ಕನ್ನಡದ ಖ್ಯಾತ ಹಿರಿಯ ನಟನ ಪುತ್ರ ರಾಜವರ್ಧನ್ ಅವರ ಹೊಸ ಚಿತ್ರಕ್ಕೆ ನಟಿಯಾಗಿ ಎಂಟ್ರಿ ಕೊಟ್ರು ಕೊಡಗಿನ ಕುವರಿ

ಸ್ಯಾಂಡಲ್ ವುಡ್ ಖ್ಯಾತ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರನೊಟ್ಟಿಗೆ ರಿಷಬ್ ಶೆಟ್ಟಿ ಹೀರೋಯಿನ್ ಜೊತೆ ಆಗುತ್ತಿದ್ದಾರೆ. ಸದ್ಯಕ್ಕೆ ಈ ವಿಚಾರ ಚಂದನವನದಲ್ಲಿ ಭಾರಿ ಸುದ್ದಿಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಲಾಂಚ್ ಆಗಿ ಸೈಲೆಂಟಾಗಿ ಸದ್ದು ಮಾಡ್ತಿರೋ ನಟ ರಾಜವರ್ಧನ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೌದು ಕನ್ನಡದ ಖ್ಯಾತ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್. ನಟ ರಾಜವರ್ಧನ್ ಅವರು ಬಿಚ್ಚುಗತ್ತಿ ಸಿನಿಮಾದ ಮೂಲಕ ಕನ್ನಡಕ್ಕೆ ಒಬ್ಬ ಭರವಸೆಯ ನಟರಾಗಿ ಗುರುತಿಸಿಕೊಂಡರು. ಚಂದನವನಕ್ಕೆ ಫ್ಲೈ ಎಂಬ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು ಕೂಡ ಅವರಿಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಬಿಚ್ಚುಗತ್ತಿ ಸಿನಿಮಾ. ರಾಜವರ್ಧನ್ ಅವರು ಇತ್ತೀಚೆಗೆ ಗಜರಾಮ ಎಂಬ ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.

ಈ ಚಿತ್ರದ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು. ಈ ಸಿನಿಮಾಗೂ ಮುಂಚೆ ಹಿರಣ್ಯ ಎಂಬ ಮತ್ತೊಂದು ಸಿನಿಮಾದಲ್ಲಿ ರಾಜವರ್ಧನ್ ಅವರು ಫುಲ್ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಿರಣ್ಯ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಆ ಪೋಸ್ಟರ್ ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡು ಸಿನಿ ಪ್ರಿಯರಿಗೆ ಕುತೂಹಲ ಹುಟ್ಟು ಹಾಕಿದ್ದಾರೆ. ಇದೇ ಗ್ಯಾಪಲ್ಲಿ ಗಜರಾಮ ಎಂಬ ಮತ್ತೊಂದು ಪ್ರಾಜೆಕ್ಟ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ ರಾಜವರ್ಧನ್. ಯೋಗರಾಜ್ ಭಟ್ ಮತ್ತು ಸೂರಿ ನಿರ್ದೇಶನದ ಗರಡಿಯಲ್ಲಿ ಪಳಗಿರೋ ಸುನೀಲ್ ಕುಮಾರ್ ಅವರು ಗಜರಾಮ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಗಜರಾಮ ಸಿನಿಮಾಗೆ ಲೈಫ್ ಲೈನ್ ಫಿಲಂ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನರಸಿಂಹ ಮೂರ್ತಿ, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಪರ್ನಾಂಡಿಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಈ ಗಜರಾಮ ಸಿನಿಮಾ ತಂಡದಿಂದ ಹೊಸದೊಂದು ಸುದ್ಥಿ ಹೊರ ಬಿದ್ದಿದೆ.

ಅದೇನಪ್ಪಾ ಅಂದರೆ ಗಜರಾಮನಾಗಿ ಘರ್ಜಿಸಲು ಸಜ್ಜಾಗಿರೋ ರಾಜವರ್ಧನ್ ಅವರಿಗೆ ನಾಯಕಿಯಾಗಿ ತಪಸ್ವಿನಿ ಪೂಣಚ್ಚ ಆಯ್ಕೆ ಆಗಿದ್ದಾರೆ. ನಟಿ ತಪಸ್ವಿನಿ ಬೇರಾರು ಅಲ್ಲ ಈ ಹಿಂದೆ ರಿಷಬ್ ಶೆಟ್ಟಿ ಅವರ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ರಿಷಬ್ ಅವರಿಗೆ ಜೋಡಿಯಾಗಿದ್ರು. ಜ್ಯೂನಿಯರ್ ಮೊನಾಲಿಸ ಸಾಂಗ್ ನಲ್ಲಿ ಅಟ್ರಾಕ್ಟಿವ್ ಆಗಿ ಕಾಣಿಸಿಕೊಂಡಿದ್ದ ತಪಸ್ವಿನಿ ಪೂಣಚ್ಚ ಅವರು ಇದೀಗ ಗಜರಾಮ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ನಟಿ ತಪಸ್ವಿನಿ ಅವರಿಗೆ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ನಂತರ ಅನೇಕ ಕಥೆಗಳು ಬಂದರೂ ಕೂಡ ಅವುಗಳು ಅವರಿಗೆ ಮೆಚ್ಚುಗೆ ಆಗದ ಕಾರಣ ಯಾವುದೇ ಸಿನಿಮಾಗಳನ್ನ ಮಾಡಲು ಸಾಧ್ಯವಾಗಿಲ್ಲವಂತೆ. ಗಜರಾಮ ಸಿನಿಮಾದ ಕಥೆ ಕೇಳಿದಾಗ ತಪಸ್ವಿನಿ ಅವರಿಗೆ ತುಂಬ ಇಷ್ಟವಾಗಿ ತಕ್ಷಣ ಒಪ್ಪಿಕೊಂಡರಂತೆ. ಕೊಡಗು ಮೂಲದವರಾದ ತಪಸ್ವಿನಿ ಪೂಣಚ್ಚ ಅವರು ಗಜರಾಮ ಚಿತ್ರದ ಮೂಲಕ ಇದೀಗ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗಲು ಹೊರಟಿದ್ದಾರೆ.

Leave a Reply

%d bloggers like this: