ಕನ್ನಡದ ಖ್ಯಾತ ಖಳನಟ ಶೋಭರಾಜ್ ಪತ್ನಿ ನಿಜಕ್ಕೂ ಯಾರು ಗೊತ್ತಾ? ನೋಡಿ ಒಮ್ಮೆ

ಕನ್ನಡ ಚಿತ್ರರಂಗದ ತೊಂಭತ್ತರ ದಶಕದ ಖ್ಯಾತ ಖಳ ನಟ ಶೋಭರಾಜ್ ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಕಡಿಮೆ ಆಗಿದೆ. ಚಂದನವನದಲ್ಲಿ ಖಳ ನಟನಾಗಿ ಮಿಂಚಿದ ಶೋಭರಾಜ್ ಅವರು
ಸದ್ಯಕ್ಕೆ ಏನು ಮಾಡುತ್ತಿದ್ದಾರೆ ಎಂಬುದು ಕನ್ನಡ ಸಿನಿ ಪ್ರೇಕ್ಷಕರಿಗೆ ಕಾಡುತ್ತಿರುವ ಪ್ರಶ್ನೆಯಾಗಿದೆ. ಮೂಲತಃ ತುಮಕೂರು ಮೂಲದವಾರದ ಶೋಭರಾಜ್ ಅವರು ಓದಿನಲ್ಲಿ ಹೆಚ್ಚಾಗಿ ಆಸಕ್ತಿ ಇಲ್ಲದ ಕಾರಣ ಸಿನಿಮಾದತ್ತ ಮುಖ ಮಾಡುತ್ತಾರೆ. ಆ ಸಂಧರ್ಭದಲ್ಲಿ ಅವರಿಗೆ ಪರಿಚಯವಾಗೋದು ನಟ ನಿರ್ಮಾಪಕ ರಘುವೀರ್. ರಘುವೀರ್ ತಾವು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ಅದೇ ಸಂಧರ್ಭದಲ್ಲಿ ಎಸ್. ನಾರಾಯಣ್ ಅವರು ಕೂಡ ಇದೇ ಹಾದಿಯಲ್ಲಿದ್ದಾಗ ಮೂವರು ಜೊತೆಗೂಡಿ ಚೈತ್ರದ ಪ್ರೇಮಾಂಜಲಿ ಚಿತ್ರ ಮಾಡುತ್ತಾರೆ. ಈ ಚಿತ್ರಕ್ಕೆ ನಾಯಕ ನಟನಾಗಿ ರಘುವೀರ್.

ವಿಲನ್ ಆಗಿ ಶೋಭರಾಜ್ ನಟಿಸುತ್ತಾರೆ. 1992 ರಲ್ಲಿ ತೆರೆಕಂಡ ಈ ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ಶೋಭರಾಜ್ ತದ ನಂತರ ತಿರುಗಿ ನೋಡಿದ್ದೇ ಇಲ್ಲ. ಇದಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ. ದೇವರಾಜ್, ಸಾಯಿ ಕುಮಾರ್, ಅವರ ಬಹುತೇಕ ಚಿತ್ರಗಳಲ್ಲಿ ನಟ ಶೋಭರಾಜ್ ನಟಿಸಿದ್ದಾರೆ. ಪೊಲೀಸ್ ಸ್ಟೋರಿ, ಲಾಕಪ್ ಡೆತ್, ಬಂಗಾರದ ಕಳಸ, ಗೋಲಿಬಾರ್,ಭಾವ ಬಾಮೈದ, ಸಿಂಹಾದ್ರಿಯ ಸಿಂಹ,ಸ್ನೇಹಲೋಕ, ಯಜಮಾನ, ಶಬ್ದವೇದಿ, ಪ್ರೀತಿಗಾಗಿ,ಜಾಕಿ ಹೀಗೆ ಕನ್ನಡದಲ್ಲಿ 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕನ್ನಡ ಜೊತೆಗೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಶೋಭರಾಜ್ ಅವರಿಗೆ ವಿಷ್ಣು ವರ್ಧನ್ ಅವರನ್ನ ಕಂಡರೆ ಪಂಚಪ್ರಾಣ.

ವಿಷ್ಣು ವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಶೋಭರಾಜ್ ಅವರಿಗೆ ವಿಷ್ಣು ವರ್ಧನ್ ಅವರಿಗೆ ಸಿನಿಮಾವೊಂದನ್ನ ನಿರ್ದೇಶನ ಮಾಡಬೇಕು ಎಂಬ ಕನಸನ್ನು ಹೊಂದಿದ್ದರಂತೆ. ಕಥೆಯನ್ನು ಕೂಡ ಸಿದ್ದಪಡಿಸಕೊಂಡಿದ್ದ ಅವರಿಗೆ ಅವರ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಂತೆ. ಇನ್ನು ನಟ ಶೋಭರಾಜ್ ಅವರು ಎಸ್.ನಾರಾಯಣ್ ಅವರ ಬಹುತೇಕ ಚಿತ್ರಗಳಲ್ಲಿ ನಟಿಸುತ್ತಿದ್ದರು. ಒಂದು ಕಾಲದಲ್ಲಿ ಬಹು ಬೇಡಿಕೆಯ ಖಳ ನಟನಾಗಿ ಸ್ಯಾಂಡಲ್ ವುಡ್ ಆಳಿದ್ದ ಶೋಭರಾಜ್ ಅವರಿಗೆ ಕನ್ನಡದಲ್ಲಿ ಇದೀಗ ಅವಕಾಶಗಳ ಕೊರತೆ ಕಾಣುತ್ತಿದೆ. ಸದ್ಯಕ್ಕೆ ಪ್ರಥಮ್ ಅವರ ನಟ ಭಯಂಕರ ಮತ್ತು ನಿಖಿಲ್ ಕುಮಾರ್ ಅವರ ರೈಡರ್ ಚಿತ್ರದಲ್ಲಿ ಶೋಭರಾಜ್ ಕಾಣಿಸಿಕೊಂಡಿದ್ದಾರೆ. ಇನ್ನು ಶೋಭರಾಜ್ ಅವರು ಸ್ವಾತಿ ಎಂಬುವರೊಟ್ಟಿಗೆ ಮದುವೆಯಾಗಿದ್ದು ಸುಂದರ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

Leave a Reply

%d bloggers like this: