ಕನ್ನಡದ ಕಿರುತೆರೆ ನಟಿಗೆ ವೇದಿಕೆ ಮೇಲೆಯೇ ತಮ್ಮನಿಂದ ಸಿಕ್ತು ವಿಶೇಷ ಗಿಫ್ಟ್

ಇತ್ತೀಚೆಗೆ ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಆರಂಭವಾಗಿ ಬಹು ಬೇಗ ಕನ್ನಡ ಕಿರುತೆರೆ ವೀಕ್ಷಕರ ಸೆಳೆದಿರುವ ಧಾರಾವಾಹಿ ಅಂದರೆ ಅದು ಕೆಂಡ ಸಂಪಿಗೆ. ಈ ಕೆಂಡ ಸಂಪಿಗೆ ಧಾರಾವಾಹಿಯು ಮನೆಯ ಯಜಮಾನ ಅಂದರೆ ಅಪ್ಪನ ಅನಾರೋಗ್ಯದ ಕಾರಣ ಇಡೀ ಮನೆಯ ಜವಾಬ್ದಾರಿ ಹೊತ್ತು ನಡೆಸಲು ಹೂವಿನ ವ್ಯಾಪಾರ ಮಾಡುವ ಹುಡುಗಿಯೊಬ್ಬಳ ಕಥೆಯಾಗಿದೆ. ಇವಳಿಗೆ ಜವಬ್ದಾರಿ ಇಲ್ಲದ ಒಬ್ಬ ತಮ್ಮ ಕೂಡ ಇರ್ತಾನೆ. ತನ್ನ ತಮ್ಮ ಚೆನ್ನಾಗಿ ಓದಿ ಒಂದೊಳ್ಳೆ ಉದ್ಯೋಗ ಗಿಟ್ಟಿಸಬೇಕು ಎಂಬ ಮಹಾದಾಸೆಯನ್ನ ಹೊಂದಿರುತ್ತಾಳೆ. ಆದರೆ ತಮ್ಮ ರಾಜಕೀಯದ ಗೀಳು ಅತ್ತಿಸಿಕೊಂಡಿರುತ್ತಾನೆ. ಒಮ್ಮೆ ಹೀಗೆ ಅಕ್ಕನಿಗೆ ಈ ಬಾರಿ ನಾನು ಪರೀಕ್ಷೆ ಪಾಸ್ ಮಾಡೇ ಮಾಡ್ತೀನಿ. ಇಲ್ಲಾಂದ್ರೆ ನೀನು ಮಾತಾಡಿಸ್ಬೇಡ ಎಂದು ಪ್ರೀತಿಯ ಅಕ್ಕನಿಗೆ ಹೇಳಿರ್ತಾನೆ.

ಆಗ ತಮ್ಮ ತನ್ನ ವಚನದಂತೆ ಪರೀಕ್ಷೆಯಲ್ಲಿ ಫೇಲ್ ಆಗ್ತಾನೆ. ಆದ ಕಾರಣ ಅಕ್ಕ ಕೂಡ ತನ್ನ ತಮ್ಮನ ಮೇಲೆ ಅಪಾರ ಪ್ರೀತಿ ಇದ್ದರು ಕೂಡ ತಮ್ಮ ಫೇಲ್ ಆದ ಅನ್ನೋ ಕಾರಣಕ್ಕೆ ಮಾತು ಬಿಡುತ್ತಾಳೆ. ಅಕ್ಕ ಸುಮನಾ ಪಾತ್ರದಲ್ಲಿ ನಟಿ ಕಾವ್ಯ ನಟಿಸುತ್ತಿದ್ದಾರೆ. ತಮ್ಮ ರಾಜೇಶ್ ಪಾತ್ರದಲ್ಲಿ ಶನಿ ಧಾರಾವಾಹಿ ಖ್ಯಾತಿಯ ನಟ ಸುನೀಲ್ ನಟಿಸಿದ್ದಾರೆ. ಹೀಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ಗೌರಿ ಗಣೇಶೋತ್ಸವ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ನಟಿ ಕಾವ್ಯ ಅವರ ನಿಜವಾದ ಸೋದರ ಕಾರ್ತಿಕ್ ಕೂಡ ಬಂದಿದ್ದಾರೆ. ಅಕ್ಕ ಕಾವ್ಯಳಿಗೆ ಕಾರ್ತಿಕ್ ಅವರು ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೀರೆ, ಬಳೆ, ಹೂ ಕೊಟ್ಟು ಅದರ ಜೊತೆಗೆ ಚಿನ್ನದ ಬ್ರೆಸ್ ಲೈಟ್ ಕೂಡ ನೀಡಿದ್ದಾರೆ.

ತಮ್ಮನ ಈ ಉಡುಗೊರೆ ಕಂಡು ನಟಿ ಕಾವ್ಯ ಅವರು ಸಖತ್ ಖುಷಿಯಾಗಿದ್ದು, ಈ ವರ್ಷ ಈ ಹಬ್ಬ ನನಗೆ ನನ್ನ ಜೀವನದ ಅತ್ಯಮೂಲ್ಯವಾದ ಕ್ಷಣ ಎಂದು ಭಾವುಕ ನುಡಿಗಳನ್ನ ನುಡಿದ್ದಾರೆ. ಇನ್ನು ನಟಿ ಕಾವ್ಯಾ ಅವರಿಗೆ ರಿಯಲ್ ಲೈಫ್ ನಲ್ಲಿ ತಮ್ಮ ಇರೋ ಕಾರಣ ಅಕ್ಕ ತಮ್ಮನ ಭಾಂಧವ್ಯ ಕಥಾ ಹಂದರ ಹೊಂದಿರೊ ಕೆಂಡ ಸಂಪಿಗೆಯಲ್ಲಿ ಅಕ್ಕನಾಗಿ ಸುಮನಾ ಪಾತ್ರ ತುಂಬ ಆಪ್ತತೆಯನ್ನ ನೀಡುತ್ತದೆಯಂತೆ. ಈ ಪಾತ್ರ ಮಾಡಲು ಅವರಿಗೆ ಕಷ್ಟ ಎನಿಸುವುದಿಲ್ಲವಂತೆ. ಒಟ್ಟಾರೆಯಾಗಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಯಲ್ ತಮ್ಮನಿಂದ ವಿಶೇಷ ಗಿಫ್ಟ್ ಪಡೆದಿರೋದು ಅವರಿಗೆ ಸಖತ್ ಖುಷಿ ತಂದಿದೆ. ಕೆಂಡ ಸಂಪಿಗೆ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ.

Leave a Reply

%d bloggers like this: