲ್ಲಿ. ಕೆ.ಎಲ್.ಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದ ಸುಷ್ಮಾ ಅವರು ಮದ್ರಾಸ್ ವಿಶ್ವ ವಿಧ್ಯಾಲಯದಿಂದ ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾರೆ‌. ಸುಷ್ಮಾ ಅವರಿಗೆ ಶೈಕ್ಷಣಿಕ ಜೊತೆಗೆ ಸಾಂಸ್ಕೃತಿಕ ಕಲೆಗಳಲ್ಲಿಯೂ ಕೂಡ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಸುಷ್ಮಾ ಅವರು ಭರತನಾಟ್ಯದಲ್ಲಿಯೂ ಕೂಡ ಪ್ರವೀಣೆಯಾಗಿದ್ದಾರೆ‌.

ಹೀಗೆ ಕಲೆಯಲ್ಲಿ ಆಸಕ್ತಿ ಹೊಂದಿದ ಕಾರಣ ಸುಷ್ಮಾ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆಯುತ್ತಾರೆ. ಇದಾದ ಬಳಿಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಅವರ ಭಾಗೀರಥಿ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಇದರ ಜೊತೆಗೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸುತ್ತಾರೆ. ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ಅಂದರೆ ಅದು ಗುಪ್ತಗಾಮಿನಿ. ಈ ಗುಪ್ತಗಾಮಿನಿ ಧಾರಾವಾಹಿಯಲ್ಲಿ ಭಾವನಾ ಪಾತ್ರದ ಮೂಲಕ ನಟಿ ಸುಷ್ಮಾ ಅವರಿಗೆ ನಾಡಿನಾದ್ಯಂತ ಅಪಾರ ಜನಪ್ರಿಯತೆ ಸಿಗುತ್ತದೆ.

ಜೊತೆಗೆ ಸೊಸೆ ತಂದ ಸೌಭಾಗ್ಯ ಧಾರಾವಾಹಿಯ ನಟನೆಗಾಗಿ ಸುಷ್ಮಾ ಅವರಿಗೆ ಜೀ಼ ಕನ್ನಡ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ನೀಡುತ್ತದೆ. ಇನ್ನು ನಟಿ ಸುಷ್ಮಾ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆಯುವಾಗ ಪ್ರೀತಂ ಗುಬ್ಬಿ ಅವರ ಪರಿಚಯವಾಗುತ್ತದೆ. ಈ ಪರಿಚಯ ಸ್ನೇಹವಾಗಿ ಪ್ರೀತಿಯಾಗುತ್ತದೆ. ಈ ಪ್ರೀತಿಗೆ ಹೊಸ ಅರ್ಥವಾಗಿ 2010 ರಲ್ಲಿ ಮದುವೆ ಕೂಡ ಆಗುತ್ತಾರೆ‌. ಆದರೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ಕೆಲವೇ ವರ್ಷಗಳ ಬಳಿಕ ಇಬ್ಬರು ಬೇರೆ ಬೇರೆ ಆಗುತ್ತಾರೆ. ಆದರೆ ಸುಷ್ಮಾ ಅವರು ಪ್ರೀತಂ ಗುಬ್ಬಿ ಅವರಿಂದ ವಿಚ್ಚೇದನ ಪಡೆಯದೇ ಸ್ವತಂತ್ರವಾಗಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಏನು ಕಾರಣ ಎಂಬುದು ಅವರವರಿಗೇನೇ ಗೊತ್ತು..

ಇದಾದ ಬಳಿಕ ಕಿರುತೆರೆ ಧಾರಾವಾಹಿಯಿಂದ ಅಂತರ ಕಾಯ್ದುಕೊಂಡ ಸುಷ್ಮಾ ಅವರು ನಿರೂಪಣೆಯತ್ತ ಮುಖ ಮಾಡುತ್ತಾರೆ. ಕಲರ್ಸ್ ಕನ್ನಡ, ಜೀ಼ ಕನ್ನಡದ ಅನೇಕ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಾರೆ. ಮುದ್ದು ಮುಖದ ಚೆಲುವೆ ಸುಷ್ಮಾ ಅವರ ಹರಳು ಉರಿದಂತ ಮಾತು ನಿರೂಪಣಾ ಶೈಲಿ ಅವರನ್ನ ಜನಪ್ರಿಯ ನಿರೂಪಕಿಯಾಗಿ ಹೊರ ಹೊಮ್ಮಿಸುತ್ತದೆ. ಇದಾದ ಬಳಿಕ ಜೀನ್ಸ್ ಎಂಬ ರಿಯಾಲಿಟಿ ಶೋ ದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ಇದಾದ ನಂತರ ಮನೆ ಮನೆ ಮಹಾಲಕ್ಷ್ಮಿ, ಸೀರೀಯಲ್ ಸಂತೆಯಂತಹ ಒಂದಷ್ಟು ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.

Leave a Reply

%d bloggers like this: