ಕನ್ನಡದ ಖ್ಯಾತ ಖಳನಟ ಸುದೀರ್ ಪತ್ನಿ ಅಸಲಿಗೆ ಯಾರು ಗೊತ್ತಾ? ನೋಡಿ ಒಮ್ಮೆ

80-90 ರ ದಶಕದಲ್ಲಿ ಖಳ ನಟರಾಗಿ ಕನ್ನಡ ಚಿತ್ರರಂಗವನ್ನು ಆಳಿದಂತಹ ದಿಗ್ಗಜ ನಟರು ಇಂದಿಗೂ ಕೂಡ ನಮ್ಮ ಯುವ ಪೀಳಿಗೆಯವರನ್ನ ತಮ್ಮ ಹಾವ ಭಾವ ಕಣ್ಣೋಟಗಳಿಂದಾನೇ ನಡುಗಿಸಿಬಿಡುತ್ತಾರೆ. ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ಟೈಗರ್ ಪ್ರಭಾಕರ್, ಮುಖ್ಯ ಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್ ಹೀಗೆ ಇವರ ಸಾಲಿನಲ್ಲಿ ಮತ್ತೊಬ್ಬ ನಟ ರಾಕ್ಷಸ ಅಂದರೆ ಅದು ಸುಧೀರ್. ರಂಗಭೂಮಿ ಹಿನ್ನೆಲೆಯಿಂದ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಸುದೀರ್ ಅವರು ತಮ್ಮ ಅದ್ಭುತ ನಟನೆಯಿಂದ ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗ ಆಳಿ ಖಳ ನಟರಾಗಿ ಮಿಂಚಿದರು. ನಟ ಸುಧೀರ್ ಅವರು ಅಂದಿನ ದಿನಮಾನಗಳಲ್ಲಿ ಡಾ.ರಾಜ್ ಕುಮಾರ್, ವಿಷ್ಣು ವರ್ಧನ್, ಶಂಕರ್ ನಾಗ್, ಅಂಬರೀಶ್, ಕಾಶಿನಾಥ್ ಹೀಗೆ ಕನ್ನಡದ ಬಹುತೇಕ ದಿಗ್ಗಜ ನಟರ ಸಿನಿಮಾಗಳಲ್ಲಿ ಕಡ್ಡಾಯವಾಗಿ ಇರುತ್ತಿದ್ದರು.

ಯಾವ ಸಿನಿಮಾವಾದರು ಕೂಡ ಆ ಚಿತ್ರದಲ್ಲಿ ವಿಲನ್ ಆಗಿ ಸುಧೀರ್ ಅವರು ಇದ್ದೇ ಇರುತ್ತಿದ್ದರು. ಅಂದಿನ ನಿರ್ದೇಶಕರಿಗೂ ಕೂಡ ಖಳ ನಟರ ಪಾತ್ರ ಅಂದಾಕ್ಷಣ ತಟ್ಟನೆ ನೆನಪಿಗೆ ಬರುತ್ತಿದ್ದಂತಹ ಕಲಾವಿದರ ಪೈಕಿ ಸುಧೀರ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಿದ್ದರು. 1973 ರಲ್ಲಿ ಬಿ.ಎ.ಅರಸು ಕುಮಾರ್ ಅವರ ನಿರ್ದೆಶನದಲ್ಲಿ ಮೂಡಿಬಂದಂತಹ ಬೀಸಿದ ಬಲೆ ಎಂಬ ಸಿನಿಮಾದ ಮೂಲಕ ಸುಧೀರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಬಳಿಕ ಇವರ ಅಭಿನಯದಿಂದ ಸಿನಿ ಪ್ರೇಕ್ಷಕರ ಮನಗೆದ್ದು ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸಿಂಧೂರ ಲಕ್ಷ್ಮಣ, ನಾರದ ವಿಜಯ, ಮಂಕುತಿಮ್ಮ, ಕೆರಳಿದ ಸಿಂಹ, ಒಡ ಹುಟ್ಟಿದವರು, ಸಾಹಸ ಸಿಂಹ, ಸಾಂಗ್ಲಿಯಾನ, ಸೇರಿದಂತೆ ಬರೋಬ್ಬರಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ನಟರಾಗಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಸುಧೀರ್ ಅವರ ವೈಯಕ್ತಿಕ ಜೀವನ ಕುರಿತು ತಿಳಿಯುವುದಾದರೆ ಸುಧೀರ್ ಅವರು ತಮ್ಮ ಜೊತೆ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುತ್ತಿದ್ದಂತಹ ರಂಗಭೂಮಿ ಕಲಾವಿದೆ ಮಾಲತಿ ಎಂಬುವರನ್ನ ಮದುವೆಯಾಗುತ್ತಾರೆ. ಇವರಿಗೆ ನಂದ ಕಿಶೋರ್ ಮತ್ತು ತರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ನಂದ ಕಿಶೋರ್ ಮತ್ತು ತರುಣ್ ಸುಧೀರ್ ಇಬ್ಬರು ಸಹ ಇಂದು ನಿರ್ದೇಶಕರಾಗಿ ಯಶಸ್ಸು ಕಂಡು ತಮ್ಮ ತಂದೆಯಂತೆ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.